LatestMain PostOut of the box

ಬೀದಿ ದೀಪದಡಿಯಲ್ಲಿ ಓದು ಬರಹ- ನೆಟ್ಟಿಗರ ಮನಗೆದ್ದ ವಿದ್ಯಾರ್ಥಿನಿ!

ವಿದ್ಯೆಗೆ ಬಡತನವಿಲ್ಲ ಎಂಬಂತೆ ವಿದ್ಯಾರ್ಥಿನಿ (Student) ಯೊಬ್ಬಳು ಬೀದಿದೀಪದಡಿ ಬರೆಯುತ್ತಾ ಕುಳಿತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಗೆದ್ದಿದೆ.

ಹೌದು. ಉತ್ತಮ ಶಿಕ್ಷಣದಿಂದ ಮಾತ್ರ ವ್ಯಕ್ತಿ ಈ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಪ್ರತಿಯೊಬ್ಬರೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅಥವಾ ಹೆಸರಾಂತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಾಕಷ್ಟು ಅದೃಷ್ಟ ಅಥವಾ ಸವಲತ್ತು ಹೊಂದಿರುವುದಿಲ್ಲ. ಬಡತನ ಅವರ ಬೆನ್ನು ಬಿಡದ ಬೇತಾಳನಂತೆ ಕಾಡುತ್ತೆ. ಈ ಮಧ್ಯೆಯೂ ವಿದ್ಯಾರ್ಥಿನಿಯೊಬ್ಬಳು ಬೀದಿ ದೀಪದ ಕೆಳಗೆ ಕೂತು ವಿದ್ಯಾರ್ಜನೆ ಮಾಡುತ್ತಿರುವುದು ಎಲ್ಲರ ಗಮನಸೆಳೆಯುವಂತೆ ಮಾಡಿದೆ. ಇದನ್ನೂ ಓದಿ: ಟೀ ನಿರಾಕರಿಸಿದ ಡಿಸಿಗೆ ಮದ್ಯ ಕುಡಿತೀರಾ ಅಂದ ಮಹಾರಾಷ್ಟ್ರ ಕೃಷಿ ಸಚಿವ – ವೀಡಿಯೋ ವೈರಲ್

 

View this post on Instagram

 

A post shared by Stutes Zone 987 (@stutes_zone_987)

ವಿದ್ಯಾರ್ಥಿನಿ ಶಾಲಾ ಮಸವಸ್ತ್ರದಲ್ಲಿಯೇ ರಸ್ತೆ ಬದಿಯಲ್ಲಿರುವ ಬೀದಿ ದೀಪದಡಿಯಲ್ಲಿ ಕುಳಿತು ಬರೆಯುತ್ತಿದ್ದಾಳೆ. ಇದರ ವೀಡಿಯೋವನ್ನು ಆ ಮಾರ್ಗದಲ್ಲಿ ಸಂಚರಿಸುತ್ತಿರುವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಆಕೆಯ ಮುಂದೆ ವಾಹನ ಚಲಿಸುತ್ತಿದ್ದರೂ ತಲೆ ಎತ್ತಿ ನೋಡದೇ ಬರೆಯುತ್ತಿರುವುದನ್ನು ಮಗ್ನಳಾಗಿರುವುದು ಕಾಣಹುದಾಗಿದೆ.

ಒಟ್ಟಿನಲ್ಲಿ ವಿದ್ಯಾರ್ಥಿನಿಯ ಶ್ರದ್ಧೆ ಹಾಗೂ ಆಕೆ ಅಧ್ಯಯನಕ್ಕೆ ಕೊಡುವ ಗಮನ ಸೋಶಿಯಲ್ ಮೀಡಿಯಾದಲ್ಲಿ ಅನೇಕರನ್ನು ಪ್ರೇರೇಪಿಸಿದೆ. ಅಲ್ಲದೆ ಈ ಪೋಸ್ಟ್ ಅನೇಕರನ್ನು ಭಾವನಾತ್ಮಕವಾಗಿಸಿದೆ. ವಿದ್ಯಾರ್ಥಿನಿ ತನ್ನ ಅಧ್ಯಯನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಕ್ಕಾಗಿ ನೆಟ್ಟಿಗರು ಆಕೆಯನ್ನು ಶ್ಲಾಘಿಸಿದ್ದಾರೆ. ಹಲವರು ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಆಸೀರ್ವದಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button