ವಾಷಿಂಗ್ಟನ್: ಅಮೆರಿಕದಲ್ಲಿ ಗ್ರೀನ್‌ಕಾರ್ಡ್ ಸಂಚಲನ ಸೃಷ್ಟಿಸಿದೆ. ಖಾಯಂ ನಿವಾಸಿ ಪ್ರಮಾಣಪತ್ರ (ಗ್ರೀನ್‌ಕಾರ್ಡ್) ಪಡೆಯಲು ಅರ್ಜಿ ಸಲ್ಲಿಸುವವರು ತಮ್ಮ ಮಾತೃದೇಶಗಳಿಗೆ ಹಿಂತಿರುಗಿ ಅಲ್ಲಿಂದಲೇ ಅಮೆರಿಕ ಕಾನ್ಸುಲೆಟ್ ಕಚೇರಿ ಮೂಲಕ ಅರ್ಜಿ ಸಲ್ಲಿಸಬೇಕು ಅಂತ ಅಮೆರಿಕ ಪೌರತ್ವ ಮತ್ತು ವಲಸೆ ವಿಭಾಗವು ಆದೇಶ ಹೊರಡಿಸಿದೆ.
ಇದರಿಂದಾಗಿ, ತಾತ್ಕಾಲಿಕ ವೀಸಾದಲ್ಲಿ ಇರುವವರು, ಅಕ್ರಮವಾಗಿ ವಾಸಿಸುತ್ತಿರುವವರು, ಗಂಡ/ಹೆAಡತಿ ಅಥವಾ ಮಕ್ಕಳ ಪ್ರಾಯೋಜಕತ್ವ ಮೂಲಕ ಕಾನೂನುಬದ್ಧ ವಲಸಿಗ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವವರು ಈ ನಿಯಮದ ಅನ್ವಯ ದೇಶ ತೊರೆಯಬೇಕಿದೆ.
ಎಚ್1ಬಿ ವೀಸಾ, ಎಲ್1 ವೀಸಾ ಹಾಗೂ ವಿದ್ಯಾರ್ಥಿ ವೀಸಾದಡಿ ಅಮೆರಿಕಕ್ಕೆ ಹೋಗಿದ್ದವರು ಅಲ್ಲಿಯೇ ಉಳಿದುಕೊಂಡು ಗ್ರೀನ್‌ಕಾರ್ಡ್ಗೆ ಅರ್ಜಿ ಸಲ್ಲಿಸಬಹುದಿತ್ತು. ಇದೀಗ ಮಾತೃದೇಶಗಳಿಗೆ ತೆರಳಿ ಅಲ್ಲಿಂದ ಅರ್ಜಿ ಸಲ್ಲಿಸಬೇಕಿದೆ.
