ಬೆಂಗಳೂರು: ಬೀದರ್ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು(Shrishailappa Bidarur) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಖಾಸಗಿ ರೆಸಾರ್ಟ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಯುವಾಗಲೇ ಶ್ರೀಶೈಲಪ್ಪ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು
Advertisement
Advertisement
ಸಭೆ ಆರಂಭವಾಗುತ್ತಿದ್ದಂತೆ ಕುಸಿದು ಬಿದ್ದು ಶ್ರೀಶೈಲಪ್ಪ ವಾಂತಿ ಮಾಡಿಕೊಂಡಿದ್ದರು. ಕಾರಿನಿಂದ ಇಳಿದು ಒಳಗೆ ಹೋಗುವಾಗಲೇ ಶ್ರೀಶೈಲಪ್ಪ ಸುಸ್ತಾಗಿದ್ದರು. ಬೆಳಿಗ್ಗೆ ತಿಂಡಿ ತಿನ್ನದೇ ಶ್ರೀಶೈಲಪ್ಪ ಬಿದರೂರು ಸಭೆಗೆ ಆಗಮಿಸಿದ್ದರು ಎನ್ನಲಾಗುತ್ತಿದೆ.
Advertisement
ಇಂದು ಆಯೋಜನೆಯಾಗಿದ್ದ ಕಾಂಗ್ರೆಸ್ ಸಭೆಯನ್ನು ರದ್ದು ಮಾಡಲಾಗಿದ್ದು, ರೆಸಾರ್ಟ್‌ನಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.