ವಾಷಿಂಗ್ಟನ್: ನಿಮ್ಮ ಮಕ್ಕಳನ್ನು ಅಮೆರಿಕಗೆ (America) ಕಳುಹಿಸಬೇಡಿ ಎಂದು ಅಮೆರಿಕದಲ್ಲಿ ಹತ್ಯೆಯಾದ ಭಾರತೀಯನ ಸಹೋದರಿ ದೇಶದ ಜನತೆಗೆ ಮನವಿ ಮಾಡಿದ್ದಾರೆ.
ಫಿಲಡೆಲ್ಫಿಯಾದಲ್ಲಿ ಕೊಲೆಯಾದ 28 ವರ್ಷದ ಭಾರತೀಯ ಅನ್ಶುಲ್ ಕುಂಚಾ ಅವರ ಸಹೋದರಿ, ಅಮೆರಿಕಗೆ ಹೋಗಲು ನನ್ನ ಸಹೋದರಿನಿಗೆ ಇಷ್ಟ ಇರಲಿಲ್ಲ. ಆದರೆ, ಕುಟುಂಬದವರು ಅವನನ್ನು ಬಲವಂತವಾಗಿ ಕಳುಹಿಸಿದ್ದರು ಎಂದು ನೊಂದು ನುಡಿದಿದ್ದಾರೆ. ಇದನ್ನೂ ಓದಿ: ಪಿಜ್ಜಾ ಆರ್ಡರ್ ನೆಪದಲ್ಲಿ ಡೆಲಿವರಿ ಬಾಯ್ ಹತ್ಯೆ – ಅಮೆರಿಕದಲ್ಲಿ ಭಾರತೀಯನ ಕಗ್ಗೊಲೆ
ಅನ್ಶುಲ್ ಅವರ ಸಹೋದರಿ ನ್ಯಾಯವನ್ನು ಕೋರಿ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ತನ್ನ ಸಹೋದರನ ಮೃತದೇಹವನ್ನು ಮರಳಿ ಭಾರತಕ್ಕೆ ತರುವಂತೆ ಒತ್ತಾಯಿಸಿದ್ದಾರೆ.
ಉನ್ನತ ಶಿಕ್ಷಣಕ್ಕಾಗಿ ಮತ್ತು ವೃತ್ತಿಜೀವನ ಕಟ್ಟಿಕೊಳ್ಳುವ ಸಲುವಾಗಿ ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸುತ್ತಿರುವ ಪೋಷಕರಿಗೆ ಅನ್ಶುಲ್ ಸಹೋದರಿ ಮನವಿಯೊಂದನ್ನು ಮಾಡಿದ್ದಾರೆ. ನನ್ನ ಸಹೋದರಿನಿಗೆ ಅಮೆರಿಕಕ್ಕೆ ಹೋಗಲು ಇಷ್ಟವಿರಲಿಲ್ಲ. ಆದರೆ ನಾವು ಅವನನ್ನು ಒತ್ತಾಯ ಮಾಡಿ ಕಳುಹಿಸಿದೆವು. ಈಗ ಅವನು ಏನಾದನು ಅಂತ ನೋಡಿ. ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸುತ್ತಿರುವ ಎಲ್ಲಾ ಪೋಷಕರಿಗೆ ಇದು ಒಂದು ಸಂದೇಶ. ನಿಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಜನಸಂಖ್ಯೆಯಲ್ಲಿ ಗಣನೀಯ ಕುಸಿತವಾಗುತ್ತಿದೆ – ಎಲಾನ್ ಮಸ್ಕ್ ಆತಂಕ
ಘಟನೆ ಏನು?
ಅಮೆರಿಕದಲ್ಲಿ ಪಾರ್ಟ್‌ಟೈಮ್ ಪಿಜ್ಜಾ (Pizza) ಡೆಲಿವರಿ ಕೆಲಸ ಮಾಡುತ್ತಿದ್ದ ತೆಲಂಗಾಣ (Telangana) ಮೂಲದ 28 ವರ್ಷದ ಯುವಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ನಕಲಿ ಪಿಜ್ಜಾ ಆರ್ಡರ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
