ಬೆಳಗಾವಿ: ಈಜಲು (Swimming) ಹೋಗಿದ್ದ ಬಾಲಕ (Boy) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ (Bailahongala) ತಾಲೂಕಿನ ವಕ್ಕುಂದ ಹೊರವಲಯದ ಮಲಪ್ರಭಾ ನದಿಯಲ್ಲಿ (Malaprabha River) ನಡೆದಿದೆ.
ಈಜಲು ತೆರಳಿದ್ದ 15 ವರ್ಷದ ಮಹೇಶ್ ಗಣಾಚಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನ ಮೃತದೇಹ ನೀರಿನಿಂದ ಹೊರತೆಗೆದು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಕಾಡಾನೆಗಳ ಉಪಟಳದಿಂದ ಕಂಗೆಟ್ಟ ಕೊಡಗಿನ ಜನಕ್ಕೆ ಈಗ ಹುಲಿಯ ಆತಂಕ
ಘಟನಾ ಸ್ಥಳಕ್ಕೆ ಬೈಲಹೊಂಗಲ ಸಿಪಿಐ ಪ್ರಮೋದ ಯಲಿಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದೆಹಲಿ ಪ್ರೊಫೆಸರ್ ಕೊಲ್ಲಲು 1,400 ಕಿಮೀ ದೂರದಿಂದ ಬಂದಿದ್ದ ದಂಪತಿ – ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
