ಮಡಿಕೇರಿ: ಈಗಾಗಲೇ ಒಂದು ಕಡೆ ಕಾಡಾನೆಗಳ ಉಪಟಳದಿಂದ ರೋಸಿಹೋಗಿರುವ ಕೊಡಗಿನ (Kodagu) ಜನಕ್ಕೆ ಈಗ ಮತ್ತೊಂದು ಕಡೆ ಹುಲಿ ಕಾಟ ಶುರುವಾಗಿದೆ. ಇದರಿಂದ ಪ್ರತಿನಿತ್ಯ ಜನ ಜೀವಭಯದಲ್ಲೇ ಓಡಾಡುವಂತಾಗಿದೆ.
ಹೌದು. ಹುಲಿ ದಾಳಿಗೆ (Tiger Attack) ಹಸು ಬಲಿಯಾದ ಘಟನೆ ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಬೊಳ್ಳ್‌ಮಾಡ್ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ನಿವಾಸಿ ಕಾಳಯ್ಯ ಎಂಬುವರಿಗೆ ಸೇರಿದ ಹಸುವನ್ನು ಹುಲಿ ಕೊಂದುಹಾಕಿದೆ.

ಹಸುವಿನ ಮೇಲೆ ದಾಳಿ ನಡೆಸಿದ ಹುಲಿ, ಬಹಳಷ್ಟು ದೂರ ಎಳೆದೊಯ್ದು ಮಾಂಸ ತಿಂದುಹಾಕಿದೆ. ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರೂ ಭಯಬೀತರಾಗಿದ್ದಾರೆ. ಘಟನೆಯ ಸಂಬಂಧ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ.
ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಗ್ರಾಮದ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
