ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ (Delhi University) ಸಹಾಯಕ ಪ್ರಾಧ್ಯಾಪಕಿ ದೇವಸ್ಮಿತಾ ಪೌಲ್ (Debosmita Paul) ನಿಗೂಢ ಹತ್ಯೆ ಪ್ರಕರಣವನ್ನ ಪೊಲೀಸರು ಮೂರೇ ದಿನಗಳಲ್ಲಿ ಭೇದಿಸಿದ್ದಾರೆ. ಆರೋಪಿಗಳಿಬ್ಬರನ್ನ ಬಂಧಿಸಿರುವ ದೆಹಲಿ ಪೊಲೀಸರು ಸ್ಫೋಟಕ ರಹಸ್ಯ ಬಯಲಿಗೆಳೆದಿದ್ದಾರೆ.
ಹೌದು. ಆಸ್ತಿ ವಿವಾದದ ಹಿನ್ನೆಲೆ ಆರೋಪಿ ದಂಪತಿಗಳಿಬ್ಬರು 1,400 ದೂರದಲ್ಲಿರುವ ಪಶ್ಚಿಮ ಬಂಗಾಳದಿಂದ ದೆಹಲಿಗೆ ಬಂದಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ದೆಹಲಿ ವಿವಿ ಸಹಾಯಕ ಪ್ರಾಧ್ಯಾಪಕಿಯ ನಿಗೂಢ ಹತ್ಯೆ

ಶಿವಾಜಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ದೇವಸ್ಮಿತಾ ಪೌಲ್ ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನ (Vasundhara Enclave) ಸತ್ಯಂ ಅಪಾರ್ಟ್ಮೆಂಟ್‌ನಲ್ಲಿ ನಿಗೂಢ ಹತ್ಯೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಬಂಗಾಳದ ಬರ್ಧಮಾನ್‌ನಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಬರ್ಧಮಾನ್ ಮೂಲ ನಿವಾಸಿಗಳಾದ ಆರೋಪಿಗಳು ಕೊಲೆಯಾದ ದೇವಸ್ಮಿತಾ ಪೌಲ್ ಅವರನ್ನ ಭೇಟಿಯಾಗುವ ನೆಪದಲ್ಲಿ ದೆಹಲಿಗೆ ಬಂದಿದ್ದರು. ಬುಧವಾರ (ಜೂ.3) ಆರೋಪಿಗಳು ಮುಖಕ್ಕೆ ಮಾಸ್ಕ್ ಧರಿಸಿ ಆಕೆಯ ಫ್ಲಾಟ್ ಹೊಕ್ಕಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 6,000 ಕೆಲಸಕ್ಕೆ ಸೇರಿದ್ದ ಇಂಜಿನಿಯರ್ ಬಳಿ 2 ಕೋಟಿ ಕ್ಯಾಶ್, 5 ಬಿಲ್ಡಿಂಗ್, 13 ಸೈಟು – ಬೆಚ್ಚಿಬಿದ್ದ ಅಧಿಕಾರಿಗಳು

ಖಾಸಗಿ ಕ್ಯಾಬ್‌ನಲ್ಲಿ ವಸುಂಧರಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಆರೋಪಿಗಳು ಒಂದಷ್ಟು ಚೀಲಗಳನ್ನೂ ಹಿಡಿದು ತಂದಿದ್ದರು. 6ನೇ ಮಹಡಿಗೆ ಹೋಗುವಾಗ ಲಿಫ್ಟ್ ಬಳಸದೇ ಮೆಟ್ಟಿಲುಗಳ ಮೂಲಕ ಬಂದಿದ್ದರು. ಯಾರಿಗೂ ಅನುಮಾನ ಬರಬಾರದು ಅಂತಲೇ ಮಗುವನ್ನ ಕರೆದೊಯ್ದಿದ್ದರು. ದೇವಸ್ಮಿತಾ ಅವರೊಂದಿಗೆ ನಗುತ್ತಲೇ ಮಾತನಾಡುತ್ತಾ ಫ್ಲಾಟ್ ಹೊಕ್ಕಿದ ದಂಪತಿ ಬಳಿಕ ತಮ್ಮ ಬಳಿ ಚೀಲದಲ್ಲಿ ತಂದಿದ್ದ ಆಯುಧಗಳನ್ನ ಬಳಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ಬಳಿಕ 30 ನಿಮಿಷ ಫ್ಲಾಟ್‌ನಲ್ಲೇ ಇದ್ದ ಕೊಲೆಗಾರರು ಬಳಿಕ ಬಟ್ಟೆ ಬದಲಾಯಿಸಿಕೊಂಡು ಆಚೆ ಬಂದಿದ್ದಾರೆ. ಅಪಾರ್ಟ್‌ಮೆಂಟ್ ಕೆಳಗೆ ಕಾಯ್ತಿದ್ದ ಕ್ಯಾಬ್‌ನಲ್ಲಿ ಹೊರಟುಹೋಗಿದ್ದಾರೆ. ಇದೆಲ್ಲದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳ ಬೆನ್ನುಹತ್ತಿದ್ದಾರೆ. ಇದನ್ನೂ ಓದಿ: ಹಿಟ್ಲರ್‌ನಿಂದ ಸ್ಫೂರ್ತಿ ಪಡೆದು ಒತ್ತುವರಿ ವಿರೋಧಿ ಪಡೆಗೆ ಹೈಡ್ರಾ ಎಂದು ಹೆಸರಿಟ್ಟಿದ್ದೇವೆ – ರೇವಂತ್ ರೆಡ್ಡಿ

ಪೊಲೀಸರು ಬೆನ್ನಟ್ಟಿದ್ದು ಹೇಗೆ?
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊದಲು ವಸತಿ ಸಂಕೀರ್ಣಕ್ಕೆ ಭೇಟಿ ನೀಡಿದ್ದ 200 ವ್ಯಕ್ತಿಗಳನ್ನ ವಿಚಾರಣೆ ನಡೆಸಿದ್ದರು. ಅದರಲ್ಲಿ 13 ಶಂಕಿತರನ್ನ ಆಯ್ಕೆ ಮಾಡಿ, ಮತ್ತೊಮ್ಮೆ ಪ್ರತ್ಯೇಕ ವಿಚಾರಣೆ ನಡೆಸಲಾಯಿತು. 7 ಪೊಲೀಸ್ ತಂಡಗಳನ್ನ ರಚಿಸಿ 4 ರಾಜ್ಯಗಳಲ್ಲಿ ತೀವ್ರ ಶೋಧ ನಡೆಸಿದ್ದರು. ಈ ವೇಳೆ ನೂರಾರು ಜನರನ್ನ ಪ್ರಶ್ನಿಸಲಾಗಿತ್ತು. ಕೊನೆಗೆ ಬರ್ಧಮಾನ್‌ನಲ್ಲಿ ಬಂಧಿಸಲಾಯಿತು
ಪೌಲ್ 2022 ರಲ್ಲಿ ಪತಿಯಿಂದ ಬೇರ್ಪಟ್ಟು 5 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಆಕೆಯ ಪತಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
