– ನನ್ನ ಕೈಲಾದ ಮಟ್ಟಿಗೆ ರಾಜ್ಯದ ಜನತೆಗೆ ಕೆಲಸ ಮಾಡ್ತೀನಿ
ಬೆಂಗಳೂರು: ಬಿಜೆಪಿ-ಜೆಡಿಎಸ್ (BJP JDS) ನಡುವೆ ಯಾವುದೇ ಬಿಕ್ಕಟ್ಟು ಬರೋದಿಲ್ಲ ಅಂತ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD DeveGowda) ತಿಳಿಸಿದರು.
2028 ರ ಚುನಾವಣೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು NDA ಅಲ್ಲಿ ಪಾರ್ಟನರ್ ಆಗಿದ್ದೇವೆ. ಮೋದಿ, ಅಮಿತ್ ಶಾ (Modi – Amit Shah) ಅವರ ಜೊತೆ ನಮ್ಮ ಸಂಬಂಧವಿದೆ. ಇದರಲ್ಲಿ ಯಾವುದೇ ಬಿಕ್ಕಟ್ಟು ಬರೋದಿಲ್ಲ.ಈ ಹೋರಾಟದಲ್ಲಿ ಯಾವುದೇ ಕ್ಲಿಷ್ಟ ಸಮಸ್ಯೆ ಬಂದರೂ ಕೂತು ಬಗೆಹರಿಸಿಕೊಂಡು ಹೋರಾಟ ಮಾಡ್ತೀನಿ ಅಂತ ದೃಢ ವಿಶ್ವಾಸ ಇದೆ ಎಂದರು.

ಮೋದಿ-ಅಮಿತ್ ಶಾ ಅವರ ಬಳಿ ನಮ್ಮ ಸಂಬಂಧ ಇರೋದ್ರೀಂದ ನನಗೆ ಯಾವುದೇ ಆತಂಕವಿಲ್ಲ. ದಕ್ಷಿಣದಲ್ಲಿ ಕಾಂಗ್ರೆಸ್ ಕೇರಳಂ, ತೆಲಂಗಾಣ, ಕರ್ನಾಟಕ ಇದೆ ಅಂತ ಹೇಳ್ತಾ ಇದ್ದರು. ಮುಂದೆ ಏನಾಗುತ್ತೆ ಅಂತ ನೋಡೋಣ. ಈಗ ನಾನು ಮಾತಾಡೊಲ್ಲ. ಆ ಸಮಯ ಬಂದಾಗ ಮಾತಾಡ್ತೀನಿ ಅಂತ ತಿಳಿಸಿದರು. ಇದನ್ನೂ ಓದಿ: ಸಿಎಂ ಆಗಿ 8 ವರ್ಷ ಕಂಪ್ಲೀಟ್ – ಮತ್ತೊಂದು ದಾಖಲೆ ಬರೆದ ಸಿದ್ದರಾಮಯ್ಯ
ಇದೇ ವೇಳೆ ಕಾರ್ಯಕರ್ತರಿಗೆ ಸಂದೇಶ ಕೊಟ್ಟ ದೊಡ್ಡಗೌಡರು, ನಾವು ನಿಷ್ಟೆಯಿಂದ ನಮ್ಮ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿ ಪಕ್ಷದ ಕೆಲಸವನ್ನ ನಿಷ್ಠೆಯಿಂದ ಮಾಡಿ. ಕುಮಾರಸ್ವಾಮಿ ಅವರು ವಹಿಸುವ ಜವಾಬ್ದಾರಿಯನ್ನ ತಾಲೂಕು, ಜಿಲ್ಲಾ ಮಟ್ಟದಲ್ಲಿ ನಿಷ್ಠೆಯಿಂದ ಮಾಡಬೇಕು. ಕಾರ್ಯಕರ್ತರು, ಶಾಸಕರಲ್ಲಿ ನಾನು ವಿನಂತಿ ಮಾಡ್ತೀನಿ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ – ನಾಳೆ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಪರಮೇಶ್ವರ್
ನನ್ನ ಕೈಲಾದ ಮಟ್ಟಿಗೆ ರಾಜ್ಯದ ಜನತೆಗೆ ಕೆಲಸ ಮಾಡ್ತೀನಿ
ಅಲ್ಲದೇ 94ನೇ ವಸಂತಕ್ಕೆ ಕಾಲಿಟ್ಟಿರೋ ದೇವೇಗೌಡರು ಜೆ.ಪಿ ನಗರದ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿ, ನನ್ನ ಕೈಲಾದ ಮಟ್ಟಿಗೆ ರಾಜ್ಯದ ಜನತೆಗೆ ಕೆಲಸ ಮಾಡ್ತೀನಿ. ಇನ್ನು ಕೆಲವು ದಿನ ಜನತೆಯ ಸಮಸ್ಯೆಗಳನ್ನ ಮುಂದಿಟ್ಟರುಕೊಂಡು ಹೋರಾಟ ಮಾಡುವ ದೃಢ ಸಂಕಲ್ಪ ಮಾಡಿದ್ದೇನೆ. ನನಗೆ 93 ಅಯ್ತು ಅಂತ ಮನೆಯಲ್ಲಿ ಕೂರೋದಿಲ್ಲ. ವ್ಹೀಲ್ ಚೇರ್ ನಲ್ಲೇ ಓಡಾಡ್ತೀನಿ ಎಂದು ಹೇಳಿದರು.
ಜನರ ಸಮಸ್ಯೆ ಇವತ್ತು ತುಂಬಾ ಹದಗೆಟ್ಟಿದೆ. ಈಗಾಗಲೇ ಸುದ್ದಿಗೋಷ್ಟಿ ಮಾಡಿ ಹೇಳಿದ್ದೇನೆ. ಮೇ 20 ರಂದು ಮತ್ತೆ ಸುದ್ದಿಗೋಷ್ಠಿ ಮಾಡಿ ಮಾತಾಡ್ತೀನಿ. ರಾಜ್ಯದ ಸಮಸ್ಯೆ ದೇಶದ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತೀನಿ ಅಂತ ತಿಳಿಸಿದರು. ಇದನ್ನೂ ಓದಿ: ಕೇರಳಂ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ವಿ.ಡಿ.ಸತೀಶನ್
68 ವರ್ಷ ರಾಜಕೀಯದಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಜನ ಎಷ್ಟು ಗುರುತಿಸುತ್ತಾರೋ ಅದು ಸಮಸ್ಯೆ ಇಲ್ಲ.ಅದರ ಹೋರಾಟ ಮಾಡೋದು ನನ್ನ ಮುಂದೆ ಇರೋದು. ಕೆಲಸವನ್ನು ನಾನು ಮಾಡ್ತೀನಿ ಅಂತ ಸ್ಪಷ್ಟಪಡಿಸಿದರು.

