ಬೆಂಗಳೂರು: ತುಮಕೂರಿನಲ್ಲಿ ನಾಳೆ ರಾಜ್ಯ ಕಾಂಗ್ರೆಸ್ ಸರ್ಕಾರದ (Karnataka Congress Government) ಸಾಧನಾ ಸಮಾವೇಶ ನಡೆಯಲಿದೆ. ಇದೇ ಸಮಾವೇಶದಲ್ಲಿ 1.52 ಲಕ್ಷ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರ ವಿತರಣೆ ಮಾಡಲಿದ್ದೇವೆ ಎಂದು ಗೃಹಸಚಿವ ಜಿ. ಪರಮೇಶ್ವರ್ (G Parameshwar) ತಿಳಿಸಿದರು.
ಮೇ 19 ರಂದು ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಲಿದೆ. ಈ ಹಿನ್ನೆಲೆ ತುಮಕೂರಿನಲ್ಲಿ ಸರ್ಕಾರದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಸರ್ಕಾರದ ಸಮಾವೇಶ ಇದೆ. ಇದೇ ಸಮಾವೇಶದಲ್ಲಿ ಸರ್ಕಾರದಿಂದ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರ ಬಂದು ಮೂರು ವರ್ಷ ಆಯ್ತು. ನಾವು ಅನೇಕ ಭರವಸೆ ಕೊಟ್ಟಿದ್ವಿ, ಈ ಮೂರು ವರ್ಷದಲ್ಲಿ ಏನೇನು ಈಡೇರಿಸಿದೀವಿ ಅಂತ ತಿಳಿಸ್ತೇವೆ ಎಂದರು. ಇದನ್ನೂ ಓದಿ: ಭಾರೀ ಮಳೆಗೆ ಅವಾಂತರ; ಮೈಸೂರು-ಶಿವಮೊಗ್ಗ, ಶಿವಮೊಗ್ಗ-ತಾಳಗುಪ್ಪ ರೈಲು ಸಂಚಾರದಲ್ಲಿ ವ್ಯತ್ಯಯ
ಇನ್ನೂ ಸಮಾವೇಶದಲ್ಲಿ ಪರಮೇಶ್ವರ್ ಶಕ್ತಿ ಪ್ರದರ್ಶನ ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲಿ ಯಾರ ಶಕ್ರಿ ಪ್ರದರ್ಶನವೂ ಇಲ್ಲ. ಸರ್ಕಾರದ ಕಾರ್ಯಕ್ರಮ ಜಾರಿ ಬಗ್ಗೆ ಮಾತ್ರ ಸಮಾವೇಶ ಮಾಡುತ್ತಿದ್ದೇವೆ. ವೈಯಕ್ತಿಕವಾಗಿ ನನಗಾಗಲಿ, ಬೇರೆಯವರಿಗಾಗಲಿ ಇದನ್ನ ಆ ರೀತಿ ನೋಡಲ್ಲ. ಈ ಸಮಾವೇಶವನ್ನ ಶಕ್ತಿ ಪ್ರದರ್ಶನ ಅಂತ ನೋಡಲ್ಲ. ನುಡಿದಂತೆ ನಡೆದಿದ್ದೇವೆ ಅಂತ ಹೇಳಲು ಹೊರಟಿದ್ದೇವೆ ಅಷ್ಟೇ. ಇದು ಸರ್ಕಾರದ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮ ಅಲ್ಲ. ಹಾಗಾಗಿ ಹೈಕಮಾಂಡ್ ನಾಯಕರನ್ನು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮಾವೇಶ ಬಳಿಕ ಸರ್ಕಾರದಲ್ಲಿ ಬದಲಾವಣೆ ವಿಚಾರ, ಬದಲಾವಣೆ ಬೇರೆ ವಿಚಾರ, ಅದೇ ಬೇರೆ ನಾವಿಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಸಮಾವೇಶ ಮಾಡ್ತಿದೀವಿ. ಅದೆಲ್ಲ ಪಕ್ಷದ ಆಂತರಿಕ ವಿಚಾರ, ಅದನ್ನ ಇದರ ಜತೆ ಬೆರೆಸಲು ಹೋಗೋದಿಲ್ಲ ಎಂದರು. ಇದನ್ನೂ ಓದಿ: ಬಿರಿಯಾನಿ ತಿನ್ನಲು ಹೋಗಿದ್ದ ವಿದ್ಯಾರ್ಥಿಗೆ ಚಾಕು ಇರಿದು ಬೈಕ್ ಕಳ್ಳತನ – ಅಪ್ರಾಪ್ತ ಸೇರಿ ಮೂವರು ಅರೆಸ್ಟ್

