ಬೆಂಗಳೂರು: ಬಿರಿಯಾನಿ ತಿನ್ನಲು ಹೋದ ವಿದ್ಯಾರ್ಥಿಗೆ ದುಷ್ಕರ್ಮಿಗಳು ಚಾಕು ಇರಿದು, ಬೈಕ್ ಕಸಿದುಕೊಂಡು ಪರಾರಿಯಾದ ಘಟನೆ ರಾಮಮೂರ್ತಿ ನಗರದ (Ramamurthy Nagar) ಬಂಜಾರ ಲೇಔಟ್‌ನಲ್ಲಿ ನಡೆದಿದೆ.
ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿಯನ್ನು ಧೀರಜ್ (21) ಎಂದು ಗುರುತಿಸಲಾಗಿದೆ. ಭಾನುವಾರ (ಮೆ 18) ಬೆಳಗಿನ ಜಾವ 3 ಗಂಟೆಗೆ ಈ ದಾಳಿ ನಡೆದಿದೆ. ಬೈಕ್‌ಗೆ ಅಡ್ಡ ಬಂದ ವಿಚಾರಕ್ಕೆ ಆರೋಪಿಗಳು ಹಾಗೂ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಚಾಕು ಇರಿಯುವ ಮಟ್ಟಕ್ಕೆ ಹೋಗಿತ್ತು.
ಚಾಕು ಇರಿತದಿಂದ ವಿದ್ಯಾರ್ಥಿಯ ಬೆನ್ನಿಗೆ ಹಾಗೂ ತೊಡೆ ಭಾಗಕ್ಕೆ ಗಾಯಗಳಾಗಿದೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಧೀರಜ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ಹಲ್ಲೆಗೊಳಗಾದ ವಿದ್ಯಾರ್ಥಿ ಬಿಬಿಎ ಓದುತ್ತಾ ಫ್ಲಿಫ್ಕಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ.
ಈ ಸಂಬಂಧ ರಾಮಮೂರ್ತಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಭುವನ್, ಮಿಥುನ್ ಸೇರಿ ಅಪ್ರಾಪ್ತ ಬಾಲಕನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

