ಚಿಕ್ಕಮಗಳೂರು: ತರೀಕೆರೆ (Tarikere) ತಾಲೂಕಿನ ಮುದುಗುಂಡಿ ತಾಂಡ್ಯದಲ್ಲಿ ನಾಯಿಯ ಗೂಡಲ್ಲಿ ಚಿರತೆಯೊಂದು (Leopard) ಲಾಕ್ ಆಗಿದ್ದು, ಅದನ್ನು ಅರಣ್ಯ ಇಲಾಖೆ (Forest Department) ಸಿಬ್ಬಂದಿ ಸೆರೆಹಿಡಿದು ಸ್ಥಳಾಂತರಿಸಿದ್ದಾರೆ.
ಕಳೆದ ರಾತ್ರಿ ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದ ಚಿರತೆ ಬೇಟೆಯಾಡುವ ಉದ್ದೇಶದಿಂದ ನಾಯಿ ಗೂಡಿಗೆ ನುಗ್ಗಿದೆ. ಅಲ್ಲಿಂದ ವಾಪಸ್ ಬರಲಾಗದೆ ಅಲ್ಲೇ ಲಾಕ್ ಆಗಿದೆ. ಮುಂಜಾನೆ ನಾಯಿ ಗೂಡಿನಲ್ಲಿ ಚಿರತೆ ಇರುವುದನ್ನು ಕಂಡು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿ, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಕ್ಕು ಗಾಯಗೊಂಡ ಹುಲಿ ಓಡಾಟ – ಪ್ರವಾಸಿಗರಿಗೆ ಎಚ್ಚರಿಕೆ
ಅರಣ್ಯ ಸಿಬ್ಬಂದಿ ಶಿವಮೊಗ್ಗದಿಂದ (Shivamogga) ತಜ್ಞರನ್ನು ಕರೆಸಿ ಚಿರತೆಗೆ ಅರಳಿಕೆ ನೀಡಿ ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಚಿರತೆಯನ್ನು ವೀಕ್ಷಿಸಲು ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಜನಸಾಮಾನ್ಯರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಹರಸಾಹ ಪಡುವಂತಾಗಿತ್ತು.
ಹಲವು ದಿನಗಳಿಂದ ನಿದ್ದೆಗೆಡಿಸಿದ್ದ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ.. ಕಾಡಾನೆ ಬಳಿಕ ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ
