ಬೀದರ್: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದು, ಹೋರಾಟ ಫಲಪ್ರದವಾಗದ ಕಾರಣ ಸೆಪ್ಟೆಂಬರ್ 27 ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ಭಾರತ್ ಬಂದ್‍ಗೆ ಕೆರೆ ನೀಡಲಾಗಿದೆ. ಈ ಬಂದ್ ಕರ್ನಾಟಕದಲ್ಲೂ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
ಇಂದು ಬೀದರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಹೋರಾಟದಲ್ಲಿ 12ನೇ ಸುತ್ತಿನ ಮಾತುಕತೆಯಾದರು ಕೂಡಾ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಈಗಾಗಲೇ ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರ ಪ್ರಾಣ ಬಲಿದಾನವಾಗಿವೆ. ಇಷ್ಟಾದ್ರು ಕೂಡಾ ಇಲ್ಲಿಯ ತನಕ ಪ್ರಧಾನಿ ಮೋದಿ ಸಮಸ್ಯೆ ಪರಿಹರಿಸುವಂತ ಕೆಲಸ ಮಾಡಿಲ್ಲ. ರೈತರ ಬೆನ್ನೆಲುಬನ್ನು ಮುರಿಯುವ ನೀಚ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ ಎಂದು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜನ ಅಸಮಾನ್ಯ, ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಉಪೇಂದ್ರ
Advertisement
Advertisement
ಸೆಪ್ಟೆಂಬರ್ 27 ರಂದು ಭಾರತ ಬಂದ್‍ಗೆ ಕರೆ ನೀಡಿದ್ದು, ಕರ್ನಾಟಕದಲ್ಲೂ ಕೂಡಾ ಸಂಪೂರ್ಣ ಬಂದ್ ಮಾಡಬೇಕು ಎಂದು ಸಭೆ ಮಾಡಿ ನಿರ್ಮಾಣ ಮಾಡಿದ್ದೇವೆ. ರೈತರು ಹಾಗೂ ಜನರನ್ನು ಮೋಸ ಮಾಡಿ ಆಡಳಿತ ಮಾಡುತ್ತೇವೆ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಮೋದಿಯವರೆ. ಈ ದೇಶದ ಜನರು ಎಚ್ಚರಗೊಂಡಿದ್ದಾರೆ. ಮುಂದಿನ ಉತ್ತರ ಪ್ರದೇಶದ ಚುನಾವಣೆಯಲ್ಲಿ ರೈತರ ಶಕ್ತಿಯನ್ನು ತೋರಿಸಬೇಕಾಗುತ್ತದೆ ಎಂದು ಕುರುಬೂರು ಶಾಂತಕುಮಾರ್ ಗುಡುಗಿದ್ದಾರೆ. ಇದನ್ನೂ ಓದಿ: ಬಾಳೆಎಲೆಯಲ್ಲಿ ಮೂಡಿದ ಮೋದಿ ಚಿತ್ರ
Advertisement