– ನಿನ್ನ 2 ಮಕ್ಕಳು ಸೇರಿ 4 ಮಕ್ಕಳ ಜೊತೆಗೆ ಸೆಟಲ್ ಆಗೋಣ ಅಂದಿದ್ದಳು
– ಔಷಧ ಕೊಟ್ಟ ಮಾರನೇ ದಿನವೇ ಸಾವು, ಸುಮಾಳ ಮೇಲೆ ಅನುಮಾನ
ಚಿಕ್ಕೋಡಿ: 2 ಕೋಟಿ ವಿಮೆ ಹಣಕ್ಕಾಗಿ (Insurance Money) ಮಾಜಿ ಸೈನಿಕನನ್ನ ಪತ್ನಿಯೇ ಕೊಲೆ ಮಾಡಿರುವ ಪ್ರಕರಣಕ್ಕೆ ಮತ್ತೊಂದು ರೋಚಕ ತಿರುವು ಸಿಕ್ಕಿದೆ. 3 ತಿಂಗಳು ಹಿಂದೆ ನಡೆದ ಮಾಜಿ ಯೋಧನ ಮರ್ಡರ್ ಕಥೆಯ ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿದೆ. ಈ ಮಧ್ಯೆ ಸೈನಿಕನ ಪತ್ನಿ ಸುಮಾಳ ಪ್ರಿಯಕರನಿಂದ (Women’s Lover) ಸ್ಫೋಟಕ ಹೇಳಿಕೆಯೊಂದು ಹೊಸ ಸಂಚಲಕ ಸೃಷ್ಟಿಸಿದೆ.
ಹೌದು. 2 ಕೋಟಿ ವಿಮೆ ಹಣಕ್ಕಾಗಿ ಸ್ವಂತ ಪತಿಯನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಧಿಸಿದಂತೆ ಆರೋಪಿ ಸುಮಾ ಮಂಜರಗಿ ಪ್ರಿಯಕರ ಪುಂಡಲೀಕ ಡೊಂಬರ್ ಸೇಲ್ಫಿ ವಿಡಿಯೋ ಹೇಳಿಕೆ ಬಿಡುಗಡೆ (Video Statement Releases) ಮಾಡಿದ್ದಾನೆ. ಇದನ್ನೂ ಓದಿ: 2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ – ಗ್ಲೂಕೋಸ್ ಬಾಟಲ್‌ನಲ್ಲಿ ವಿಷ ಹಾಕಿ ಪತ್ನಿಯಿಂದ ಹತ್ಯೆ?

ʻಘೋಡಗೇರಿಯಲ್ಲಿ ಪುಟ್ಟದೊಂದು ಎಗ್ ರೈಸ್ ಅಂಗಡಿ ಮಾಡಿಕೊಂಡಿದ್ದೆ. ಅಲ್ಲಿಗೆ ಸುಮಾ ಗಂಡ ಸಂದೀಪ್ ಬರುತ್ತಿದ್ದ. ನಿವೃತ್ತಿಯಾಗಿ ಬಂದು ಖಾಲಿ ಕೂರುವ ಬದಲು ಆತನೂ ಟೀ ಅಂಗಡಿ ಓಪನ್ ಮಾಡಿದ. ಆಳು ಸಿಗದಿದ್ದಕ್ಕೆ ನನ್ನ ಶಾಪ್ ಬಂದ್ ಮಾಡಿಸಿ ಟೀ ಅಂಗಡಿಗೆ ಕರೆದುಕೊಂಡು ಹೋದ್ರು. ಅಲ್ಲಿಗೆ ಹೋದ ಬಳಿಕ ಸಂದೀಪ್ ಪತ್ನಿ ಸುಮಾಳ ಪರಿಚಯ ಆಯ್ತು. ಇಬ್ಬರ ನಡುವೆ ಸ್ನೇಹ ಆಗಿ ಬಳಿಕ ರಿಲೇಷನ್ ಶೀಪ್ ಕೂಡ ಆಯ್ತು. ಇದನ್ನೂ ಓದಿ: 4,500 ಕೋಟಿ ರೂ. ವಂಚನೆ ಕೇಸ್; ಶಿವಾನಂದ ನೀಲಣ್ಣವರ್‌ಗೆ ಷರತ್ತುಬದ್ಧ ಜಾಮೀನು ಮಂಜೂರು
ಸುಮಾ ಬಾಕ್ಸ್‌ಗಟ್ಟಲೇ ಮದ್ಯ ಹಾಗೂ ನಿದ್ರೆ ಮಾತ್ರೆ ಮನೆಯಲ್ಲಿ ಇಟ್ಟು ಕುಡಿಸುತ್ತಿದ್ಲೂ. ಹೀಗೆ ಯಾಕೆ ಮಾಡ್ತೀರಿ ಅಂತಾ ಕೇಳಿದ್ರೇ ಗಂಡ ಸತ್ರೂ ಸಾಯಲಿ ಅಂತಿದ್ಲು. ಹುಕ್ಕೇರಿ ಜಾತ್ರೆಗೆ ಹೋಗಿ ಬರುವಾಗ ಆಕ್ಸಿಂಡೆಟ್ ಆಯ್ತು. ಸಂದೀಪ್ ಆಸ್ಪತ್ರೆಗೆ ದಾಖಲಾದಾಗ ಸುಮಾ ಕಾಲ್ ಮಾಡಿ ಹುಳುಗಳಿಗೆ ಹೊಡೆಯುವ ಔಷಧ ತಗೊಂಡು ಬಾ ಅಂದಳು. ನಾನು ಔಷಧ ಕೊಟ್ಟ ಮಾರನೇ ದಿನ ಸಂದೀಪ್ ಸತ್ತಿದ್ದ. ಆಕೆ ಹೇಳಿದ ಮಾತು ಕೇಳಿದ್ರೇ ಅನುಮಾನ ಬರುತ್ತಿದೆ. ಆತನ ಮೇಲೆ ಇನ್ಶುರೆನ್ಸ್ ಮಾಡ್ಸಿದೀನಿ. ಹಣ ಬರುತ್ತೆ ನಿನ್ನ ಎರಡು ಮಕ್ಕಳು ಸೇರಿ 4 ಮಕ್ಕಳ ಜೊತೆಗೆ ಬೆಳಗಾವಿಗೆ ಹೋಗಿ ಸೆಟ್ಲ್ ಆಗೋಣ ಅಂದಿದ್ದಳು. ನಾನು ಔಷಧ ಕೊಟ್ಟ ಮಾರನೇ ದಿನ ಸತ್ತಿದ್ದು, ಹೀಗಾಗಿ ಸಾವಿನಲ್ಲಿ ಅನುಮಾನ ಬರ್ತಿದೆ. ಸಂದೀಪ್ ಸತ್ತ ಮಾರನೇ ದಿನ ನಾನು ಕೊಟ್ಟ ಔಷಧಿ ಸೇರಿ ಬೇರೆ ಏನೇನೋ ತಂದು ಕೊಟ್ಟು ಎಲ್ಲಿಯಾದ್ರೂ ಚೆಲ್ಲು ಅಂದಿದ್ದಳು. ಇಲ್ಲಿ ಒಬ್ಬ ಸೈನಿಕನ ಸಾವಾಗಿದೆ ಅವಳಿಗೆ ಕಠಿಣ ಕ್ರಮ ಆಗಬೇಕು. ಇದರಲ್ಲಿ ನಾನೇನಾದ್ರೂ ಸುಳ್ಳು ಹೇಳಿದ್ರೂ ಜೈಲಿಗೆ ಹೋಗೋಕು ಸಿದ್ಧ. ಮರು ತಪಾಸಣೆ ಆಗಬೇಕು ಅಲ್ಲಿವರೆಗೂ ಒಂದು ರೂಪಾಯಿ ಇನ್ಶುರೆನ್ಸ್ ಹೋಗಬಾರದು ಎಂದು ಒತ್ತಾಯ ಮಾಡಿದ್ದಾನೆ.

ಪ್ರಿಯಕರನ ವಿಡಿಯೋ ಬಿಡುಗಡೆ ಬಳಿಕ ಮತ್ತೊಂದು ಅಂಶ ಪತ್ತೆಯಾಗಿದೆ. ವಿಮೆ ಹಣಕ್ಕಾಗಿ ಮಾಜಿ ಸೈನಿಕ ಸಂದೀಪ್ ನ ಪತ್ನಿ ಸುಮಾ ಹಾಗೂ ಪುಂಡಲೀಕನ ನಡುವೆ ಗಲಾಟೆ ಆಗಿರುವ ಅಂಶ ಬೆಳಕಿಗೆ ಬಂದಿದೆ. ಯೋಧನ ಸಾವಿನ ಬಳಿಕ 2 ಕೋಟಿ ಹಣದಲ್ಲಿ ಸಮನಾಗಿ ಪಾಲು ನೀಡಲು ಪುಂಡಲೀಕ ಡಿಮ್ಯಾಂಡ್ ಮಾಡಿದ್ದ. ಆಗ ಸುಮಾ ಉಲ್ಟಾ ಹೊಡದಿದ್ದಳು. ಕೊಲೆ ವಿಚಾರ ಪೊಲೀಸರ ಗಮನಕ್ಕೆ ತರುವುದಾಗಿ ಪುಂಡಲೀಕ ಬೆದರಿಕೆ ಹಾಕಿದ್ರೂ ಏನೂ ಬೇಕಾದ್ರೂ ಮಾಡಿಕೋ ಹಣ ಕೊಡಲ್ಲ ಎಂದಿದ್ದಳು. ಇದನ್ನೂ ಓದಿ: ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸ್ಕಿಡ್ – ಮಗಳನ್ನು ಕಾಲೇಜಿಗೆ ಕರೆದೊಯ್ಯುತ್ತಿದ್ದ ತಾಯಿ ಸಾವು
ಇದರಿಂದ ಮತ್ತಷ್ಟು ಆಕ್ರೋಶಗೊಂಡಿದ್ದ ಪುಂಡಲೀಕ ಸ್ನೇಹಿತರ ಜೊತೆಗೆ ಈ ವಿಷಯ ಹೇಳಿಕೊಂಡಿದ್ದಾನೆ. ಅದಕ್ಕೆ ನೀನು ಇರೋ ವಿಚಾರ ಹೇಳೂ, ಹೊರ ಬರ್ತಿಯಾ ಎಂದು ಸ್ನೇಹಿತರು ಸಲಹೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಯಮಕನಮರಡಿ ಪೊಲೀಸರ ಭೇಟಿಯಾಗಿದ್ದ ಪುಂಡಲೀಕ ಸಿಪಿಐ ಜಾವೇದ್ ಮುಷಾಪುರಿ ಮುಂದೆ ವಿವರಣೆ ನೀಡಿದ್ದ. ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಸುಮಾ ಕರೆದು ವಿಚಾರಣೆ ಮಾಡಿದಾಗ ಸುಮಾ ಮತ್ತು ಪುಂಡಲೀಕ ತಪ್ಪೊಪ್ಪಿಕೊಂಡಿದ್ದರು.
ಇಬ್ಬರ ಹೇಳಿಕೆ ಆಧರಿಸಿ ಹೂತಿದ್ದ ಶವ ತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಮಾಡಿಸಿ, ಎಫ್‌ಎಸ್‌ಎಲ್‌ಗೆ ಅಂಗಾಂಗ ರವಾನೆ ಮಾಡಲಾಗಿದೆ. ಪುಂಡಲೀಕ ಮತ್ತು ಸುಮಾ ಇಬ್ಬರನ್ನ ಯಮಕನಮರಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
