ನವದೆಹಲಿ: ವೈಭವ್ ಸೂರ್ಯವಂಶಿಯನ್ನು(Vaibhav Sooryavanshi) ಹೊಗಳಿ ತಲೆಗೆ ಹತ್ತಿಸಬೇಡಿ. ಯುವ ಆಟಗಾರನನ್ನು ಇಷ್ಟು ಬೇಗ ಅತಿಯಾಗಿ ಹೊಗಳಬೇಡಿ ಎಂದು ಮಾಜಿ ಟೀಮ್ ಇಂಡಿಯಾ ನಾಯಕ ಕಪಿಲ್ ದೇವ್(Kapil Dev) ನೇರ ಮಾತುಗಳಲ್ಲಿ ಎಚ್ಚರಿಸಿದ್ದಾರೆ.
ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಸಚಿನ್ ತೆಂಡೂಲ್ಕರ್ (Sachin Tendulkar) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರಂತಹ ದಿಗ್ಗಜರಿಗೆ ಹೋಲಿಸುತ್ತಿರುವುದರ ಬಗ್ಗೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫುಟ್‌ಬಾಲ್ ಜಗತ್ತಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಕ್ರಿಸ್ಟಿಯಾನೊ ರೊನಾಲ್ಡೊ ಸಹೋದರಿ

ಮಾಧ್ಯಮದ ಜೊತೆ ಮಾತನಾಡಿದ ಅವರು, ವೈಭವ್ ಇನ್ನು ಕೇವಲ ಹುಡುಗ. ಕರಿಯರ್‌ನ ಆರಂಭದಲ್ಲೇ ಮಾಧ್ಯಮಗಳು ಮತ್ತು ಅಭಿಮಾನಿಗಳು ಆತನನ್ನು ಅತಿಯಾಗಿ ಹೊಗಳಿ, ಆಕಾಶಕ್ಕೆ ಏರಿಸುವುದನ್ನು ನಿಲ್ಲಿಸಬೇಕು. ಇಂತಹ ಅತಿಯಾದ ಹೈಪ್ ಆಟಗಾರನ ಮೇಲೆ ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ದಶಕಗಳ ಕಾಲ ಸಾಧನೆ ಮಾಡಿ ಆ ಸ್ಥಾನಕ್ಕೆ ತಲುಪಿದ್ದಾರೆ. ಈಗ ತಾನೆ ಕೃಷಿ ಆರಂಭಿಸುತ್ತಿರುವ ಯುವಕನನ್ನು ಆ ದಿಗ್ಗಜರಿಗೆ ಹೋಲಿಸುವುದು ಸರಿಯಲ್ಲ. ಆತನಿಗೆ ತನ್ನದೇ ಆದ ರೀತಿಯಲ್ಲಿ ಬೆಳೆಯಲು ಬಿಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಮುಂಬೈ ತೊರೆದು ಬೆಂಗಳೂರಿಗೆ ಹಾರ್ದಿಕ್ ಪಾಂಡ್ಯ ಶಿಫ್ಟ್
