ತಿರುವನಂತಪುರಂ: ಮದುವೆ ಎಂದರೆ ದುಬಾರಿ ರೇಷ್ಮೆ ಸೀರೆ, ಮೈತುಂಬಾ ಚಿನ್ನದ ಆಭರಣಗಳು, ಅದ್ಧೂರಿ ಸಂಭ್ರಮ ಎಂಬುದು ಸಾಮಾನ್ಯ ಕಲ್ಪನೆ. ಆದರೆ ಈಗ ಯುವ ಪೀಳಿಗೆ ಈ ಸಂಪ್ರದಾಯಕ್ಕೆ ಹೊಸ ರೂಪ ನೀಡುತ್ತಿದೆ. `ನೋ ಗೋಲ್ಡ್, ನೋ ಜ್ಯುವೆಲ್ಲರಿ ವೆಡ್ಡಿಂಗ್’ (No Gold, No jewelry Wedding) ಎಂಬ ಹೊಸ ಪರಿಕಲ್ಪನೆ ಸೋಷಿಯಲ್ ಮೀಡಿಯಾದಲ್ಲಿ(Social media) ಟ್ರೆಂಡ್ ಕ್ರಿಯೇಟ್(Trending News) ಮಾಡಿದೆ.
ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಕೇರಳದ ಮದುವೆಯ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಈ ಮದುವೆಯಲ್ಲಿ ವಧು ಒಂದೇ ಒಂದು ಗ್ರಾಂ ಚಿನ್ನವೂ ಧರಿಸಿಲ್ಲ. ಅಷ್ಟೇ ಅಲ್ಲ, ಯಾವುದೇ ಆರ್ಟಿಫಿಷಿಯಲ್ ಜ್ಯುವೆಲ್ಲರಿಯನ್ನೂ ಧರಿಸದೇ ಸರಳವಾಗಿ ಮದುವೆಯಾಗಿದ್ದಾರೆ.
ವಧು ಕೆಂಪು ಬಣ್ಣದ ಸೀರೆ, ಗ್ರ‍್ಯಾಂಡ್ ವರ್ಕ್‌ನ ಬ್ಲೌಸ್ ಹಾಗೂ ದುಪಟ್ಟಾ ಧರಿಸಿದ್ದು, ಸುಂದರವಾಗಿ ಮೇಕಪ್ ಮಾಡಿಕೊಂಡಿದ್ದರೂ, ಕಿವಿಯೋಲೆ ಸೇರಿದಂತೆ ಯಾವುದೇ ಆಭರಣ ಧರಿಸಿರಲಿಲ್ಲ. ಈ ಸರಳ ಮದುವೆಯ ವಿಡಿಯೋ ಈಗ ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದೆ.
ಭಾರತದಲ್ಲಿ, ಅದರಲ್ಲೂ ಕೇರಳದ ಮುಸ್ಲಿಂ ಸಮುದಾಯದಲ್ಲಿ ಮದುವೆಯ ವೇಳೆ ವಧುವಿಗೆ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ನೀಡುವ ಸಂಪ್ರದಾಯ ಇದೆ. ಇಂತಹ ಪರಿಸ್ಥಿತಿಯಲ್ಲೂ ಯಾವುದೇ ಚಿನ್ನವಿಲ್ಲದೆ ಮದುವೆಯಾಗಿರುವ ಈ ಜೋಡಿ ಎಲ್ಲರ ಗಮನ ಸೆಳೆದಿದೆ.ಇದನ್ನೂ ಓದಿ: ಕೋಟ್ಯಂತರ ರಾಮಭಕ್ತರಿಗೆ ನೋವಾಗಿದೆ: ಮೌನ ಮುರಿದ ಆರ್‌ಎಸ್‌ಎಸ್
ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು `ಮದುವೆ ಅಂದ್ರೆ ಪ್ರೀತಿ ಮುಖ್ಯ ಚಿನ್ನ ಅಲ್ಲ’, ‘ಇಂತಹ ಸರಳ ಮದುವೆಗಳು ಹೆಚ್ಚಾಗಬೇಕು’ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಧುವಿನ ನಿರ್ಧಾರವನ್ನ ಬೆಂಬಲಿಸಿದ ಪೋಷಕರು ಮತ್ತು ವರನಿಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. `ನೋ ಗೋಲ್ಡ್, ನೋ ಜ್ಯುವೆಲ್ಲರಿ ವೆಡ್ಡಿಂಗ್’ ಈಗ ಯುವಜನರಲ್ಲಿ ಹೊಸ ಟ್ರೆಂಡ್ ಆಗಿ ಬೆಳೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.ಇದನ್ನೂ ಓದಿ: ʻಆಕಾಶ್ ತರಂಗ್ʼ ಸೇರಿ 52,000 ಕೋಟಿ ರೂ.ಗಳ ರಕ್ಷಣಾ ಸಾಮಗ್ರಿ ಖರೀದಿಗೆ ಅಸ್ತು
