ನ್ಯೂಯಾರ್ಕ್: ಪೋರ್ಚುಗಲ್‌ನ ಸ್ಟಾರ್ ಫುಟ್‌ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೋ (Cristiano Ronaldo) ಸಹೋದರಿ ಕಟಿಯಾ ಅವೆರೋ (Katia Aveiro), ಫುಟ್‌ಬಾಲ್ ಜಗತ್ತಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. 2026ರ ಫಿಫಾ ವಿಶ್ವಕಪ್ ರೊನಾಲ್ಡೊಗೆ ಕೊನೆಯ ಟೂರ್ನಿಯಾಗಬಹುದು ಎಂದಿದ್ದಾರೆ. ಫುಟ್‌ಬಾಲ್ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಪೋರ್ಚುಗಲ್ ನಾಯಕ ವಿದಾಯ ಹೇಳುವ ಬಗ್ಗೆ ಸುಳಿವು ನೀಡಿದ್ದಾರೆ.
ಗುರುವಾರ ರಾತ್ರಿ (ಸ್ಥಳೀಯ ಸಮಯ) ಕ್ರೊಯೇಷಿಯಾ ವಿರುದ್ಧ ಪೋರ್ಚುಗಲ್‌ನ 32 ನೇ ಸುತ್ತಿನ ಹಣಾಹಣಿಗೆ ಮುಂಚಿತವಾಗಿ ಟೊರೊಂಟೊದ ಬಿಎಂಒ ಫೀಲ್ಡ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಟಿಯಾ, ರೊನಾಲ್ಡೊ ತನ್ನ ಅಂತರರಾಷ್ಟ್ರೀಯ ಪ್ರಯಾಣದ ಅಂತ್ಯವನ್ನು ಸಮೀಪಿಸುತ್ತಿದ್ದಾರೆ ಎಂಬುದು ನನ್ನ ನಂಬಿಕೆ ಎಂದಿದ್ದಾರೆ. ಇದನ್ನೂ ಓದಿ: FiFA: ಕ್ರೊಯೇಷಿಯಾ ವಿರುದ್ಧ ಪೋರ್ಚುಗಲ್‌ಗೆ 2-1 ಅಂತರದ ರೋಚಕ ಜಯ – ಅಂತಿಮ 16ರ ಸುತ್ತಿಗೆ ಎಂಟ್ರಿ
ನನಗಿರುವ ಮಾಹಿತಿಯ ಪ್ರಕಾರ ರೊನಾಲ್ಡೊ ವಿದಾಯ ಹೇಳಬಹುದು. ಅದನ್ನು ನೀವು ಆನಂದಿಸಿ. ಅವರು ಇಂದು ವಿದಾಯ ಹೇಳುತ್ತಿಲ್ಲ, ಆದರೆ ಶೀಘ್ರದಲ್ಲೇ ಹೇಳುತ್ತಾರೆಂದು ತಿಳಿಸಿದ್ದಾರೆ. 1,000 ವೃತ್ತಿಜೀವನದ ಗೋಲುಗಳ ಮೈಲಿಗಲ್ಲನ್ನು ತಲುಪಿದ ನಂತರ ರೊನಾಲ್ಡೊ ನಿವೃತ್ತರಾಗುತ್ತಾರೆಯೇ ಎಂಬ ಪ್ರಶ್ನೆಗೆ ಕಟಿಯಾ ಪ್ರತಿಕ್ರಿಯಿಸಿದ್ದಾರೆ.
1,000 ಗೋಲುಗಳ ನಂತರ ನಿವೃತ್ತಿ? ಹೌದು, ನಾನು ರಾಷ್ಟ್ರೀಯ ತಂಡದ ಬಗ್ಗೆ ಮಾತನಾಡುತ್ತಿದ್ದೇನೆ. ವಿಶ್ವಾಸಾರ್ಹ ಮೂಲದಿಂದ ನನಗೆ ದೊರೆತ ಮಾಹಿತಿಯ ಪ್ರಕಾರ, ಇದು (ವಿಶ್ವಕಪ್) ಅವರ ಕೊನೆಯ ನೃತ್ಯ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: FIFA ವಿಶ್ವಕಪ್: ಟೂರ್ನಮೆಂಟ್‌ನ ನಾಕೌಟ್ ಹಂತದಲ್ಲಿ ಅತಿ ಹೆಚ್ಚು ಗೋಲ್ – ರೊನಾಲ್ಡೊ ದಾಖಲೆ ಮುರಿದ ಎಂಬಾಪೆ
41 ವರ್ಷದ ರೊನಾಲ್ಡೊ ಪೋರ್ಚುಗಲ್‌ನ ಸಾರ್ವಕಾಲಿಕ ಪ್ರಮುಖ ಆಟಗಾರ ಮತ್ತು ಗೋಲ್ ಸ್ಕೋರರ್. ಐದು ಬಾರಿ ಬ್ಯಾಲನ್ ಡಿ’ಓರ್ ವಿಜೇತರಾಗಿದ್ದಾರೆ. ತಮ್ಮ ದೇಶವನ್ನು ಅನೇಕ FIFA ವಿಶ್ವಕಪ್‌ಗಳು ಮತ್ತು UEFA ಯುರೋಪಿಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರತಿನಿಧಿಸಿದ್ದಾರೆ. ಪೋರ್ಚುಗಲ್, UEFA ಯುರೋ 2016 ಪ್ರಶಸ್ತಿಯನ್ನು ಮತ್ತು 2019 ರಲ್ಲಿ ಉದ್ಘಾಟನಾ UEFA ನೇಷನ್ಸ್ ಲೀಗ್ ಅನ್ನು ಎತ್ತಿ ಹಿಡಿಯಲು ಸಹಾಯ ಮಾಡಿದ್ದಾರೆ.
