2026ರ ಫಿಫಾ ವಿಶ್ವಕಪ್‌ನಲ್ಲಿ (FIFA World Cup 2026) ಫ್ರಾನ್ಸ್‌ನ ಸ್ಟಾರ್ ಕೈಲಿಯನ್ ಎಂಬಾಪೆ (Kylian Mbappe) ಮತ್ತೊಂದು ದಾಖಲೆ ಬರೆದಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಟೂರ್ನಮೆಂಟ್‌ನ ನಾಕೌಟ್ ಹಂತದಲ್ಲಿ 10 ಗೋಲುಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫ್ರಾನ್ಸ್ 32 ರ ಸುತ್ತಿನಲ್ಲಿ ಸ್ವೀಡನ್ ಅನ್ನು 3-0 ಅಂತರದಿಂದ ಸೋಲಿಸಿತು. ತನ್ನ ಎರಡು ಗೋಲುಗಳೊಂದಿಗೆ, ಎಂಬಾಪೆ ಟೂರ್ನಮೆಂಟ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜರ್ಮನಿಯ ಐಕಾನ್ ಮಿರೋಸ್ಲಾವ್ ಕ್ಲೋಸ್ ಅವರನ್ನು ಹಿಂದಿಕ್ಕಿದರು. ಇದು ಅವರ ಒಟ್ಟಾರೆ ಗೋಲುಗಳ ಸಂಖ್ಯೆಯನ್ನು 18 ಕ್ಕೆ ಏರಿಸಿತು. ಎರಡು ಗೋಲುಗಳೊಂದಿಗೆ ಎಂಬಾಪೆ ಈಗ ವಿಶ್ವಕಪ್ ನಾಕೌಟ್‌ಗಳಲ್ಲಿ 10 ಗೋಲುಗಳನ್ನು ಗಳಿಸಿದ್ದಾರೆ. ಆ ಮೂಲಕ ನಂ.1 ಸ್ಥಾನಕ್ಕೆ ಏರಿದ್ದಾರೆ. ಇದನ್ನೂ ಓದಿ: FIFA ವಿಶ್ವಕಪ್ ‘ಪವರ್ ರ‍್ಯಾಂಕಿಂಗ್’ನಲ್ಲಿ ಮೆಸ್ಸಿ ನಂ.2 – ರೊನಾಲ್ಡೊ 79ನೇ ಸ್ಥಾನಕ್ಕೆ ಕುಸಿತ
Kylian Mbappé has become the first player in World Cup history to score 10 goals in the knockout stage of the tournament 👏🇫🇷
He is writing an incredible World Cup legacy 🙌 pic.twitter.com/ZoU1jRjR8w
— OneFootball (@OneFootball) June 30, 2026
FIFA ವಿಶ್ವಕಪ್‌ನ ನಾಕೌಟ್ ಹಂತಗಳಲ್ಲಿ ಎಂಬಾಪೆ 10 ಗೋಲುಗಳನ್ನು ಗಳಿಸಿದ್ದಾರೆ. ಆ ಮೂಲಕ, ತಲಾ 8 ಗೋಲುಗಳನ್ನು ಗಳಿಸಿರುವ ಬ್ರೆಜಿಲ್‌ನ ರೊನಾಲ್ಡೊ ನಜಾರಿಯೊ ಮತ್ತು ಲಿಯೊನಿಡಾಸ್‌ರನ್ನು ಹಿಂದಿಕ್ಕಿದ್ದಾರೆ. ಈ ಮೂವರ ನಂತರದ ಸ್ಥಾನದಲ್ಲಿ ಫ್ರಾನ್ಸ್‌ನ ಜಸ್ಟ್ ಫಾಂಟೈನ್ ಮತ್ತು ಬ್ರೆಜಿಲ್‌ನ ಪೀಲೆ ಇದ್ದಾರೆ. ಅವರು ಟೂರ್ನಮೆಂಟ್‌ನ ನಾಕೌಟ್ ಹಂತಗಳಲ್ಲಿ ತಲಾ 7 ಗೋಲುಗಳನ್ನು ಗಳಿಸಿದ್ದಾರೆ.
ಫಿಫಾ ವಿಶ್ವಕಪ್ ಇತಿಹಾಸದಲ್ಲಿ 19 ಸ್ಟ್ರೈಕ್‌ಗಳೊಂದಿಗೆ ಸಾರ್ವಕಾಲಿಕ ಅಗ್ರ ಗೋಲ್ ಸ್ಕೋರರ್ ಆಗಿರುವ ಲಿಯೋನೆಲ್ ಮೆಸ್ಸಿ ವಿಷಯಕ್ಕೆ ಬಂದರೆ, ಅವರು ಸ್ಪರ್ಧೆಯ ನಾಕೌಟ್ ಪಂದ್ಯಗಳಲ್ಲಿ ಕೇವಲ 5 ಗೋಲುಗಳನ್ನು ಮಾತ್ರ ಗಳಿಸಿದ್ದಾರೆ. ಆಶ್ಚರ್ಯಕರವಾಗಿ, ಅವರ ಪ್ರತಿಸ್ಪರ್ಧಿ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಒಂದು ನಾಕೌಟ್ ಗೋಲು ಹೊಂದಿಲ್ಲ. ಇದನ್ನೂ ಓದಿ: ಮೆಸ್ಸಿ ಫ್ರೀ-ಕಿಕ್ ಕಮಾಲ್; ಜೋರ್ಡನ್ ವಿರುದ್ಧ ಅರ್ಜೆಂಟೀನಾಗೆ 3-1 ಅಂತರದ ಗೆಲುವು
