ಹಾಸನ: ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು (Car) ಪಲ್ಟಿಯಾದ ಪರಿಣಾಮ ವೈದ್ಯ (Doctor) ಸಣ್ಣಪುಟ್ಟ ಗಾಯಗೊಂಡು ಪಾರಾಗಿರುವ ಘಟನೆ ಹಾಸನ (Hassan) ಜಿಲ್ಲೆ ಆಲೂರು (Alur) ತಾಲೂಕಿನ ಪಾಳ್ಯ ಬಳಿ ನಡೆದಿದೆ.
ಹಾಸನ ನಗರದ ಜನಪ್ರಿಯ ಆಸ್ಪತ್ರೆ ಮಾಲೀಕ ಹಾಗೂ ವೈದ್ಯ ಅಬ್ದುಲ್ ಬಶೀರ್ ಪುತ್ರ ವೈದ್ಯ ಡಾ.ಶಾರುಖ್ ಅಬ್ದುಲ್ಲಾ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಅಪಘಾತ ಸಂಭವಿಸಿದೆ. ಮೂರು ಪಲ್ಟಿ ಹೊಡೆದು ರಸ್ತೆ ಬದಿಗೆ ಕಾರು ಉರುಳಿದೆ. ಇದನ್ನೂ ಓದಿ: ರಾತ್ರಿಪೂರ್ತಿ ರಿಪೇರಿ, ಕೊನೆಗೂ ರೈಲು ತಯಾರಿ – ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬ್ರಿಟಿಷ್ ಕಾಲದ ಸಂಪ್ರದಾಯಗಳಿಗೆ ವಿದಾಯ – ಭಾರತೀಯ ಸೇನೆಯ ಹೊಸ ಸಮವಸ್ತ್ರ ನಿಯಮಾವಳಿಯಲ್ಲಿ ಏನಿದೆ?
