ರಾಮನಗರ: ಸಂಸದ ಡಿ.ಕೆ.ಸುರೇಶ್ (D. K. Suresh) ಹಾಗೂ ಸಚಿವ ಸೋಮಣ್ಣನವರು (V.Somanna) ಗುಪ್ತ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದ್ದಾರೆ.
ಕನಕಪುರ (Kanakapura) ತಾಲೂಕಿನ ರಾಯಸಂದ್ರದಲ್ಲಿ ಕುವೆಂಪು ಸಂಯುಕ್ತ ವಸತಿ ಬಡಾವಣೆಯ ಮುಖ್ಯದ್ವಾರ ಉದ್ಘಾಟನೆಗೆಂದು ವಿ.ಸೋಮಣ್ಣ ಹಾಗೂ ಡಿ.ಕೆ.ಸುರೇಶ್ ಆಗಮಿಸಿದ್ದರು. ಈ ವೇಳೆ ಮಾಧ್ಯಮ ಹಾಗೂ ಆಪ್ತರನ್ನು ದೂರವಿಟ್ಟು ಯಾವುದೋ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಡಿ.ಕೆ.ಸುರೇಶ್ ಅವರು ಸಚಿವ ಸೋಮಣ್ಣನವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಇದನ್ನೂ ಓದಿ: ನಾನು ಸರಳ, ಸಜ್ಜನ ರಾಜಕಾರಣಿ, ಹಣ ವಾಪಸ್ ಪಡೆದೇ ಪಡೀತಿನಿ – ಮಾಡಾಳ್
Advertisement
Advertisement
ಮಾಧ್ಯಮ ಹಾಗೂ ಆಪ್ತರಿಂದ ದೂರ ನಿಂತು ಈ ಇಬ್ಬರು ನಾಯಕರು ಆಪ್ತ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು. ಸೋಮಣ್ಣ ಮತ್ತು ಬಿಜೆಪಿ ನಾಯಕರ ಮಧ್ಯೆ ಸಂಬಂಧ ಹಳಸಿದ್ದು ಅವರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಈ ಮಧ್ಯೆ ಸುರೇಶ್ ಅವರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಹಿಟ್ಲರ್ ಪಕ್ಷ ಎಂದು ಕರೆಸಿಕೊಳ್ಳಲು ನಮಗೆ ಹೆಮ್ಮೆಯಿದೆ- ಕಾಂಗ್ರೆಸ್‌ಗೆ ವಿಜಯೇಂದ್ರ ಟಾಂಗ್
Advertisement