ಬೆಂಗಳೂರು: ದೇವೇಗೌಡರಿಗೆ (HD Deve Gowda) ಬಿಜೆಪಿ (BJP) ಅವರು ರಾಜ್ಯಸಭೆ (Rajya Sabha) ಟಿಕೆಟ್ ಕೊಡಲಿಲ್ಲ ಅಂತ ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಕೊಡಿ ಅಂತ ಬಿಜೆಪಿ ಅವರಿಗೆ ನಾವು ಕೇಳಿರಲಿಲ್ಲ. ಜನರ ಆಶಯ ಮತ್ತೆ ದೇವೇಗೌಡರು ಹೋಗುತ್ತಾರೆ ಅಂತ ಇತ್ತು. ಜನರ ಪರ ಅವರು ಮಾತನಾಡುತ್ತಾರೆ ಅಂತ ಇತ್ತು. ನಾವು ಟಿಕೆಟ್ ಕೇಳಿಲ್ಲ. ಇದರಿಂದ ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು. ಇದನ್ನೂ ಓದಿ: ನನಗೆ ಕೊಟ್ಟಿರೋ ಖಾತೆ ಬಗ್ಗೆ ಅಸಮಾಧಾನ ಇಲ್ಲ: ಬೈರತಿ ಸುರೇಶ್
2028ಕ್ಕೆ ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗುತ್ತೇವೆ. ನಾವು ಕೇಳಿ ಅವರು ಕೊಟ್ಟಿರಲಿಲ್ಲ ಅಂದಿದ್ದರೆ ಅಸಮಾಧಾನ ಇರುತ್ತಿತ್ತು. ನಾವು ಕೇಳೇ ಇಲ್ಲ. ಯಾವುದೇ ಅಸಮಾಧಾನ ಇಲ್ಲ. ಮೈತ್ರಿಗೆ ಏನು ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅದೊಂದು ತಪ್ಪಿನಿಂದ 40 ದಿನ ಬೆಡ್ ರೆಸ್ಟ್‌ಗೆ ಜಾರಿದ ರಕುಲ್ ಪ್ರೀತ್ ಸಿಂಗ್
