ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ಮೊಬೈಲ್ ಬಳಸಿದ ಆರೋಪದ ಹಿನ್ನೆಲೆ ಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲೇ ಸ್ಪೆಷಲ್ ಕ್ಲಾಸ್ (Parappana Agrahara Jail) ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಬೇರೆ ಬ್ಯಾರಕ್‌ಗಳಿಗೆ ಸಾಮಾನ್ಯವಾಗಿ ಭೇಟಿ ನೀಡಿದ ಅವರು, ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮಾತ್ರ ಸುಮಾರು 10ರಿಂದ 12 ನಿಮಿಷಗಳ ಕಾಲ ವಿಶೇಷವಾಗಿ ಮಾತನಾಡಿದ್ದಾರೆ. ಈ ವೇಳೆ ಮೊಬೈಲ್ ಬಳಕೆ ವಿಚಾರಕ್ಕೆ ಅಲೋಕ್ ಕುಮಾರ್ ಅವರು ಪ್ರಜ್ವಲ್ ರೇವಣ್ಣ ಮೇಲೆ ಗರಂ ಆಗಿದ್ದಾರೆ. ಅವರಿಬ್ಬರ ನಡುವೆ ಇದೇ ವಿಚಾರಕ್ಕೆ ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಶೋಕ ಧಾಮ ದೇವಾಲಯದಲ್ಲಿ ಕಾಲ್ತುಳಿತ – 7 ಮಂದಿ ದುರ್ಮರಣ; ಡಜನ್‌ಗೂ ಹೆಚ್ಚು ಮಂದಿಗೆ ಗಾಯ
ಅಲೋಕ್ ಕುಮಾರ್ ಕೇಳಿದ್ದು – ಪ್ರಜ್ವಲ್ ರೇವಣ್ಣ ಹೇಳಿದ್ದು
ಅಲೋಕ್ ಕುಮಾರ್: ನಿನ್ನಿಂದ ಇಡೀ ಇಲಾಖೆ ಮರ್ಯಾದೆ ಹಾಳಾಗಿದೆ.
ಡಿಜಿಪಿ: ನನ್ನ ಕೆರಿಯರ್‌ನಲ್ಲಿ ನನಗೆ ಯಾವಾಗಲೂ ಇಷ್ಟು ಬೇಜಾರಾಗಿರಲಿಲ್ಲ. ನಾನು ನಿಮ್ಮಿಂದ ತಲೆ ತಗ್ಗಿಸುವಂತಾಯ್ತು.
ಡಿಜಿಪಿ: ಇನ್ಮುಂದೆ ಆದ್ರೂ ನೆಟ್ಟಗಿರಿ, ಜೈಲ್ ನಿಯಮಾವಳಿ ಪಾಲಿಸಬೇಕು.
ಪ್ರಜ್ವಲ್ ರೇವಣ್ಣ: ಇಲ್ಲ ಸಾರ್, ನಾನೇನು ಮಾಡಿಲ್ಲ ಸಾರ್.
ಪ್ರಜ್ವಲ್ ರೇವಣ್ಣ: ನಾನೇನು ಮಾಡಿಲ್ಲ ಸಾರ್.
ಡಿಜಿಪಿ: ನನಗೆಲ್ಲಾ ಗೊತ್ತಿದೆ, ಸಾಕು ನಿಲ್ಸಿ ನಿಮ್ ಡ್ರಾಮಾ. ನಿಮಗೆ ಮೊಬೈಲ್ ಕೊಟ್ಟವರಾರು..?
ಡಿಜಿಪಿ: ನೀವು ಹೇಳದಿದ್ರೆ ಬೇರೆ ಆ್ಯಕ್ಷನ್ ತಗೊಬೇಕಾಗುತ್ತೆ.
ಡಿಜಿಪಿ: ನೆಕ್ಸ್ಟ್ ಈ ರೀತಿ ಆದ್ರೆ, ಮೊಬೈಲ್ ಕಂಡುಬಂದ್ರೆ ನಾನು ಸುಮ್ಮನಿರೊಲ್ಲ. ಇದನ್ನೂ ಓದಿ: ಟೆಂಡರ್‌ಗಳಲ್ಲಿ 2%, 3%, 4% ಕಮಿಷನ್ ಕೇಳ್ತಿದ್ದಾರೆ – ವಿಜಯ್ ಸರ್ಕಾರದ ವಿರುದ್ಧ ಅಣ್ಣಾಮಲೈ ಭ್ರಷ್ಟಾಚಾರ ಬಾಂಬ್
