ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆಗೆ ಯತ್ನ ಪ್ರಕರಣದಲ್ಲಿ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜು (Gottigere Manju) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಹುಳಿಮಾವು ಟ್ರಾಫಿಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ ಹಿನ್ನೆಲೆ ಖಾಸಗಿ ಹೋಟೆಲ್‌ನಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಪೊಲೀಸ್ ಮೇಲೆ ಜೆಡಿಎಸ್ ನಾಯಕನ ದರ್ಪ
ಅರುಣ್ ಎಂಬ ಟ್ರಾಫಿಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಮಂಜು ಅವರು ಯತ್ನಿಸಿದ್ದರೆಂಬ ಆರೋಪ ಇತ್ತು. ಸಿಬ್ಬಂದಿ ಜೊತೆ ಜಗಳ ಮಾಡುತ್ತಿದ್ದ ವೀಡಿಯೋ ಹರಿದಾಡುತ್ತಿದೆ. ಈ ಸಂಬಂಧ ಮಂಜು ಅವರ ವಿರುದ್ಧ ಟ್ರಾಫಿಕ್ ಸಿಬ್ಬಂದಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಗೊಟ್ಟಿಗೆರೆಯಲ್ಲಿ ನಿನ್ನೆ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಅರುಣ್ ಎಂಬ ಸಿಬ್ಬಂದಿ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜು ಬರ್ತಿದ್ದ ಕಾರನ್ನು ತಡೆದಿದ್ದರು. ಕಾರು ತಡೆದಿದ್ದಕ್ಕೆ ಕೋಪಗೊಂಡ ಗೊಟ್ಟಿಗೆರೆ ಮಂಜು ಕಾರಿನಿಂದ ಇಳಿದು ಅವಾಚ್ಯವಾಗಿ ಸಿಬ್ಬಂದಿಗೆ ಬೈದಿದ್ದಾರೆ. ಅಷ್ಟೇ ಅಲ್ಲದೇ, ಸಾರ್ವಜನಿಕವಾಗಿ ಹಲ್ಲೆಗೆ ಯತ್ನಿಸಿದ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಚಾಮರಾಜನಗರದಲ್ಲಿ ಮೂವರ ಎನ್‌ಕೌಂಟರ್ ಕೇಸ್ – ಮೃತರ ಜೊತೆಗೆ ಹೋಗಿದ್ದ ಮಹಿಮಾದಾಸ್ ನಾಪತ್ತೆ
ನೀನು ಇಲ್ಲಿ ಅದ್ಹೇಗೆ ಕೆಲಸ ಮಾಡ್ತೀಯಾ ನಾನು ನೋಡ್ತಿನಿ ಅಂತಾ ಸಿಬ್ಬಂದಿಯನ್ನು ತಳ್ಳಿ, ಕಾಲಿನಿಂದ ಒದೆಯಲು ಯತ್ನಿಸಿದರು ಎಂದು ಎಫ್‌ಐಆರ್‌ನಲ್ಲಿ ಟ್ರಾಫಿಕ್ ಸಿಬ್ಬಂದಿ ಅರುಣ್ ಉಲ್ಲೇಖಿಸಿದ್ದರು. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
