ಭುವನೇಶ್ವರ: ಪುರಿ ಲೋಕಸಭಾ ಕ್ಷೇತ್ರಕ್ಕೆ (Puri Constituency) ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ (Congress) ಅಭ್ಯರ್ಥಿ ಪಕ್ಷಕ್ಕೆ ಕೈಕೊಟ್ಟಿದ್ದಾರೆ.
ಚುನಾವಣೆಗೆ ಖರ್ಚು ಮಾಡಲು ಹಣದ ಕೊರತೆ ಇದೆ. ಹೀಗಾಗಿ ನಾನು ಕ್ಷೇತ್ರದ ಟಿಕೆಟ್ ಅನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಪುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುಚರಿತ ಮೊಹಂತಿ (Sucharita Mohanty) ತಿಳಿಸಿದ್ದಾರೆ. ಇದನ್ನೂ ಓದಿ: ಜಾಗತಿಕ ವೇದಿಕೆಯಲ್ಲಿ ಭಾರತವಲ್ಲ ಈಗ ಪಾಕಿಸ್ತಾನ ಅಳುತ್ತಿದೆ: ಮೋದಿ
ಪಕ್ಷದ ನಿಧಿಯಿಲ್ಲದೆ ಪುರಿಯಲ್ಲಿ ಪ್ರಚಾರ ನಡೆಸಲು ಸಾಧ್ಯವಿಲ್ಲ ಎಂದು ನಾನು ವಿಷಾದಿಸುತ್ತೇನೆ. ಹಾಗಾಗಿ, ಪುರಿ ಸಂಸದೀಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ನಾನು ಈ ಮೂಲಕ ಹಿಂದಿರುಗಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
ಒಡಿಶಾ ಕಾಂಗ್ರೆಸ್ ಉಸ್ತುವಾರಿ ಅಜೋಯ್ ಕುಮಾರ್ ತನ್ನ ಸ್ವಂತ ಹಣವನ್ನು ಬಳಸಿ ಹೋರಾಡುವಂತೆ ಹೇಳಿದರು. ಪುರಿಯಲ್ಲಿ ಪ್ರಚಾರಕ್ಕೆ ನನ್ನ ಬಳಿಯಿದ್ದೆಲ್ಲವನ್ನೂ ನೀಡಿದ್ದೇನೆ. ಪ್ರಗತಿಪರ ರಾಜಕೀಯಕ್ಕಾಗಿ ನನ್ನ ಅಭಿಯಾನವನ್ನು ಬೆಂಬಲಿಸಲು ಸಾರ್ವಜನಿಕರಿಂದ ದೇಣಿಗೆ ಬಯಸಿದೆ. ಇದುವರೆಗೆ ಅದು ಕೂಡ ಹೆಚ್ಚು ಯಶಸ್ವಿಯಾಗಲಿಲ್ಲ. ಯೋಜಿತ ಪ್ರಚಾರದ ವೆಚ್ಚವನ್ನು ಕನಿಷ್ಠಕ್ಕೆ ಕಡಿತಗೊಳಿಸಲು ನಾನು ಪ್ರಯತ್ನಿಸಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಚಾರ್ ಸೌ ಫಾರ್ ಗುರಿ – ಮೂರನೇ ಹಂತದ ಮತದಾನ ಬಿಜೆಪಿಗೆ ಎಷ್ಟು ಮುಖ್ಯ?
ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಬೆನ್ನಲ್ಲೇ ಮೊಹಾಂತಿ ಅವರು ಕ್ರೌಡ್-ಫಂಡಿಂಗ್ ಮೂಲಕ ಹಣ ಸಂಗ್ರಹಕ್ಕೆ ಪ್ರಯತ್ನಿಸಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಲು ದೇಣಿಗೆ ಕೋರಿ UPI QR ಕೋಡ್ ಮತ್ತು ಇತರ ಖಾತೆಯ ವಿವರಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದೇನೆ. ಆದರೆ ಸ್ವಂತವಾಗಿ ಸಾಕಷ್ಟು ಹಣವನ್ನು ಸಂಗ್ರಹಿಸಲು ಸಾಧ್ಯವಾಗದ ಕಾರಣ ಈ ಕಠಿಣ ಹೆಜ್ಜೆ ಇಡಬೇಕಾಯಿತು ಎಂದು ತಿಳಿಸಿದ್ದಾರೆ.