ನವದೆಹಲಿ: ಹಿಂದೆ ಭಾರತದಲ್ಲಿ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್‌ನ (Congress) ಹೇಡಿ ಸರ್ಕಾರವು ಜಾಗತಿಕ ವೇದಿಕೆಯಲ್ಲಿ ಅಳುತ್ತಿತ್ತು. ಭಾರತವು ಜಾಗತಿಕ ವೇದಿಕೆಯಲ್ಲಿ ಅಳುತ್ತಿದ್ದ ಸಮಯ ಕಳೆದು ಹೋಗಿದೆ. ಈಗ ಪಾಕಿಸ್ತಾನವು ಅಳುತ್ತಿದೆ ಮತ್ತು ಸಹಾಯಕ್ಕಾಗಿ ಕಿರುಚುತ್ತಿದೆ ಎಂದು ಪ್ರಧಾನಿ ಮೋದಿ (Narendra Modi) ಹೇಳಿದ್ದಾರೆ.
ಜಾರ್ಖಂಡ್‌ನ (Jharkhand) ಪಲಮುದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ರಾಷ್ಟ್ರವನ್ನು ರಕ್ಷಿಸಲು ಹೋದ ಜಾರ್ಖಂಡ್ ಮತ್ತು ಬಿಹಾರದ ಜನರು ಗಡಿಯಲ್ಲಿ ದೇಶಕ್ಕಾಗಿ ಸಾಯುತ್ತಿದ್ದ ಸಮಯವಿತ್ತು. ಬಿಜೆಪಿ ಅವಧಿಯಲ್ಲಿ ಭಾರತ ಬದಲಾಗಿದೆ. ಮನೆಗೆ ನುಗ್ಗಿ ಹೊಡೆಯುತ್ತಿದೆ ಎಂದರು. ಹಿಂದಿನ ಯುಪಿಎ ಆಡಳಿತವನ್ನು ಉಲ್ಲೇಖಿಸಿದ ಅವರು ಹಿಂದಿನ ಸರ್ಕಾರಗಳು ಶಾಂತಿಯ ಭರವಸೆಯಲ್ಲಿ ‘ಪಾಕಿಸ್ತಾನಕ್ಕೆ ಪ್ರೇಮ ಪತ್ರ’ ಕಳುಹಿಸುತ್ತಿದ್ದವು. ಆದರೆ ನೆರೆಯ ದೇಶವು ಪ್ರತಿಯಾಗಿ ಹೆಚ್ಚಿನ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸುತ್ತಿತ್ತು ಎಂದು ಅರೋಪಿಸಿದ್ದಾರೆ. ಇದನ್ನೂ ಓದಿ: ಚಾರ್ ಸೌ ಫಾರ್ ಗುರಿ – ಮೂರನೇ ಹಂತದ ಮತದಾನ ಬಿಜೆಪಿಗೆ ಎಷ್ಟು ಮುಖ್ಯ?
Advertisement
Advertisement
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಸರ್ಜಿಕಲ್ ಸ್ಟ್ರೈಕ್‌ನಿಂದ ತತ್ತರಿಸಿರುವ ಪಾಕಿಸ್ತಾನಿ ನಾಯಕರು ಯುವರಾಜ (ರಾಹುಲ್ ಗಾಂಧಿ) ಮುಂದಿನ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ಬಲಿಷ್ಠ ಭಾರತ ಸದೃಢ ಸರ್ಕಾರವನ್ನು ಬಯಸುತ್ತದೆ. ಸಧೃಡ ಸರ್ಕಾರವನ್ನು ಬಿಜೆಪಿ ನೀಡಬಲ್ಲದು ಎಂದಿದ್ದಾರೆ.
Advertisement
Advertisement
ಭ್ರಷ್ಟ ಜೆಎಂಎಂ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಮಕ್ಕಳಿಗಾಗಿ ಅಪಾರ ಸಂಪತ್ತನ್ನು ಸಂಗ್ರಹಿಸಿದ್ದಾರೆ. ಆದರೆ ನನಗೆ ಸ್ವಂತ ಮನೆ ಇಲ್ಲ. ಸೈಕಲ್ ಕೂಡ ಇಲ್ಲ. ಕಳೆದ 25 ವರ್ಷಗಳಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೇ ಕೆಲಸ ಮಾಡುತ್ತಿದ್ದೇನೆ ಎನ್ನುವ ಮೂಲಕ ವಿಪಕ್ಷಗಳಿಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿವಾಸಕ್ಕೆ ಎಸ್‍ಐಟಿ ತಂಡ – ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು