LatestMain PostNational

ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ಲಂಚ ಆರೋಪ – ಬೊಮ್ಮಾಯಿ ರಾಜೀನಾಮೆಗೆ ಸುರ್ಜೇವಾಲಾ ಆಗ್ರಹ

ನವದೆಹಲಿ: ಪತ್ರಕರ್ತರಿಗೆ ಲಂಚ ನೀಡಲು ಹಣ ಎಲ್ಲಿಂದ ಬಂತು? ಸಿಎಂ ಬೊಮ್ಮಾಯಿ (Basavaraj Bommai) ಲಂಚಾವತಾರ ಬಯಲಾಗಿದೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಹೇಳಿದ್ದಾರೆ.

ಇಂದು ದೆಹಲಿಯಲ್ಲಿ (NewDelhi) ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲ ಅವರು, ಪತ್ರಕರ್ತರಿಗೆ (Journalists) ಒಂದು ಲಕ್ಷ ರೂಪಾಯಿ ಲಂಚ ನೀಡಿದ್ದಾರೆ. ಆದರೆ ಸಿಎಂ ಕಚೇರಿ (CM Office) ಲಂಚ ಗುಳಿತನವನ್ನು ಪತ್ರಕರ್ತರು ಬಯಲು ಮಾಡಿದ್ದಾರೆ. ಭಾರತದಲ್ಲಿ ಕರ್ನಾಟಕವೇ ಅತಿ ದೊಡ್ಡ ಭ್ರಷ್ಟಾಚಾರ ಸರ್ಕಾರ. ನೇಮಕಾತಿಯಲ್ಲಿ, ಗುತ್ತಿಗೆಯಲ್ಲಿ, ವರ್ಗಾವಣೆಯಲ್ಲಿ ಎಲ್ಲ ಕಡೆ ಸಿಎಂ ಕಚೇರಿ ಲಂಚ ಪಡೆಯುತ್ತಿದೆ. 40% ಕಮಿಷನ್ ಪಡೆದು ಕೆಲಸ ಮಾಡುತ್ತಿದೆ. ಮಠಗಳಿಗೂ ಅನುದಾನ ನೀಡುವಲ್ಲೂ ಸರ್ಕಾರ ಕಮಿಷನ್ ಪಡೆದಿದೆ. ಅಧಿಕಾರಿಗಳು/ಉಪನ್ಯಾಸಕರ ನೇಮಕಾತಿಯಲ್ಲೂ ಲಂಚ ಪಡೆದಿರುವುದು ಬದಲಾಗಿದೆ. ಸಚಿವ ಎಂಟಿಬಿ ನಾಗರಾಜ್ ವರ್ಗಾವಣೆಗೆ 80 ಲಕ್ಷ ಪಡೆದುರುವುದು ಬಹಿರಂಗವಾಗಿ ಮಾತನಾಡಿದ್ದಾರೆ. ಲಂಚ ನೀಡದೆ ಬೇರೆ ಕಡೆ ಪೋಸ್ಟಿಂಗ್ ಸಿಗುವುದಿಲ್ಲ ಎಂದು ಮಾತನಾಡಿದ್ದಾರೆ. ಲಂಚ ಪಡೆದು ಪೊಲೀಸ್ ಉನ್ನತ ಅಧಿಕಾರಿಗಳು ಜೈಲು ಸೇರಿದ್ದಾರೆ. ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಸರ್ಕಾರ ಲಂಚ ಪಡೆದಿದೆ. ಈ ಹಣ ಎಲ್ಲಿ ಹೋಗುತ್ತಿದೆ ಮಿಸ್ಟರ್ ಬೊಮ್ಮಾಯಿ? ಪತ್ರಕರ್ತರಿಗೆ ಲಂಚ ನೀಡಲು ಹಣ ಎಲ್ಲಿಂದ ಬಂತು? ಸಿಎಂ ಬೊಮ್ಮಾಯಿ ಲಂಚಾವತಾರ ಬಯಲಾಗಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಎಂದೂ ಪತ್ರಕರ್ತರಿಗೆ ಹಣ ನೀಡಿಲ್ಲ. ನಾನು ಈ ಆರೋಪವನ್ನು ತಿರಸ್ಕರಿಸುತ್ತೇನೆ. ನಮ್ಮ ಸರ್ಕಾರ ಬಂದರೆ ನಾವು ಸಮಿತಿ ರಚನೆ ಮಾಡುತ್ತೇವೆ. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: `ಆಪರೇಷನ್ ಕಮಲ’ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ- ಸುಪ್ರೀಂಗೆ ಡಿಕೆಶಿ ಮನವಿ

ನಂತರ ಮೇಕೆದಾಟು ಯಾತ್ರೆ (Mekedatu Yatre) ಮತ್ತು ಭಾರತ್ ಜೋಡೊ ಯಾತ್ರೆಯಲ್ಲಿ (Bharat Jodo Yatra) ಪತ್ರಕರ್ತರಿಗೆ ಕಾಂಗ್ರೆಸ್ ಹಣ ನೀಡಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಎಂದೂ ಪತ್ರಕರ್ತರಿಗೆ ಹಣ ನೀಡಿಲ್ಲ. ನಾನು ಈ ಆರೋಪವನ್ನು ತಿರಸ್ಕರಿಸುತ್ತೇನೆ. ಗುಜರಾತ್‍ನಲ್ಲಿ (Gujarat) ಬಿಜೆಪಿ (BJP) ಅಧಿಕಾರಕ್ಕೆ ಬರಲು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುತ್ತಿದೆ. ಗುಜರಾತ್ ಮಾತ್ರವಲ್ಲ ಕರ್ನಾಟಕದಲ್ಲೂ (Karnataka) ಬಿಜೆಪಿ ಲಿಂಗಾಯತ ಮತ್ತು ಒಕ್ಕಲಿಗರಿಗೆ ಜಗಳ ಹಚ್ಚುತ್ತಿದೆ. ಕುರುಬ ಮತ್ತು ಬೇರೆ ಜಾತಿಯ ವಿರುದ್ಧ ಜಗಳ ಹಬ್ಬಿಸುತ್ತಿದೆ. ಈ ರೀತಿಯ ರಾಜಕೀಯ ಮಾಡಿ ಅಶಾಂತಿ ಹುಟ್ಟಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ರಾಜ್ಯದ ಕೆಲವು ಆಯ್ದ ಪತ್ರಕರ್ತರಿಗೆ ಈ ಬಾರಿ ದೀಪಾವಳಿ ಹಬ್ಬದ (Deepavali Festival) ಪ್ರಯುಕ್ತ ಉಡುಗೊರೆಯಾಗಿ ಸಿಹಿತಿಂಡಿಗಳ ಜೊತೆಗೆ ತಲಾ 2.5 ಲಕ್ಷ ರೂಪಾಯಿ ನಗದು ನೀಡಿರುವ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್‍ನಲ್ಲಿ ಮತ್ತೊಂದು ಮಠದ ಸ್ವಾಮೀಜಿ ಭಾಗಿ?

ಈ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ 2.5 ಲಕ್ಷ ಉಡುಗೊರೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು 40 ಪರ್ಸೆಂಟ್ ಕಮಿಷನ್‍ನಲ್ಲಿ ನೀಡಿದ ಹಣವೇ? 40 ಪರ್ಸೆಂಟ್ ಕಮಿಷನ್ ಕರ್ಮಕಾಂಡಗಳನ್ನು ಮುಚ್ಚಿಡಲು ನೀಡಿದ ಲಂಚವೇ? ಮಾಧ್ಯಮಗಳನ್ನು ಖರೀದಿಸುವ ವ್ಯವಹಾರವೇ ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.

Live Tv

Leave a Reply

Your email address will not be published. Required fields are marked *

Back to top button