DistrictsKarnatakaLatestMain PostRamanagara

ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್‍ನಲ್ಲಿ ಮತ್ತೊಂದು ಮಠದ ಸ್ವಾಮೀಜಿ ಭಾಗಿ?

ರಾಮನಗರ: ಬಂಡೆ ಮಠ (Bande Mutt) ದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣ ತನಿಖೆ ಮುಂದುವರಿದಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಸವಲಿಂಗ ಶ್ರೀ (Basavalinga Shree) ಗಳನ್ನು ಖೆಡ್ಡಾಗೆ ಕೆಡವಲು ಮತ್ತೊಂದು ಮಠದ ಸ್ವಾಮೀಜಿ ಕೂಡ ಕೈ ಜೋಡಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿದ್ದಂತೆ. ಆ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ ಎಂಬ ವಿಚಾರಗಳು ಹರಿದಾಡುತ್ತಿದೆ.

ದಿನ ಕಳೆದಂತೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್ ಬಗ್ಗೆ ಊಹಾಪೋಹಗಳ ಜೊತೆ ವದಂತಿಗಳೂ ಹೆಚ್ಚುತ್ತಿವೆ. ಒಂದೆಡೆ ಪೊಲೀಸರ ವಿಚಾರಣೆ ತೀವ್ರಗೊಂಡರೆ ಮತ್ತೊಂದೆಡೆ ಶ್ರೀಗಳನ್ನು ಖೆಡ್ಡಾಗೆ ಕೆಡವಿದ ಟೀಂ ಬಗ್ಗೆ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬರ್ತಿವೆ. ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಮತ್ತೊಂದು ಮಠದ ಸ್ವಾಮೀಜಿ ಎಂಬ ವಿಚಾರ ಇದೀಗ ಚರ್ಚೆಗೆ ಬಂದಿರೋದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಪ್ರಕರಣದಲ್ಲಿ ಓರ್ವ ಸ್ವಾಮೀಜಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!

ಇತ್ತ ಪೊಲೀಸರ ವಿಚಾರಣೆ ತೀವ್ರಗೊಳ್ತಿದ್ದಂತೆಯೇ ಆ ಸ್ವಾಮೀಜಿಗೆ ನಡುಕ ಉಂಟಾಗಿದೆ. ಬಸವಲಿಂಗ ಶ್ರೀ ಮೇಲಿನ ದ್ವೇಷಕ್ಕೆ ಹನಿಟ್ರ್ಯಾಪ್ ಅಸ್ತ್ರವನ್ನ ಬಳಸಿದವರಲ್ಲಿ ಪ್ರಮುಖ ಪಾತ್ರ ವಹಿಸಿರೋದು ಮತ್ತೊಂದು ಮಠದ ಶ್ರೀಗಳು ಎಂದು ಹೇಳಲಾಗ್ತಿದೆ. ಆದರೆ ಆ ಮತ್ತೊಂದು ಮಠದ ಸ್ವಾಮೀಜಿ ಯಾರು.? ಬಂಡೇ ಮಠಕ್ಕೂ ಮತ್ತೊಬ್ಬ ಸ್ವಾಮೀಜಿಗೂ ಏನು ಸಂಬಂಧ ಅನ್ನೊದು ನಿಗೂಢವಾಗಿದೆ. ಇನ್ನು ವಿಚಾರಣೆ ಎದುರಿಸುತ್ತಿರುವಾಗಲೇ ಆ ಮತ್ತೊಬ್ಬ ಶ್ರೀ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಅಂತಲೂ ಹೇಳಲಾಗ್ತಿದೆ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

ಅಲ್ಲದೇ ಶ್ರೀಗಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಓರ್ವ ಶಾಸಕನಿಗೂ ಕರೆ ಮಾಡಿ ತಮ್ಮನ್ನು ಟ್ರ್ಯಾಪ್ ನಲ್ಲಿ ಸಿಲುಕಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸಹಾಯ ಮಾಡಿ ಅಂತಲೂ ಕೇಳಿಕೊಂಡಿದ್ದಾರೆ ಎಂದು ಶ್ರೀಗಳು ಮನವಿ ಮಾಡಿದ್ದರಂತೆ. ಅಷ್ಟಕ್ಕೂ ಆ ಶಾಸಕರಾದ್ರೂ ಯಾರು.? ಶಾಸಕರಿಗೂ ಹಾಗೂ ಶ್ರೀಗಳಿಗೂ ಏನು ಸಂಬಂಧ ಆನ್ನೋ ಹೊಸ ಚರ್ಚೆ ಕೂಡಾ ಮಠದ ಸುತ್ತಮುತ್ತ ನಡೆಯುತ್ತಿದೆ. ಒಟ್ಟಾರೆ ಶ್ರೀಗಳ ಆತ್ಮಹತ್ಯೆ ಕುರಿತು ಹಲವು ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕಿದೆ. ಶ್ರೀಗಳಿಗೆ ಖೆಡ್ಡಾ ತೋಡಿದ ಆ ಗ್ಯಾಂಗ್ ಯಾವುದು, ಅದರಲ್ಲಿ ಯಾರೆಲ್ಲಾ ಇದ್ದಾರೆ.? ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಯಾರು ಎಂಬುದು ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.

Live Tv

Leave a Reply

Your email address will not be published. Required fields are marked *

Back to top button