ಶಿವಮೊಗ್ಗ: ಬಿಜೆಪಿ (BJP) ಆಪರೇಷನ್ ಕಮಲದ (Operation Kamala) ವಿರುದ್ಧ ಸುಪ್ರೀಂಕೋರ್ಟ್ (Supreme Court) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಮನವಿ ಮಾಡಿದ್ದಾರೆ.
Advertisement
ಶಿವಮೊಗ್ಗದಲ್ಲಿಂದು (Shivamogga) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲೆಡೆ ಆಪರೇಷನ್ ಕಮಲ ನಡೆಯುತ್ತಿದೆ. ರಾಜ್ಯದಲ್ಲೂ ಆಪರೇಷನ್ ಕಮಲದ ಮೂಲಕವೇ ಸರ್ಕಾರ (Government) ಅಧಿಕಾರಕ್ಕೆ ಬಂದಿದೆ. ಇದು ತೆಲಂಗಾಣದಲ್ಲೂ ಬಹಿರಂಗವಾಗಿದೆ. ಆದ್ದರಿಂದ ಸುಪ್ರೀಂಕೋರ್ಟ್ (Supreme Court) ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ನಮ್ಮದು 3 ಬಾಗಿಲು ಆದ್ರೆ, ಬಿಜೆಪಿ ಅವ್ರದ್ದು 12 ಬಾಗಿಲು: ಡಿಕೆಶಿ
Advertisement
Advertisement
ತೆಲಂಗಾಣ ಕರ್ನಾಟಕದಲ್ಲೂ ಆಪರೇಷನ್ ಕಮಲ ನಡೆದಿದೆ. ಇದು ಮನಿ ಲ್ಯಾಂಡಿಂಗ್ ಕಾಯ್ದೆ ಅಡಿಯಲ್ಲಿ ಬರುತ್ತದೆ. ಪಿಎಂಎಲ್ ಆಕ್ಟ್ (PML ACT) ಅಡಿ ಬರುವುದರಿಂದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳೇ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸತ್ಯಾಸತ್ಯಗಳನ್ನ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮನೆಯವರಿಗೆ ಕರೆ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ
Advertisement
ಆಪರೇಷನ್ ಕಮಲದಲ್ಲಿ ಕೋಟಿ-ಕೋಟಿ ಹಣ ಪತ್ತೆಯಾಗಿದ್ದು ಸುಮೋಟೋ ಪ್ರಕರಣದಿಂದ ಇದರ ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ ಎಂದು ಕೇಳಿದ್ದಾರೆ.