Monday, 24th June 2019

ನೀ ಬಾರಣ್ಣ, ಬಾರಣ್ಣ ಅಂತ ಸಿಎಂ ನನ್ನನ್ನು ಜೆಡಿಎಸ್‍ಗೆ ಆಹ್ವಾನಿಸಿದ್ರು: ಸುಭಾಷ್ ಗುತ್ತೇದಾರ್

ಕಲಬುರಗಿ: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಇದೀಗ ಮುಂದಾಗಿದ್ದು ಸೋಮವಾರ ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಜೆಡಿಎಸ್‍ಗೆ ಬರುವಂತೆ ನನ್ನನ್ನು ಆಹ್ವಾನಿಸಿದರು ಎಂದು ಆಳಂದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಗುತ್ತೇದಾರ್, ಸೋಮವಾರ ಹೈದಾರಾಬಾದ್ ಕರ್ನಾಟಕ ವಿಮೋಚನ ಅಂಗವಾಗಿ ಧ್ವಜರೋಹಣದ ಸಲುವಾಗಿ ಸಿಎಂ ಕುಮಾರಸ್ವಾಮಿ ಕಲಬುರಗಿಗೆ ಬಂದಿದ್ದರು. ಈ ವೇಳೆ ನಾನು ಕ್ಷೇತ್ರದಲ್ಲಿನ ಬರದ ಬಗ್ಗೆ ಮನವಿ ಕೊಡಲು ಕುಮಾರಸ್ವಾಮಿ ಅವರ ಬಳಿ ಹೋದಾಗ ನೀ ಬಾರಣ್ಣ ಬಾರಣ್ಣ ಅಂತ ಕರೆ ನೀಡಿದರು. ಅದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪ್ರತಿ ಬಾರಿಯು ಬಾರಣ್ಣ ಬಾರಣ್ಣ ಎಂದೇ ಕರೆಯುತ್ತಿದ್ದರು ಎಂದು ತಿಳಿಸಿದರು.

ನಾನು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಬರುವುದಿಲ್ಲ. ಏನೇ ಇದ್ದರೂ ಬೆಂಗಳೂರಿಗೆ ಬಾರಣ್ಣ ಕೂತು ಮಾತಾಡೋಣ ಎಂದು ಹೇಳಿದ್ದಾರೆ. ಆದರೆ ನಾನು ಹೋಗುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸ್ಥಾನಕೊಟ್ಟರೂ ನಾನು ಹೋಗುವುದಿಲ್ಲ ಅಂತ ಗುತ್ತೇದಾರ್ ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *