ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಸುಮಾರು 2 ಗಂಟೆಗಳ ವಿಚಾರಣೆ ನಡೆಸಿದ ಕೋರ್ಟ್ ಕೆಲ ಕಾಲ ತೀರ್ಪು ಕಾಯ್ದಿರಿಸಿತು. ಬಳಿಕ ಸಂಜೆ 6.25ರ ಸುಮಾರಿಗೆ ಆದೇಶ ಪ್ರಕಟಿಸಿತು. ಜೊತೆಗೆ ಮೇ 6 ಕ್ಕೆ ವಿಚಾರಣೆ ಮುಂದೂಡಿದೆ. ಈ ಮೂಲಕ ರೇವಣ್ಣ ಅವರಿಗೆ ರಿಲೀಫ್ ಸಿಕ್ಕಿಲ್ಲ.
Advertisement
ರೇವಣ್ಣ ಪರ ವಕೀಲರು ಹೇಳಿದ್ದೇನು..?: ಪ್ರಕರಣ ಗಂಭೀರತೆ ವಿಚಾರವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆಗೆ ಎಸ್ ಪಿ ಪಿ ಜಗದೀಶ್ ಮನವಿ ಮಾಡಿದರು. ಇದಕ್ಕೆ ರೇವಣ್ಣ ಪರ ವಕೀಲ ಮೂರ್ತಿ ನಾಯ್ಕ್ ಆಕ್ಷೇಪಣೆ ವ್ಯಕ್ತಪಡಿಸಿದರು. ನಿರ್ದಿಷ್ಟ ಪ್ರಕರಣಗಳಿಗೆ ಮಾತ್ರ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸುವುದಾಗಿದೆ ಆದರೆ ಇಲ್ಲಿ ಅಂತಹ ದೊಡ್ಡ ಪ್ರಕರಣ ಏನಿಲ್ಲ ಎಂದು ತಿಳಿಸಿದರು.
Advertisement
Advertisement
ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಇದ್ದಾರೆ ಎಂದು ಆರೋಪಿಸಿ ವಾದ ಮುಂದುವರಿಸಿದ ರೇವಣ್ಣ ಪರ ವಕೀಲರು, FIR ಅಲ್ಲಿ ಇರುವ ಸಾರಾಂಶದ ಬಗ್ಗೆ ವಿವರಣೆ ನೀಡಿದ್ದಾರೆ. ಪ್ರಕರಣವನ್ನು ಅನಗತ್ಯವಾಗಿ ವಿಜೃಂಭಿಸಲು SIT ಪ್ರಯತ್ನ ಮಾಡುತ್ತಿದೆ. ಈ ಪ್ರಕರಣದಲ್ಲಿ ನಾವು ಏನನ್ನೂ ಮುಚ್ಚಿಡುವ ಅಗತ್ಯವಿಲ್ಲ. ಸತೀಶ್ ಹೇಳಿಕೆ ಮತ್ತು ಎಫ್ ಐ ಆರ್ ಅಲ್ಲಿ ಇರುವ ಅಂಶಗಳಿಗು ವ್ಯತ್ಯಾಸ ಇದೆ. ನಿನ್ನೆ ಎಫ್ ಐ ಆರ್ ಮಾಡ್ತಾರೆ. ಇಂದು ವಿಚಾರಣೆಗೆ ಬನ್ನಿ ಅಂತಾರೆ ಅದರಿಂದಲೇ ಎಸ್ ಐಟಿ ಉದ್ದೇಶ ಏನು ಅಂತ ಗೊತ್ತಾಗ್ತಾ ಇದೆ. ಇವತ್ತು ಶನಿವಾರ ಬೇರೆ ವಿಚಾರಣೆಗೆ ಕರೆಸಿ ಬಲವಂತದ ಕ್ರಮ ಮಾಡಿದ್ರೆ ಎಂಬುದೇ ಆತಂಕವಾಗಿದೆ. ದೂರುದಾರನ ಹೇಳಿಕೆ ಬಿಟ್ಟರೆ ಬೇರೆ ಏನೂ ಇಲ್ಲ. ತಡರಾತ್ರಿ ತರಾತುರಿಯಲ್ಲಿ ಎಫ್ಐಆರ್ ದಾಖಲಾಗಿದೆ. ನಾನ್ ಬೇಲೆಬಲ್ ಸೆಕ್ಷನ್ ಹಾಕಿ ಎಫ್ಐಆರ್ ದಾಖಲು ಮಾಡಿದ್ದಾರೆ. ಅಲ್ಲದೇ ತಕ್ಷಣ ಮತ್ತೆ 41 A ಯಲ್ಲಿ ನೊಟೀಸ್ ನೀಡಿದ್ದಾರೆ. ನಿನ್ನೆ ನಾನ್ ಬೇಲೆಬಲ್ ಸೆಕ್ಷನ್ ಹಾಕಿಲ್ಲ ಅಂದಿದ್ರು. ಆದರೆ ರಾತ್ರಿ ಇನ್ನೊಂದು ನಾನ್ ಬೇಲೆಬಲ್ ಸೆಕ್ಷನ್ FIR ಹಾಕಿದ್ದಾರೆ. ಅಲ್ಲದೇ ಇವತ್ತು ಶನಿವಾರ ಅಂತಾ ನೋಡಿಕೊಂಡು ನೊಟೀಸ್ ನೀಡಿದ್ದಾರೆ ಎಂದು ರೇವಣ್ಣ ಪರ ವಕೀಲ ಕೆಲ ನ್ಯಾಯಾಲಯದ ಆದೇಶಗಳನ್ನು ವಿವರಿಸಿದರು.
Advertisement
ಕಿಡ್ನಾಪ್ ಪ್ರಕರಣ ಆಗಬೇಕಾದರೆ ಹಲ್ಲೆ, ಹಣಕ್ಕೆ ಬೇಡಿಕೆ ಇರಬೇಕು. ಈ ಪ್ರಕರಣದಲ್ಲಿ ಈ ರೀತಿಯಲ್ಲಿ ನಡೆದೇ ಇಲ್ಲ. ಹೀಗಾಗಿ ಕಿಡ್ನಾಪ್ ಸೆಕ್ಷನ್ ಅಪ್ಲೈ ಆಗುವುದೇ ಇಲ್ಲ. 365 ಕೂಡ 7 ವರ್ಷ ಶಿಕ್ಷೆ & ದಂಡದ ಬಗ್ಗೆ ಹೇಳತ್ತೆ.. ಇದು ಬೇಲೆಬಲ್. ಆದರೆ ಇಲ್ಲಿ 364A ಹಾಕಲಾಗಿದೆ. ಈ ಸೆಕ್ಷನ್ ಡೆತ್ ಸೆಂಟೆನ್ಸ್ ವರೆಗೂ ಶಿಕ್ಷೆ ಆಗಿರುತ್ತದೆ. ಆದರೆ ಇಲ್ಲಿ ರೇವಣ್ಣ ವಿರುದ್ಧ ಅಂತ ಗಂಭೀರ ಆರೋಪಗಳು ಇಲ್ಲ. ಬೇರೆ ಆರೋಪಿ ಹೇಳಿದ್ದಾರೆ ಅನ್ನೋ ಅಂಶಕ್ಕೆ ಈ ರೀತಿ ಹಾಕಲಾಗಿದೆ. ರೇವಣ್ಣ ವಿರುದ್ಧ ಕಿಡ್ನಾಪ್ ಆರೋಪಕ್ಕೆ ಯಾವುದೆ ಸಾಕ್ಷಿ ಇಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಪ್ರಜ್ವಲ್ ಅಂತಹ ಸ್ವಭಾವದ ಹುಡುಗ ಅಲ್ಲ: ಜಿ.ಎಸ್ ಬಸವರಾಜ್
ಆರೋಪಿ ಪ್ರಭಾವಿಯಾಗಿದ್ದು, ಯಾವುದೇ ಹಂತಕ್ಕೂ ಹೋಗಿ ತಿರುಚಬಹುದು ಅಂತಾ ಬರೆಯಲಾಗಿದೆ. ಲೀಗಲ್ ಸಿಸ್ಟಮ್ ನೇ ಅವರ ತಿರುಚಬಹುದೆಂದು ಉಲ್ಲೇಖಿಸಿದ್ದಾರೆ. ಮತ್ತೊಬ್ಬ ಆರೋಪಿ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇವರು ರೇವಣ್ಣನ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೋ, ಅವರ ಪುತ್ರನ ಬಗ್ಗೆಯೋ.? ಎಂದು ಎಸ್ಐಟಿ ಆಕ್ಷೇಪಣೆಗೆ ರೇವಣ್ಣ ಪರ ವಕೀಲರು ಪ್ರತಿವಾದ ಮಂಡಿಸಿದರು. ಇವರು ಆಕ್ಷೇಪಣೆ ರೇವಣ್ಣನ ಬಗ್ಗೆ ಸಲ್ಲಿಸಬೇಕಿತ್ತು. ಆದರೆ ಇಲ್ಲಿ ಪ್ರಜ್ವಲ್ ರೇವಣ್ಣ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೇ ಆ ಪ್ರಕರಣಕ್ಕೂ ಇದಕ್ಕೂ ಲಿಂಕ್ ಇದೆ ಎಂದಿದ್ದಾರೆ. ಇಲ್ಲಿ ಇದು ಹೇಗೆ ಅಪ್ಲೇ ಆಗತ್ತೆ ಎಂದು ರೇವಣ್ಣ ಪರ ವಕೀಲರು ವಾದಿಸಿದರು.
ಪೊಲೀಸ್ರು ಸರ್ಕಾರದ ಏಜೆಂಟ್ ಗಳಲ್ಲ. ಅದನ್ನ ಬಳಸಿ ಆರೋಪಿಗೆ ಕಿರುಕುಳ, ಟಾರ್ಚರ್ ಮಾಡುವಂತಿಲ್ಲ. ಈ ಅಂಶಗಳ ಆಧಾರದ ಮೇಲೆ ಆಗ ನಿರೀಕ್ಷಣಾ ಜಾಮೀನನ್ನ ನೀಡಿತ್ತು. ಸುಪ್ರೀಂ ಕೋರ್ಟ್ ನ ಆದೇಶದ ಅಂಶಗಳ ಉಲ್ಲೇಖ ಮಾಡಿ, ಈ ಪ್ರಕರಣದಲ್ಲಿ ಹೀಗೆ ಆಗುತ್ತಾ ಇಲ್ಲ ಎಂದು ಹೇಳಿದರು. ಇದೇ ವೇಳೆ ಬಂಧನದ ರಕ್ಷಣೆ ಕೋರಿದ ರೇವಣ್ಣ ಪರ ವಕೀಲರು, ಜಾಮೀನು ನೀಡಿದ್ರೆ ಒಂದು ಒಂದು ಕ್ಷಣ ಹೆಚ್‌ಚೂ, ಕಡಿಮೆ ಆಗದಂತೆ 5:30ಕ್ಕೆ ಎಸ್ ಐಟಿ ಮುಂದೆ ಇರ್ತಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಪ್ರಕರಣ ಇದೆ ಸರಿ. ಆದರೆ ಕಿಡ್ನ್ಯಾಫ್ ಪ್ರಕರಣದಲ್ಲಿ ಪ್ರಜ್ವಲ್ ಆರೋಪಿ ಅಲ್ಲ. ಎಲ್ಲರ ಗಮನ ಪ್ರಜ್ವಲ್ ರೇವಣ್ಣ ಮೇಲಿದೆ. ರೇವಣ್ಣಗೆ ಜಾಮೀನು ನೀಡಿ ಎಂದು ಕೋರ್ಟ್‌ಗೆ ರೇವಣ್ಣ ಪರ ವಕೀಲ ಮೂರ್ತಿ ಡಿ ನಾಯ್ಕ್ ಮನವಿ ಮಾಡಿಕೊಂಡರು.
ಎಸ್‌ಐಟಿ ಪರ ವಕೀಲರ ವಾದವೇನು..?: ಬಳಿಕ ಎಸ್ ಪಿ ಪಿ ಜಗದೀಶ್ ವಾದ ಮಂಡಿಸಿ, ಎಸ್ ಐಟಿ ಯ ಮೊದಲ ಆದ್ಯತೆ ಇರುವುದು ಸಂತ್ರಸ್ತೆಯನ್ನು ಹುಡುಕಾಟ ಮಾಡೋದಾಗಿದೆ. ಸಂತ್ರಸ್ತೆಯ ಸುರಕ್ಷತೆ ಮೊದಲು ಆಗಬೇಕಿದೆ. ಆಕೆ ಎಲ್ಲಿದ್ದಾಳೆ ಅನ್ನೋದು ಗೊತ್ತಾಗ್ತಾ ಇಲ್ಲ. ಸಂತ್ರಸ್ತೆಯ ಮಗ ತುಂಬಾ ಆತಂಕ ವ್ಯಕ್ತಪಡಿಸ್ತಾ ಇದ್ದಾನೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆ ಬಡ ಮಹಿಳೆ ಎಲ್ಲಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ದುರದೃಷ್ಟಕರ ಎಂದರೆ ಈಗ ನಾಪತ್ತೆ ಆಗಿರುವ ಮಹಿಳೆಯ ಫೋಟೋ ವಿಡಿಯೋ ಬಹಿರಂಗ ಆಗಿದೆ. ಆಕೆಗೆ ಏನಾಗಿದೆ ಅನ್ನೋದು ನಮ್ಮ ಆತಂಕವಾಗಿದೆ. 2ಸಾವಿರಕ್ಕೂ ಹೆಚ್ಚು ವೀಡಿಯೋಗಳು ಎಂದು ಹೇಳಲಾಗುತ್ತಿದೆ. ಅವುಗಳಲ್ಲಿ ಒಬ್ಬರು ಈ ಅಪಹರಣಕ್ಕೆ ಒಳಗಾಗಿರುವ ಮಹಿಳೆಯಾಗಿದ್ದಾರೆ ಎಂದು ತಿಳಿಸಿದರು.
ಸಂತ್ರಸ್ತೆಯ ಮಗ ನನ್ನ ತಾಯಿ ರೇವಣ್ಣ ಅವರು ಕಿಡ್ನಾಪ್ ಮಾಡಿಸಿದ್ದಾರೆ ಅಂತ ಹೇಳಿದ್ದಾರೆ. ಪೊಲೀಸರ ಮುಂದೆ ಹೇಳಿಕೆ ನೀಡಬಾರದು, ಯಾವುದೇ ದೂರನ್ನು ಕೊಡಬಾರದು ಅಂತ ಈ ಮೊದಲೇ ಬೆದರಿಕೆ ಹಾಕಿದ್ದಾರೆ. ಪ್ರಕರಣ ದಾಖಲಾಗುವ ಮುನ್ನವೇ ಬೆದರಿಕೆ ಹಾಕಲಾಗಿದೆ. ಆ ಮಹಿಳೆ ಜೀವಂತವಾಗಿ ಇದ್ದಾಳೆ ಎಂದು ನಾವು ನಂಬಿದ್ದೇವೆ. ನಾವು ಹೆಚ್ಚಾಗಿ ಹೇಳಿದ್ರೆ ಆಕೆಗೆ ನಾವು ಮಾಡಿದ ಅವಮಾನ ಆಗುತ್ತೆ. ಹೀಗಾಗಿ ನಾನು ಆಕೆಯ ಬಗ್ಗೆ ನಾನು ಹೆಚ್ಚು ಹೇಳಿ ವಾದಿಸುವುದಿಲ್ಲ ಎಂದು ಹೇಳಿದರು.
ಒಟ್ಟಿನಲ್ಲಿ ಹೆಚ್.ಡಿ.ರೇವಣ್ಣ ಅಥವಾ ಪ್ರಜ್ವಲ್ ವಿರುದ್ಧ ಯಾವುದೇ ಮಹಿಳೆ ದೂರು ಅಥವಾ ಹೇಳಿಕೆ ನೀಡಿದ್ರೆ ಇದೇ ರೀತಿ ಆಗುತ್ತದೆ ಎಂಬ ಸಂದೇಶ ರವಾನಿಸಲು ಈ ಕಿಡ್ನಾಪ್ ಮಾಡಿಸಲಾಗಿದೆ. ಆರೋಪಿ ರಾಜಕೀಯವಾಗಿ ಹಣಕಾಸಿನಲ್ಲಿ ಬಲಾಡ್ಯ ವ್ಯಕ್ತಿ. ಸಾಕ್ಷಿಗಳ ಮೇಲೆ ಅಲ್ಲ, ದೂರುದಾರ ಮೇಲೂ ಪ್ರಭಾವ ಬೀರಲಿದ್ದಾರೆ. ಇನ್ನೂ ಪ್ರಕರಣ ಪ್ರಾಥಮಿಕ ಹಂತದಲ್ಲಿ ಇದೆ ಈ ಸಂದರ್ಭದಲ್ಲಿಯೇ ಜಾಮೀನು ನೀಡೋದು ಸೂಕ್ತ ಅಲ್ಲ. ಯುಪಿ, ಬಿಹಾರದಲ್ಲಿ ನಡೆಯುವ ರೀತಿ ಜನರನ್ನ ಎದರಿಸಲು ಈ ಹಂತಕ್ಕೆ ಆರೋಪಿಗಳು ಹೋಗಿದ್ದಾರೆ. ಜನರನ್ನ/ಸಂತ್ರಸ್ತೆಯರನ್ನ ರಕ್ಷಿಸುವುದು ಸರ್ಕಾರ/ಎಸ್ಐಟಿ ಕರ್ತವ್ಯ. ಈ ಪ್ರಕರಣಲ್ಲಿ ನಿರೀಕ್ಷಣಾ ಜಾಮೀನು ನೀಡಲು ಯೋಗ್ಯವಲ್ಲ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ಕೂಡ ಮಂಜೂರು ಮಾಡಬಾರದು ಎಂದು ತಿಳಿಸಿದರು. ಬಳಿಕ ಮತ್ತೆ ರೇವಣ ಪರ ವಕೀಲರು ವಾದ ಮುಂದುವರಿಸಿದರು. ನಿರಂತರ 1 ಗಂಟೆ 40 ನಿಮಿಷಗಳ ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶವನ್ನು ಕೆಲಕಾಲ ಕಾಯ್ದಿರಿಸಿದರು.