ರಾಮನಗರ: ರೇಷ್ಮೆನಾಡು ರಾಮನಗರದಲ್ಲಿ (Rain in Bengaluru) ಮೊದಲ ಮಳೆಗೆ ಸಾಕಷ್ಟು ಅವಾಂತರ ಸೃಷ್ಠಿಯಾಗಿದ್ದು, ನಿನ್ನೆ ಸುರಿದ ಗಾಳಿಮಳೆಗೆ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿರುವ ಘಟನೆ ಚನ್ನಪಟ್ಟಣ ತಾಲೂಕಿನ ನಣ್ಣೂರು ಗ್ರಾಮದಲ್ಲಿ ನಡೆದಿದೆ.
ನೀರಿನ ಅಭಾವದ ನಡುವೆ ಕಷ್ಟಪಟ್ಟು ಬೆಳೆದಿದ್ದ ಬಾಳೆಬೆಳೆ ನೆಲಕಚ್ಚಿದೆ. ರೈತ ಆನಂದ ಮತ್ತು ನಿಂಗರಾಜು ಎಂಬುವವರಿಗೆ ಸೇರಿ ಬಾಳೆತೋಟ ಹಾಳಾಗಿದ್ದು ಸೂಕ್ತ ಪರಿಹಾರಕ್ಕೆ ರೈತರು ಮನವಿ ಮಾಡಿದ್ದಾರೆ. ಇನ್ನೂ ಕನಕಪುರ ತಾಲೂಕಿನ ಸಾತನೂರು ಹೋಬಳಿ ವ್ಯಾಪ್ತಿಯ ಮುರಳೇತಿಮ್ಮನ ದೊಡ್ಡಿ ಗ್ರಾಮದಲ್ಲೂ ನಿನ್ನೆ ಸುರಿದ ಗಾಳಿ-ಮಳೆಗೆ ಮನೆ ಜಖಂ ಆಗಿದೆ.
ಗ್ರಾಮದ ಜಯಮುತ್ತು ಎಂಬವರಿಗೆ ಸೇರಿದ ಮನೆ ಮೇಲ್ಛಾವಣಿ ಹಾರಿ ಹೋಗಿದ್ದು, ಗೋಡೆ ಬಿರುಕು ಬಿಟ್ಟಿದೆ. ಮನೆಯಲ್ಲಿದ್ದ ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಸೂಕ್ತ ಪರಿಹಾರಕ್ಕೆ ಕುಟುಂಬಸ್ಥರ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಿಡ್ನಾಪ್ ಕೇಸ್- ಸಂತ್ರಸ್ತೆಯ ರಕ್ಷಿಸಿ ಬೆಂಗಳೂರಿಗೆ ಕರೆತರುತ್ತಿರುವ ಎಸ್‍ಐಟಿ