– ಸಂಸ್ಥೆ ಪ್ರಮುಖ ದಾಖಲೆಗಳು ಸೀಜ್
– ಚಿಲುಮೆ ಎನ್‌ಜಿಓಗೆ ಬಿಜೆಪಿ ನಾಯಕರಿಂದ ಫಂಡಿಂಗ್
– ಚಿಲುಮೆ ಎನ್‌ಜಿಓಗೆ ಬಿಜೆಪಿ ನಾಯಕರಿಂದ ಫಂಡಿಂಗ್
ಬೆಂಗಳೂರು (Bengaluru): ಕಾನೂನುಬಾಹಿರವಾಗಿ ಮತದಾರರ ಗೌಪ್ಯ ಮಾಹಿತಿ ಸಂಗ್ರಹಿಸಿದ ಆರೋಪ ಎದುರಿಸ್ತಿರೋ ಚಿಲುಮೆ ಸಂಸ್ಥೆ (Chilume Social Service Society), ಮತದಾರರ ಪಟ್ಟಿ (Voters List) ಪರಿಷ್ಕರಣೆ ಪ್ರಕ್ರಿಯೆಯಲ್ಲೂ ಹಸ್ತಕ್ಷೇಪ ನಡೆಸಿರೋ ಅನುಮಾನಗಳು ವ್ಯಕ್ತವಾಗಿವೆ.
Advertisement
ಹಗರಣದ ತನಿಖೆಯ ಸುಳಿವರಿತ ಬಿಬಿಎಂಪಿ (BBMP) ಚಿಲುಮೆಗೆ ನವೆಂಬರ್ 2ರಂದು ನೊಟೀಸ್ ನೀಡಿತ್ತು. ಇದಾದ 10 ದಿನಗಳಿಗೆ (ನ.13) ಕಚೇರಿಗಳ ಬಾಗಿಲು ಬಂದ್ ಮಾಡಿದೆ. 3 ತಿಂಗಳಿಗೆ ಅಗ್ರಿಮೆಂಟ್ ಇದ್ರು 2 ತಿಂಗಳಿಗೆ ಬಸವನಗುಡಿ ಕಚೇರಿಯನ್ನು ಖಾಲಿ ಮಾಡಿದೆ. ನಂತರ ಸರ್ಚ್ ವಾರೆಂಟ್ ಪಡೆದು ಪರಿಶೀಲನೆ ನಡೆಸಿರುವ ಹಲಸೂರು ಗೇಟ್ ಪೊಲೀಸರು (Halasuru Police Station), ಮಹತ್ವದ ದಾಖಲೆಗಳನ್ನು ಸೀಜ್ ಮಾಡಿದ್ದಾರೆ. ನಾಲ್ವರು ಸಿಬ್ಬಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ, ಚಿಲುಮೆಯ ಮುಖ್ಯಸ್ಥರು ಇನ್ನೂ ಸಿಕ್ಕಿಬಿದ್ದಿಲ್ಲ. ಚಿಲುಮೆ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ, ತನಿಖಾಧಿಕಾರಿಯನ್ನು ನೇಮಿಸಿರೋ ಮುಖ್ಯ ಚುನಾವಣಾಧಿಕಾರಿ, ವರದಿಗೆ ಸೂಚಿಸಿದ್ದಾರೆ. ಈ ಮಧ್ಯೆ, ಬಿಬಿಎಂಪಿ ಕೂಡ, ಮಹದೇವಪುರ ಕಂದಾಯಾಧಿಕಾರಿ ಚಂದ್ರಶೇಖರ್ ಅವರನ್ನ ಅಮಾನತು ಮಾಡಿದೆ.
Advertisement
Advertisement
ಎಸ್ಸಿ, ಎಸ್ಟಿ, ಮುಸ್ಲಿಂ (SC, ST, Muslims) ಮತದಾರರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಿಸುವ ಕೆಲಸವನ್ನು ಚಿಲುಮೆ ಮಾಡ್ತಿದೆ ಎಂಬ ಆರೋಪವನ್ನು ನಿನ್ನೆಯಷ್ಟೇ ಕಾಂಗ್ರೆಸ್ ಮಾಡಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಾವಿರಾರು ಮಂದಿ ಹೆಸರು ಡಿಲೀಟ್ ಆಗಿದೆ. ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 21,968 ಮತದಾರರು, ಕೆ.ಆರ್.ಪುರಂ ಕ್ಷೇತ್ರದಿಂದ 39,763 ಮತದಾರರು, ಬ್ಯಾಟರಾಯನಪುರ ಕ್ಷೇತ್ರದಿಂದ 30,757 ಮತದಾರರ ಹೆಸರು ಡಿಲೀಟ್ ಆಗಿದೆ. ಇದನ್ನೂ ಓದಿ: ಚಿಲುಮೆ ಸಂಸ್ಥೆ ವಿರುದ್ಧ ಆರೋಪ ಬೆನ್ನಲ್ಲೇ ರಾಜ್ಯದಲ್ಲಿ 6 ಲಕ್ಷ ಮತದಾರರ ಹೆಸರು ಡಿಲೀಟ್
Advertisement
ಯಶವಂತಪುರ 35,829, ಆರ್.ಆರ್. ನಗರ 33,009, ದಾಸರಹಳ್ಳಿ 35,086, ಮಹಾಲಕ್ಷ್ಮೀ ಲೇಔಟ್ 20,404, ಮಲ್ಲೇಶ್ವರಂ 11,788, ಹೆಬ್ಬಾಳ 20,039, ಪುಲಕೇಶಿ ನಗರ 22,196, ಸರ್ವಜ್ಞ ನಗರ 28,691, ಸಿವಿ ರಾಮನ್ ನಗರ 21,457, ಶಿವಾಜಿನಗರ 14,679, ಶಾಂತಿನಗರ 20,386, ಗಾಂಧಿನಗರ 16,465, ರಾಜಾಜಿನಗರ 12,757, ಗೋವಿಂದರಾಜ್ ನಗರ 20,067, ವಿಜಯನಗರ 28,562, ಚಾಮರಾಜಪೇಟೆ 19,304, ಚಿಕ್ಕಪೇಟೆ 16,231, ಬಸವನಗುಡಿ 18,838, ಪದ್ಮನಾಭ ನಗರ 17,435, ಬಿಟಿಎಂ ಲೇಔಟ್ 16,141, ಜಯನಗರ 13,061, ಮಹಾದೇವಪುರ 33,376, ಬೊಮ್ಮನಹಳ್ಳಿ 31,157, ಬೆಂಗಳೂರು ಸೌತ್ 45,927, ಆನೇಕಲ್ 24,279 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಜನರ ಸರ್ವೇ ಮಾಡಿಸಿ ಚುನಾವಣೆಗೆ ಬಳಸಿಕೊಂಡಿದೆ: ಬೊಮ್ಮಾಯಿ
ಚಿಲುಮೆ ಎನ್‌ಜಿಓಗೆ ಬಿಜೆಪಿ ನಾಯಕರಿಂದ ಫಂಡಿಂಗ್:
ಚಿಲುಮೆ ಎಂಬ ಸರ್ಕಾರೇತರ ಸಂಸ್ಥೆಗೆ ರಾಜಕಾರಣಿಗಳ ನಂಟು ಇರೋದು ಪಬ್ಲಿಕ್ ಟಿವಿ (Public TV) ತನಿಖೆಯಲ್ಲಿ ಬಟಾಬಯಲಾಗಿದೆ. ಚಿಲುಮೆಯ ಬೆನ್ನೇರಿದ ಪಬ್ಲಿಕ್ ಟಿವಿಗೆ ಸ್ಫೋಟಕ ದಾಖಲೆ ಲಭ್ಯವಾಗಿದೆ. ಚಿಲುಮೆಯ ಖಾತೆಗೆ ರಾಜಕಾರಣಿಗಳು ಫಂಡಿಂಗ್ ಮಾಡಿರೋದು ಬಟಾಬಯಲಾಗಿದೆ. ಬಿಜೆಪಿಯ (BJP) ಮಾಜಿ ಶಾಸಕರೊಬ್ಬರು ಚಿಲುಮೆಗೆ ದೇಣಿಗೆ ನೀಡಿದ್ದಾರೆ. ಬಿಜೆಪಿಯ ಆ ಮುಖಂಡ 2018ರ ಚುನಾವಣೆಯಲ್ಲಿ ಸ್ಪರ್ಧಿಸೋ ವೇಳೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿರೋ ಅಫಿಡವಿಟ್‌ನಲ್ಲಿ ಚಿಲುಮೆ ಗ್ರೂಪ್‌ಗೆ ಒಮ್ಮೆ 17.50 ಲಕ್ಷ ರೂಪಾಯಿ, ಇನ್ನೊಮ್ಮೆ 50ಸಾವಿರ ರೂಪಾಯಿ ಫಂಡಿಂಗ್ ಮಾಡಿರೋ ಬಗ್ಗೆ ಉಲ್ಲೇಖಿಸಿದ್ದಾರೆ.
ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಜಕೀಯ ನಾಯಕರಿಗೆ ಮತದಾರರ ಮಾಹಿತಿಯನ್ನು ಚಿಲುಮೆ ಮಾರಾಟ ಮಾಡ್ತಿತ್ತಾ? ಕೆಲವಡೆ ಅಧಿಕೃತವಾಗಿ ಕ್ಷೇತ್ರ ಸಮೀಕ್ಷೆ ನಡೆಸಿತ್ತಾ ಎಂಬ ಪ್ರಶ್ನೆಗಳು ಎದ್ದಿವೆ. ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರೋ ಟ್ವೀಟ್ ಒಂದು ಚರ್ಚೆಗೆ ಗ್ರಾಸವಾಗಿದೆ. ಮತದಾರರ ಪಟ್ಟಿ (Voters List) ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್‌ನ ಸೇಡಿನ ಕತೆಯೂ ಅಲ್ಲ, ಕಾಂತಾರಾ ಚಿತ್ರದ ಗುಳಿಗ-ಪಂಜುರ್ಲಿಯ ದಂತ ಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]