ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ(Hampi) ಶ್ರೀ ವಿರೂಪಾಕ್ಷ ದೇವಸ್ಥಾನದ ಆನೆ ‘ಲಕ್ಷ್ಮೀ’ಯನ್ನು ತೀವ್ರ ವಿರೋಧ ಹಾಗೂ ಆಕ್ರೋಶದ ನಡುವೆಯೂ ಕೊನೆಗೂ ಕೋಲಾರಕ್ಕೆ(Kolara) ಸ್ಥಳಾಂತರ ಮಾಡಲಾಗಿದೆ. ಮುಜರಾಯಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತದ ನೇತೃತ್ವದಲ್ಲಿ ತಡರಾತ್ರಿ 1 ಗಂಟೆಯ ಬಳಿಕ ಅತ್ಯಂತ ಗೌಪ್ಯವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಲಕ್ಷ್ಮೀಯನ್ನು (Lakshmi Elephant) ಹಂಪಿಯಿಂದ ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿ ನಿನ್ನೆಯಷ್ಟೇ ಸ್ಥಳೀಯರು ಹಾಗೂ ಭಕ್ತರು ತೀವ್ರ ಹೋರಾಟ ನಡೆಸಿದ್ದರು. ಇತ್ತ ಸಾಮಾಜಿಕ ಜಾಲತಾಣಗಳಲ್ಲೂ ಆನೆಯನ್ನು ಹಂಪಿಯಲ್ಲೇ ಉಳಿಸಿಕೊಳ್ಳಬೇಕು ಎಂದು ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟೆಲ್ಲಾ ವಿರೋಧಗಳಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಡರಾತ್ರಿಯ ಕಾರ್ಯಾಚರಣೆಯ ಹಾದಿ ಹಿಡಿಯಿತು.
ಹಂಪಿ ಆನೆ ಲಕ್ಷ್ಮಿ ಸ್ಥಳಾಂತರಕ್ಕೆ ಭಾರಿ ವಿರೋಧ – ಮಾವುತನ ಕುಟುಂಬದ ಕಣ್ಣೀರು, ಸ್ಥಳೀಯರಿಂದ ಪ್ರತಿಭಟನೆ! https://t.co/YR6GCT1Ix6#Hampi #Elephant #Lakshmi #Protest #Ballari pic.twitter.com/XLWtnGqMUO
— PublicTV (@publictvnews) May 26, 2026
ವರ್ಷಗಳಿಂದ ಆನೆಯನ್ನು ತಮ್ಮದೇ ಮಗುವಿನಂತೆ ಸಾಕಿ ಸಲಹಿದ್ದ ಮಾವುತರ ಕುಟುಂಬಕ್ಕೆ ಈ ಸ್ಥಳಾಂತರ ತೀವ್ರ ಆಘಾತ ತಂದಿದೆ. ತಡರಾತ್ರಿ ಆನೆಯನ್ನು ಲಾರಿಗೆ ಹತ್ತಿಸುವ ಸಂದರ್ಭದಲ್ಲಿ ಮಾವುತರ ಕುಟುಂಬಸ್ಥರು ಆನೆಯನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತ್ತು. ಇದನ್ನೂ ಓದಿ: ಹಂಪಿ ಆನೆ ಲಕ್ಷ್ಮಿ ಸ್ಥಳಾಂತರಕ್ಕೆ ಭಾರಿ ವಿರೋಧ – ಮಾವುತನ ಕುಟುಂಬದ ಕಣ್ಣೀರು, ಸ್ಥಳೀಯರಿಂದ ಪ್ರತಿಭಟನೆ!
