ನವದೆಹಲಿ/ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಯಾವಾಗ ಎನ್ನುವ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿದೆ. ಆಷಾಢದಲ್ಲಿ ಸಂಪುಟ ವಿಸ್ತರಣೆಗೆ ನಿರ್ಧರಿಸಿರುವ ಹೈಕಮಾಂಡ್ (Congress Highcommand) ಜು.19ರಂದು ರಾಜ್ಯ ನಾಯಕರಿಗೆ ಬುಲಾವ್ ನೀಡುವ ಸಾಧ್ಯತೆ ಇದೆ. ಈ ಬಾರಿ ಸಂಪುಟದಲ್ಲಿ ಹೈಕಮಾಂಡ್ ಟ್ವಿಸ್ಟ್ ಕೊಡುವ ಸಾಧ್ಯತೆಯೂ ಇದೆ.
ಕಾಂಗ್ರೆಸ್ ಶಾಸಕರು ಎದುರು ನೋಡುತ್ತಿದ್ದ ಆ ದಿನ ಇನ್ನೇನು ಸನ್ನಿಹಿತವಾಗಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮುಹೂರ್ತ ಫಿಕ್ಸ್ ಆಗಿದೆ. ಈ ವಾರಂತ್ಯದಲ್ಲಿ ದೆಹಲಿಗೆ ತೆರಳಲಿರುವ ರಾಜ್ಯ ನಾಯಕರು ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ; ಜುಲೈ 19ಕ್ಕೆ ದೆಹಲಿಯಲ್ಲಿ ಹೈಕಮಾಂಡ್ ಸಭೆ
ಜು.18ರ ಸಂಜೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಜು.19ರಿಂದ ಎರಡು ದಿನಗಳ ಕಾಲ ಕಾಂಗ್ರೆಸ್ ಹೈಕಮಾಂಡ್ ಜೊತೆ ಸರಣಿ ಮಾತುಕತೆ ನಡೆಯುವ ಸಾಧ್ಯತೆಯಿದ್ದು, ಈ ಸಭೆ ಬಳಿಕ ಜುಲೈ 20 ಅಥವಾ 21ರಂದು ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆಯಲ್ಲೂ ಟ್ವಿಸ್ಟ್, ಮೂರು ಸ್ಥಾನ ಖಾಲಿ:
ಹೌದು, ಸಚಿವ ಸಂಪುಟ ವಿಸ್ತರಣೆಯಲ್ಲೂ ಹೈಕಮಾಂಡ್ ಟ್ವಿಸ್ಟ್ ಕೊಡಲಿದೆ ಎನ್ನಲಾಗುತ್ತಿದೆ. ಖಾಲಿ ಇರುವ 20 ಸ್ಥಾನಗಳ ಪೈಕಿ ಎಲ್ಲ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲ್ಲ. ಬದಲಿಗೆ ಮೂರು ಸ್ಥಾನಗಳನ್ನು ಖಾಲಿ ಉಳಿಸಿ ಉಳಿದ ಸ್ಥಾನಗಳನ್ನು ಭರ್ತಿ ಮಾಡುವ ಆಯ್ಕೆಯೂ ಹೈಕಮಾಂಡ್ ಅಂಗಳದಲ್ಲಿದೆ. ಪ್ರಾದೇಶಿಕ, ಜಾತಿ ಮತ್ತು ರಾಜಕೀಯ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಅಂತಿಮ ಪಟ್ಟಿ ರೂಪಿಸಲಾಗುತ್ತಿದ್ದು, ಎಚ್ಚರಿಕೆ ಭಾಗವಾಗಿ ಮೂರು ಸ್ಥಾನಗಳು ಖಾಲಿ ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ.ಇದನ್ನೂ ಓದಿ: ಮಳೆ ನಡುವೆ ಜಾಲಿ ರೈಡ್ – ಈ ಸಲ ನಾವು ಹೋಗ್ತಿದ್ದೇವೆ ಜಲಪಾತಗಳ ಜಿಲ್ಲೆಗೆ!
ಇನ್ನು, ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಲಕ್ ಯಾರಿಗೆ ಶಾಕ್ ಎಂಬ ಕುತೂಹಲ ಹೆಚ್ಚಿದೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಬಹುತೇಕ ಹಿರಿಯರಿಗೆ ಕೊಕ್ ಕೊಡಲಾಗುತ್ತಾ ಎಂಬ ಚರ್ಚೆಯೂ ನಡೆಯುತ್ತಿದೆ. ಈ ಬಾರಿ ಹಳಬರಿಗಿಂತ ಹೊಸಬರಿಗೆ ಹೆಚ್ಚಿನ ಮಣೆ ಎಂಬ ಲೆಕ್ಕಾಚಾರದ ಮಾತುಗಳು ಜೋರಾಗಿವೆ.
50-50 ಚಾನ್ಸ್?
ಜಮೀರ್, ಚಾಮರಾಜಪೇಟೆ ಕ್ಷೇತ್ರ
ಎಸ್.ಎಸ್.ಮಲ್ಲಿಕಾರ್ಜುನ, ದಾವಣಗೆರೆ ಉತ್ತರ ಕ್ಷೇತ್ರ
ಸಂತೋಷ ಲಾಡ್, ಕಲಘಟಗಿ ಕ್ಷೇತ್ರ
ಶಿವರಾಜ್ ತಂಗಡಗಿ, ಕನಕಗಿರಿ ಕ್ಷೇತ್ರ
ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರ
ಮಂಕಾಳು ವೈದ್ಯ, ಭಟ್ಕಳ ಕ್ಷೇತ್ರ
ಮಧು ಬಂಗಾರಪ್ಪ, ಸೊರಬ ಕ್ಷೇತ್ರ
ಆರ್.ಬಿ.ತಿಮ್ಮಾಪುರ್, ಮುಧೋಳ ಕ್ಷೇತ್ರ
ನಾಗೇಂದ್ರ, ಬಳ್ಳಾರಿ ಗ್ರಾಮೀಣ ಕ್ಷೇತ್ರ. ಇವರಿಗೆ ಸಚಿವ ಸ್ಥಾನ ಸಿಗಬಹುದು ಅಥವಾ ಸಿಗದೆಯೋ ಇರಬಹುದು.
ಯಂಗ್ ಆಂಡ್ ಎಲೆಕ್ಷನ್ ಟೀಂಗೆ ರಾಹುಲ್ ಗಾಂಧಿ ಬಳಿ ಬ್ಲೂಪ್ರಿಂಟ್ ಸಿದ್ದವಿದೆಯಂತೆ. ಸಿದ್ದರಾಮಯ್ಯ, ಡಿಕೆಶಿ ಕೊಡುವ ಲಿಸ್ಟ್ ಮೇಲೆ ಕಣ್ಣಾಡಿಸೋ ಜೊತೆಗೆ 20 ಸಚಿವ ಸ್ಥಾನಗಳಲ್ಲಿ ಡಜನ್‌ನಷ್ಟು ಸಚಿವ ಸ್ಥಾನವನ್ನು ರಾಹುಲ್ ಅವರೇ ಪಿಕ್ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಹೇಳಿದ ಎಲ್ಲರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಬಗ್ಗೆಯೂ ಅನುಮಾನಗಳಿವೆ.ಇದನ್ನೂ ಓದಿ: ಇಂಡೋನೇಷ್ಯಾದಿಂದ ಕಾಂಬೋಡಿಯಾದವರೆಗೆ – ವಿದೇಶದಲ್ಲಿರುವ ಪುರಾತನ ಹಿಂದೂ ದೇವಾಲಯಗಳಿಗೆ ಮರುಜೀವ ನೀಡುತ್ತಿರೋದ್ಯಾಕೆ ಭಾರತ?
ಸಚಿವ ಸ್ಥಾನದ ಆಕಾಂಕ್ಷಿಗಳು
ಲಕ್ಷ್ಮಣ ಸವದಿ -ಅಥಣಿ ಕ್ಷೇತ್ರ
ಅಪ್ಪಾಜಿ ನಾಡಗೌಡ- ಮುದ್ದೇಬಿಹಾಳ
ಬಸವರಾಜ್ ರಾಯರೆಡ್ಡಿ- ಯಲಬುರ್ಗ
ರಘು ಮೂರ್ತಿ – ಚಳ್ಳಕೆರೆ
ಗುಬ್ಬಿ ಶ್ರೀನಿವಾಸ್ – ಗುಬ್ಬಿ
ಟಿ.ಬಿ.ಜಯಚಂದ್ರ- ಶಿರಾ
ಶಿವಲಿಂಗೇಗೌಡ- ಅರಸೀಕೆರೆ
ನರೇಂದ್ರ ಸ್ವಾಮಿ- ಮಳವಳ್ಳಿ
ಪುಟ್ಟರಂಗ ಶೆಟ್ಟಿ- ಚಾಮರಾಜನಗರ
ರಿಜ್ವಾನ್ ಅರ್ಷದ್ – ಶಿವಾಜಿನಗರ
ಲೇಔಟ್ ಕೃಷ್ಣಪ್ಪ – ವಿಜಯನಗರ
ಶರತ್ ಬಚ್ಚೇಗೌಡ- ಹೊಸಕೋಟೆ
ಸುಬ್ಬಾರೆಡ್ಡಿ- ಬಾಗೆಪಲ್ಲಿ
ವೈ.ಎ.ನಾರಾಯಣ ಸ್ವಾಮಿ- ಬಂಗಾರಪೇಟೆ
ಬೇಳೂರು ಗೋಪಾಲಕೃಷ್ಣ – ಸಾಗರ
ಶ್ರೀನಿವಾಸ – ತರೀಕೆರೆ
ಆರ್.ವಿ.ದೇಶಪಾಂಡೆ- ಹಳಿಯಾಳ
ರುದ್ರಪ್ಪ ಲಮಾಣಿ- ಹಾವೇರಿ
ಅಶೋಕ್ ಪಟ್ಟಣ್ – ರಾಮದುರ್ಗ
ಬಾಲಕೃಷ್ಣ- ಮಾಗಡಿ
ಶ್ರೀನಿವಾಸ ಮಾನೆ- ಹಾನಗಲ್
ರಾಘವೇಂದ್ರ ಹಿಟ್ನಾಳ್ – ಕೊಪ್ಪಳ
ಎನ್.ಎ.ಹ್ಯಾರಿಸ್- ಶಾಂತಿನಗರ
ಶಿವಣ್ಣ- ಆನೇಕಲ್
ಎಂ.ವೈ.ಗೋಪಾಲಕೃಷ್ಣ- ಮೊಳಕಾಲ್ಮೂರ್
ತನ್ವೀರ್ ಸೇಠ್ – ನರಸಿಂಹ ರಾಜ
ಎ.ಎಸ್.ಪೊನ್ನಣ್ಣ- ವಿರಾಜಪೇಟೆ. ಇವರೆಲ್ಲಾ ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ. ಯಾರಿಗೆ ಅದೃಷ್ಠ ಒಲಿಯುತ್ತೋ ಅಂತ ಕಾದು ನೋಡಬೇಕಿದೆ.
ಇಂದಿನಿಂದ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಲಭ್ಯವಿರಲಿದ್ದಾರೆ. ಸಿಎಂ ಆಗಮನಕ್ಕೂ ಮುನ್ನ ಶಾಸಕರು, ಮಾಜಿ ಸಚಿವರು ಒಂದು ರೌಂಡ್ ಹೈಕಮಾಂಡ್ ನಾಯಕರ ಭೇಟಿಗೆ ಪ್ಲಾನ್ ಮಾಡಿದ್ದಾರೆ. ಆ ಮೂಲಕ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಗೇಮ್ ಶುರು ಮಾಡಿದ್ದಾರೆ.ಇದನ್ನೂ ಓದಿ:ಬೇರೆಯವ್ರ ನೋವಿನ ಬಗ್ಗೆ ಚುಚ್ಚಿ ಮಾತನಾಡಬೇಡಿ: ಗೆಳೆಯ ವೈಶಾಕ್ ಸಾವಿನ ಬಳಿಕ ನಟಿ ಕೃಷಿ ತಾಪಂಡ ಮೊದಲ ಮಾತು
