– ಇದೇ ಮೊದಲ ಬಾರಿಗೆ ದೇವಸ್ಥಾನಕ್ಕೆ ಬಂದ ದೊಡ್ಡ ಮೊತ್ತದ ಆಭರಣ ದೇಣಿಗೆ
ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಯ (Anjanadri Hills) ಆಂಜನೇಯನಿಗೆ ಉದ್ಯಮಿಯೊಬ್ಬರು 2.5 ಕೋಟಿ ರೂ. ಮೌಲ್ಯದ ಆಭರಣವನ್ನು ದೇಣಿಗೆ ನೀಡಿದ್ದಾರೆ.
ಎಎಂಆರ್ ಕನ್‌ಸ್ಟ್ರಕ್ಷನ್ ಕಂಪನಿಯ ಮಾಲೀಕ ಹಾಗೂ ಶಾಸಕ ಜನಾರ್ದನ ರೆಡ್ಡಿ (Janardhana Reddy) ಸ್ನೇಹಿತ ಮಹೇಶ ರೆಡ್ಡಿಯವರು (Mahesh Reddy) ಅಂಜನಾದ್ರಿಯ ಆಂಜನೇಯನಿಗೆ 2.5 ಕೋಟಿ ರೂ. ಮೌಲ್ಯದ ಆಭರಣವನ್ನು ದೇಣಿಗೆ ನೀಡಿದ್ದಾರೆ. ಇದನ್ನೂ ಓದಿ: ಡಿಎಂಕೆ, ಅಣ್ಣಾಡಿಎಂಕೆ ಸರ್ಕಾರ ರಚಿಸಲು ಮುಂದಾದ್ರೆ ಟಿವಿಕೆಯ ಎಲ್ಲಾ 108 ಶಾಸಕರು ರಾಜೀನಾಮೆ!
ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟ ಆಂಜನೇಯನ ಜನ್ಮಸ್ಥಳ. ಉದ್ಯಮಿ ಮಹೇಶ ಅವರು ದಂಪತಿ ಸಮೇತ ಅಂಜನಾದ್ರಿಗೆ ಆಗಮಿಸಿ, ಆಂಜನೇಯನಿಗೆ ಸಂಕಲ್ಪ ಪೂಜೆ, ಸುಪ್ರಭಾತ ಸೇವೆ ಸಲ್ಲಿಸಿದ್ದಾರೆ. ಪೂಜೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ದಂಪತಿ ಹಾಗೂ ಮಹೇಶ ರೆಡ್ಡಿ ದಂಪತಿ ಭಾಗಿಯಾಗಿದ್ದರು.
ಪೂಜೆ ಬಳಿಕ 2.5 ಕೋಟಿ ರೂ. ಮೌಲ್ಯದ ಚಿನ್ನದ ಪ್ರಭಾವಳಿ, ಚಕ್ರ, ಕಿರೀಟ ಮತ್ತು ಗದೆಯನ್ನು ದೇಣಿಗೆ ರೂಪದಲ್ಲಿ ಗಂಗಾವತಿ ತಾಲೂಕು ಆಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ. ಈ ಮೂಲಕ ಅಂಜನಾದ್ರಿ ದೇವಸ್ಥಾನಕ್ಕೆ ಮೊದಲ ಬಾರಿಗೆ ದೊಡ್ಡ ಮೊತ್ತದ ಬಂಗಾರ ದೇಣಿಗೆಯಾಗಿ ಬಂದಿದೆ.ಇದನ್ನೂ ಓದಿ: ಅಪ್ರಾಪ್ತ ಹಿಂದೂ ಬಾಲಕಿ ಪುಸಲಾಯಿಸಿ ಲವ್ ಜಿಹಾದ್ ಶಂಕೆ – ಪ್ರಶ್ನಿಸಿದ 8 ಭಜರಂಗದಳ ಕಾರ್ಯಕರ್ತರು ಅರೆಸ್ಟ್
.

