ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್‍ಗೆ ಕ್ಷಣಗಣನೆ ಶುರುವಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 4ನೇ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಬಜೆಟ್ ಮೇಲೆ ನಿರೀಕ್ಷೆಗಳ ಮಹಾಪೂರವೇ ಇದ್ದು, ಕಳೆದೆರಡು ವರ್ಷಗಳಿಂದ ಕೋವಿಡ್‍ನಿಂದ ತತ್ತರಿಸಿರುವ ಆರ್ಥಿಕತೆಗೆ ಬೂಸ್ಟರ್ ಡೋಸ್ ಸಿಗಬಹುದು ಎನ್ನಲಾಗಿದೆ.
Advertisement
ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡನೆಯಾಗಲಿದ್ದು, ಈ ಬಾರಿಯೂ ಪೇಪರ್ ಲೆಸ್ ಬಜೆಟ್ ಮಂಡನೆಯಾಗಲಿದೆ. ಇದನ್ನೂ ಓದಿ: ಕೇಂದ್ರವು ಅಧಿಕ ತೆರಿಗೆ ಸಂಗ್ರಹಕ್ಕೆ ಒತ್ತು ಕೊಡ್ತಿದೆಯೇ ಹೊರತು ಜನರ ನೋವಿಗೆ ಸ್ಪಂದಿಸ್ತಿಲ್ಲ: ರಾಹುಲ್ ಗಾಂಧಿ
Advertisement
Advertisement
ಹೇಗಿರಬಹುದು ನಿರ್ಮಲಾ ಬಜೆಟ್?
* ದೀರ್ಘಕಾಲಿಕ ಯೋಜನೆಗಳಿಗೆ ಹೆಚ್ಚು ಆದ್ಯತೆ
* ಗ್ರಾಮೀಣ ಜನತೆಗೆ ಹತ್ತಿರವಾಗುವ ಅಂಶ ಇರಬಹುದು. ಕೃಷಿ ಕಾಯ್ದೆ ವಿವಾದ ಹಾಗೂ ಪಂಚ ರಾಜ್ಯ ಚುನಾವಣೆಗಳ ಹಿನ್ನೆಲೆಯಲ್ಲಿ ರೈತರಿಗೆ ಖುಷಿ ನೀಡಬಹುದು ಎನ್ನಲಾಗಿದೆ.
* ರೈತ ಹೋರಾಟದ ಕಾವು ತಣಿಸುವ ಘೋಷಣೆಗಳ ನಿರೀಕ್ಷೆಯಿದ್ದು ಕಿಸಾನ್ ಸಮ್ಮಾನ್ ಯೋಜನೆ ಮೊತ್ತ ಹೆಚ್ಚಳ ಮಾಡುವ ಸಾಧ್ಯತೆಯಿದೆ.
Advertisement
* ಬೆಂಬಲ ಬೆಲೆ ಬಗ್ಗೆ ಮಹತ್ವದ ತೀರ್ಮಾನ ಆಗಬಹುದು
* ನಗರ/ಪಟ್ಟಣ ಪ್ರದೇಶಗಳಲ್ಲಿ ನರೇಗಾದಂತಹ ಯೋಜನೆ ಜಾರಿಗೊಳಿಸಿ ಉದ್ಯೋಗ ಸೃಷ್ಟಿಗೆ ಮುಂದಾಗಬಹುದು
* ಹೆಚ್ಚು ಹೊಸ ಯೋಜನೆ ಬದಲು ಇರುವ ಯೋಜನೆಗಳಿಗೆ ಬಲ!
* ಎಲೆಕ್ಷನ್ ರಾಜ್ಯಗಳಿಗೆ `ಮೂಲಸೌಕರ್ಯ’ದ ಬಂಪರ್ ನಿರೀಕ್ಷೆ
* ರೈಲು ಮಾರ್ಗಗಳ ಖಾಸಗೀಕರಣಕ್ಕೆ ಒತ್ತು ನೀಡದೇ ಇರಬಹುದು
* ವಿದ್ಯುತ್ ಕಂಪೆನಿಗಳ ಖಾಸಗೀಕರಣ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ
* ಸ್ಟಾರ್ಟ್ ಅಪ್‍ಗಳಲ್ಲಿ ದೇಶೀಯ ಹೂಡಿಕೆಗೆ ಮತ್ತಷ್ಟು ಪ್ರೋತ್ಸಾಹಕ ಕ್ರಮ
* ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಇನ್ನಷ್ಟು ಆರ್ಥಿಕ ನೆರವು
* ಕ್ರಿಪ್ಟೋಕರೆನ್ಸಿ ನೀಡೋ ಕಂಪನಿಗಳು ಜಿಎಸ್‍ಟಿ ವ್ಯಾಪ್ತಿಗೆ..?
* ವರ್ಕ್ ಫ್ರಂ ಹೋಂ ಭತ್ಯೆಗೆ ತೆರಿಗೆ ವಿನಾಯ್ತಿ ನಿರೀಕ್ಷೆ
ಈ ಬಾರಿ ನಿರ್ಮಲಾ ಸೀತಾರಾಮನ್ ಮಂಡಿಸುವ `ಮೋದಿ ಮನಿ ಮಾತಿ’ನಲ್ಲಿ ಹಲವು ನಿರೀಕ್ಷೆಗಳು ಇವೆ. ಇದನ್ನೂ ಓದಿ: Budget 2022: ನಿರ್ಮಲಾ ಬಜೆಟ್ ನಿರೀಕ್ಷೆಗಳೇನು?
ಮೋದಿ ಬಜೆಟ್ ಗಿಫ್ಟ್ ಸಾಧ್ಯತೆಗಳು: ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಜನರಿಗೆ ಖುಷಿ ನೀಡುವ ಸಾಧ್ಯತೆಗಳು ಯಾವುದು ಎಂಬುದನ್ನು ನೋಡುವುದಾದರೆ, ಇದನ್ನೂ ಓದಿ: Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ
* ಗೃಹ ಸಾಲ ಇನ್ನಷ್ಟು ಅಗ್ಗ ಸಾಧ್ಯತೆ
* ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ವಿನಾಯ್ತಿ
* ಆದಾಯ ತೆರಿಗೆ ಮಿತಿ ಹೆಚ್ಚಳ (ಸದ್ಯ 2.5 ಲಕ್ಷ)
* 80ಸಿ ಯಡಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ (ಸದ್ಯ 1.50 ಲಕ್ಷ)
* ಹೂಡಿಕೆ, ಉಳಿತಾಯ ಠೇವಣಿ ಮೇಲೆ ಇನ್ನಷ್ಟು ತೆರಿಗೆ ಕಡಿತ
* ಅಶಕ್ತರಿಗೆ ಮತ್ತಷ್ಟು ಆರ್ಥಿಕ ಭದ್ರತೆ
* ವರ್ಕ್‍ಫ್ರಂ ಹೋಂ ಭತ್ಯೆಗೆ ತೆರಿಗೆ ವಿನಾಯ್ತಿ ನಿರೀಕ್ಷೆ
* ರಿಯಲ್ ಎಸ್ಟೇಟ್ ವಲಯಕ್ಕೆ ಮತ್ತಷ್ಟು ಪ್ರೋತ್ಸಾಹಕ
* ಎಲೆಕ್ಟ್ರಿಕಲ್ ವಾಹನಗಳಿಗೆ ಸಬ್ಸಿಡಿ
* ಗ್ರಾಮೀಣ ಪ್ರದೇಶದಲ್ಲಿ ಮತ್ತಷ್ಟು ಆರೋಗ್ಯ ಸೌಲಭ್ಯ
* ಪ್ರಾಣ ರಕ್ಷಕ ಔಷಧಿಗಳ ಮೇಲಿನ ಜಿಎಸ್‍ಟಿ ಕಡಿತ
* ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ
* ರೈಲು ಪ್ರಯಾಣ ದರ, ಸರಕು ಸಾಗಾಟ ದರದಲ್ಲಿ ಯಥಾಸ್ಥಿತಿ.
ಮೋದಿ ಬಜೆಟ್ ಶಾಕ್ ಸಾಧ್ಯತೆ: ಖುಷಿಯ ಜೊತೆಗೆ ಕೆಲ ವಿಚಾರದಲ್ಲಿ ಕೇಂದ್ರ ಸರ್ಕಾರ ಶಾಕ್ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
* ತೈಲ ದರ ಇಳಿಕೆ ಅನುಮಾನ
* ಮದ್ಯ ಇನ್ನಷ್ಟು ದುಬಾರಿ?
* ಸಿಗರೇಟ್, ತಂಬಾಕು ಉತ್ಪನ್ನ ದುಬಾರಿ
* ಆಹಾರ ಸಬ್ಸಿಡಿ ಕಟ್?
* ರಸಗೊಬ್ಬರದ ಮೇಲಿನ ಸಬ್ಸಿಡಿ ಕಟ್
* ಕ್ರಿಪ್ಟೋಕರೆನ್ಸಿ ಆದಾಯದ ಮೇಲೆ ತೆರಿಗೆ
* ಮೊಬೈಲ್ ಫೋನ್ ದುಬಾರಿ