ಮುಂಬೈ: ಕ್ರಿಕೆಟ್ ಜಗತ್ತಿನ ಅಚ್ಚರಿಯ ಬಾಲಕ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿ ಎಂಬ ಆಗ್ರಹ ಕಳೆದೊಂದು ವರ್ಷದಿಂದ ನಿರಂತರವಾಗಿತ್ತು. ಇದೀಗ 15ರ ಹರೆಯದಲ್ಲಿ ಟೀಂ ಇಂಡಿಯಾಗೆ ಸೇರ್ಪಡೆಗೊಂಡಿದ್ದಾರೆ. ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲಿರುವ ವೈಭವ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶೇಷ ರಿಯಾಯ್ತಿ ನೀಡಿದೆ.

ರಾಷ್ಟ್ರೀಯ ತಂಡಕ್ಕೆ ವೈಭವ್ ಆಯ್ಕೆಯಾಗಿದ್ದರೂ ಅವರ ವಯಸ್ಸು ಮತ್ತು ಅಗತ್ಯಗೆಗಳನ್ನ ಪರಿಗಣಿಸಬೇಕಾಗಿದೆ. ಆದ್ದರಿಂದ ಟಿ20 ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಹೊರಡಲಿರುವ ಸೂರ್ಯವಂಶಿ ಜೊತೆಗೆ ಪೋಷಕರೂ ಪ್ರಯಾಣಿಸಲು ಬಿಸಿಸಿಐ (BCCI) ಅನುಮತಿ ನೀಡಿದೆ. ವೈಭವ್ ವಯಸ್ಸು, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪರಿಸ್ಥಿತಿ ಮತ್ತು ಹಿರಿಯರ ತಂಡದಲ್ಲಿದ್ದ ವಾತಾವರಣ ಗಮನದಲ್ಲಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ಶ್ರೇಯಸ್ ಅಯ್ಯರ್ ನಾಯಕನಾಗಿ ಅಯ್ಕೆಯಾಗಿರುವುದು ಸಂತಸ ತಂದಿದೆ – ಸೂರ್ಯಕುಮಾರ್ ಯಾದವ್

ವೈಭವ್ ಸೂರ್ಯವಂಶಿ ಇನ್ನೂ ಅಪ್ರಾಪ್ತನಾಗಿದ್ದಾನೆ. ಈವರೆಗೆ ತನ್ನ ವಯಸ್ಸಿನ ಆಟಗಾರರೊಂದಿಗೆ ವಿದೇಶಕ್ಕೆ ಪ್ರಯಾಣಿಸಿದ್ದಾನೆ, ಟೂರ್ನಿ ಆಡಿದ್ದಾನೆ. ಆದ್ರೆ ಹಿರಿಯರ ತಂಡದೊಂದಿಗಿನ ವಾತಾವರಣ ಸಂಪೂರ್ಣ ಭಿನ್ನವಾಗಿರುತ್ತದೆ. ಈ ಸಂದರ್ಭದಲ್ಲಿ ಪೋಷಕರು ಅವರೊಟ್ಟಿಗೆ ಇದ್ದು ಬೆಂಬಲ ನೀಡುವುದು ಸೂಕ್ತ ಅನ್ನೋ ಕಾರಣಕ್ಕೆ ಪೋಷಕರು ಅಥವಾ ಕುಟುಂಬ ಸದಸ್ಯರು ಅವರೊಟ್ಟಿಗೆ ಇರಲು ಅವಕಾಶ ಮಾಡಿಕೊಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ವೈಭವ್ ಪ್ರಸ್ತುತ ಶ್ರೀಲಂಕಾದಲ್ಲಿ (SriLanka) ಭಾರತ ʻಎʼ ತಂಡದೊಂದಿಗೆ ತ್ರಿಕೋನ ಸರಣಿಯನ್ನಾಡುತ್ತಿದ್ದಾರೆ. ಅವರ ತಂದೆ ಕೂಡ ಶೀಘ್ರದಲ್ಲೇ ಅಲ್ಲಿಗೆ ತೆರಳುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಕುಟುಂಬಸ್ಥರು ಅಥವಾ ಪೋಷಕರು ವೈಭವ್ ಜೊತೆಗೆ ಪ್ರಯಾಣಿಸಲು ಬಯಸಿದ್ರೆ, ಬಿಸಿಸಿಐ ಅಗತ್ಯ ವ್ಯವಸ್ಥೆ ಮಾಡಲಿದೆ. ಆದ್ರೆ ಈ ಸೌಲಭ್ಯ ಇತರೇ ಆಟಗಾರಿರಿಗೆ ಇರೋದಿಲ್ಲ ಎಂದು ಹೇಳಿದ್ದಾರೆ.

ಆರೆಂಜ್ ಕ್ಯಾಪ್ ಪ್ರತಿಫಲ
ಐಪಿಎಲ್ 2026 ರಲ್ಲಿ 776 ರನ್ ಬಾರಿಸಿ ಆರೆಂಜ್ ಕ್ಯಾಪ್ ಮತ್ತು ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ (MVP) ಪ್ರಶಸ್ತಿ ಗೆದ್ದು ಅದ್ಭುತ ಪ್ರದರ್ಶನ ನೀಡಿದ್ದ ವೈಭವ್ ಅವರಿಗೆ ಕೊನೆಗೂ ಸೂಕ್ತ ಪ್ರತಿಫಲ ಸಿಕ್ಕಿದೆ. ಭಾರತದ 3 ಟಿ20 ಸರಣಿಗಳ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: PublicTV Explainer | ಕಾಂಟ್ರ್ಯಾಕ್ಟ್‌ನಿಂದಲೇ ಹೊರದಬ್ಬಿದ ಅಯ್ಯರ್‌ಗೆ ಇಂದು ಟೀಂ ಇಂಡಿಯಾ ನಾಯಕನ ಪಟ್ಟ!
