ಡಾ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 6 ತಿಂಗಳಾದರೂ ಅವರು ಎಲ್ಲರ ಮನದಲ್ಲಿ ಅಜರಾಮರರಾಗಿದ್ದಾರೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳು ಅವರಿಗೋಸ್ಕರ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತ ಇರುತ್ತಾರೆ. ಇವರಿಗೆ ಸಿನಿ ಕ್ಷೇತ್ರದ ಎಲ್ಲ ಭಾಷೆಯಲ್ಲಿಯೂ ಸ್ನೇಹಿತ ಬಂಧುಗಳು ಹೆಚ್ಚು ಇದ್ದಾರೆ. ಈ ಹಿನ್ನೆಲೆ ಅವರ ಸಮಾಧಿ ಮತ್ತು ಮನೆಗೆ ಹಲವು ಗಣ್ಯರು ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವದ ಮಾತುಗಳನ್ನು ಹೇಳುತ್ತಾರೆ.
Advertisement
ಟಾಲಿವುಡ್ ಸೂಪರ್ ಸ್ಟಾರ್, ಕಾಮಿಡಿ ಕಿಂಗ್ ಬ್ರಹ್ಮಾನಂದಂ ಹಾಗೂ ಅಲಿ ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅಪ್ಪು ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಅಪ್ಪು ಜೊತೆಗೆ ಕಳೆದ ದಿನಗಳನ್ನು ಬ್ರಹ್ಮಾನಂದಂ ಅಪ್ಪು ಕುಟುಂಬದೊಂದಿಗೆ ಸ್ಮರಿಸಿಕೊಂಡಿದ್ದಾರೆ. ಇದೇ ವೇಳೆ ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಬ್ರಹ್ಮಾನಂದಂ ಹಾಗೂ ಅಲಿ ಸಾಂತ್ವಾನದ ಮಾತುಗಳನ್ನ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ
Advertisement
Advertisement
ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್‍ಕುಮಾರ್, ರಾಮ್ ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್, ಯುವ ರಾಜ್‍ಕುಮಾರ್ ಸಹ ಇದ್ದರು. ಅವರೊಂದಿಗೂ ಹಲವು ಹೊತ್ತು ಮಾತುಕತೆ ನಡೆಸಿದ್ದಾರೆ.
Advertisement
ಟಾಲಿವುಡ್ ಹಾಸ್ಯನಟರಾದ ಅಲಿ ಹಾಗೂ ಬ್ರಹ್ಮಾನಂದಂ ಇಬ್ಬರೂ ಪವರ್ ಜೊತೆ ಒಳ್ಳೆಯ ಸಂಬಂಧವೊಂದಿದ್ದರು. ಅಲ್ಲದೇ ಬ್ರಹ್ಮಾನಂದಂ ಅವರು ಅಪ್ಪು ಜೊತೆ ‘ನಿನ್ನಿಂದಲೇ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಇವರ ಪಾತ್ರ ಚಿಕ್ಕದಿದ್ದರೂ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ಸನ್ನು ಕಂಡಿದ್ದರು.