ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಹರಿಯಾಣದ (Haryana) ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ (Gurmeet Ram Rahim) ಮತ್ತೆ ಬಿಡುಗಡೆ ಭಾಗ್ಯ ಸಿಕ್ಕಿದೆ. 2017ರಲ್ಲಿ ಜೈಲು ಸೇರಿದ ಬಳಿಕ 16ನೇ ಬಾರಿಗೆ 30 ದಿನಗಳ ಅವಧಿಗೆ ಪೆರೋಲ್ ದೊರಕಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್‌ಗೆ 2017ರಿಂದ 16ನೇ ಬಾರಿಗೆ ಪೆರೋಲ್ ಮಂಜುರಾಗಿದ್ದು, 30 ದಿನಗಳ ಅವಧಿಗೆ ನೀಡಲಾಗಿದೆ. ಪೆರೋಲ್ ಅವಧಿಯಲ್ಲಿ ರಾಮ್ ರಹೀಮ್ ಸಿರ್ಸಾದಲ್ಲಿರುವ ಡೆರಾ ಸಚ್ಚಾ ಸೌದಾ ಮುಖ್ಯ ಕಚೇರಿಯಲ್ಲಿ ತಂಗಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಅತ್ಯಾಚಾರ ಅಪರಾಧಿ ರಾಮ್ ರಹೀಮ್‌ಗೆ ಮತ್ತೆ ಬಿಡುಗಡೆ ಭಾಗ್ಯ – 15ನೇ ಬಾರಿಗೆ 40 ದಿನ ಪೆರೋಲ್
ರಾಮ್ ರಹೀಂಗೆ ಸರಣಿ ಪೆರೋಲ್ ನೀಡಲಾಗುತ್ತಿದ್ದು, ಇದಕ್ಕೂ ಮುನ್ನ ಕಳೆದ 2026ರ ಜನವರಿ ತಿಂಗಳಿನಲ್ಲೂ ಆತನಿಗೆ 15 ಬಾರಿಗೆ ಪೆರೋಲ್ ಮಂಜೂರು ಮಾಡಲಾಗಿತ್ತು. ಅದಲ್ಲದೇ 2025ರ ಆಗಸ್ಟ್ ತಿಂಗಳಲ್ಲಿ 40 ದಿನಗಳ ಕಾಲ 14ನೇ ಬಾರಿಗೆ, 2025ರ ಏಪ್ರಿಲ್‌ನಲ್ಲಿ 21 ದಿನ ಹಾಗೂ 2025ರ ಜನವರಿಯಲ್ಲಿ 30 ದಿನಗಳ ಕಾಲ ಪೆರೋಲ್ ನೀಡಲಾಗಿತ್ತು.
ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 2017ರಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2019ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣದಲ್ಲೂ ರಾಮ್ ರಹೀಮ್ ಸೇರಿದಂತೆ ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.ಇದನ್ನೂ ಓದಿ: ರೇಪ್ ಅಪರಾಧಿ ರಾಮ್ ರಹೀಮ್‌ಗೆ 14ನೇ ಪೆರೋಲ್ – 3 ತಿಂಗಳ ಬಳಿಕ ಮತ್ತೆ 40 ದಿನ ರಜೆ!
