ನವದೆಹಲಿ: ಬಹುಜನ ಸಮಾಜ ಪಕ್ಷದ (BSP) ಸಂಸದ ಡ್ಯಾನಿಶ್ ಅಲಿ (Danish Ali) ಅವರನ್ನು ಬಿಜೆಪಿ ಸಂಸದ ರಮೇಶ್ ಬಿಧುರಿ (Ramesh Bidhuri) ಅವರು ಲೋಕಸಭೆಯಲ್ಲಿ ಮುಲ್ಲಾ, ಭಯೋತ್ಪಾದಕ ಎಂದು ಕರೆಯುವ ಮೂಲಕ ನಿಂದಿಸಿದ್ದಾರೆ.
ಲೋಕಸಭೆಯಲ್ಲಿ ಚಂದ್ರಯಾನದ ಯಶಸ್ಸು ಕುರಿತು ಚರ್ಚೆಯ ಸಂದರ್ಭದಲ್ಲಿ ರಮೇಶ್ ಬಿಧುರಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ರಮೇಶ್ ಬಿಧುರಿ ಹೇಳಿಕೆಯ ವಿರುದ್ಧ ಸ್ಪೀಕರ್ ಓಂ ಬಿರ್ಲಾ (Om Birla) ಸಿಟ್ಟಾಗಿದ್ದು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಸನ್ಮಾನ- ತಲೆಬಾಗಿ ಕೈಮುಗಿದ ಪ್ರಧಾನಿ
Advertisement
"BJP must suspend him (Ramesh Bidhuri) from the party," says Congress MP @KartiPC .
"Ramesh Bidhuri's statements is condemnable," says TMC MP @SaugataRoyMP. #News #RameshBidhuri @nabilajamal_ pic.twitter.com/K6Sl1xSiWN
— IndiaToday (@IndiaToday) September 22, 2023
Advertisement
ಡ್ಯಾನಿಶ್ ಅಲಿ ಲೋಕಸಭೆಯಲ್ಲಿ (Lok Sabha) ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಧುರಿ ಹೇಳಿಕೆಗೆ ರಕ್ಷಣಾ ಸಚಿವ ಮತ್ತು ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್ (Rajnath Singh) ವಿಷಾದ ವ್ಯಕ್ತಪಡಿಸಿದ್ದಾರೆ.
Advertisement
ಸದಸ್ಯರು ಮಾಡಿದ ಟೀಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಕ್ಷಣಾ ಸಚಿವರು ಹೇಳಿದರು. ಪ್ರತಿಪಕ್ಷಗಳು ಕ್ಷಮೆಯಾಚನೆ ಸಾಕಾಗುವುದಿಲ್ಲ. ಬಿಧುರಿ ಅವರನ್ನು ಅಮಾನತುಗೊಳಿಸಬೇಕು ಅಥವಾ ಬಂಧಿಸಬೇಕು ಎಂದು ಹೇಳಿವೆ.
Advertisement
ಇದು ಸಂಪೂರ್ಣ ನಾಚಿಕೆಗೇಡಿನ ಸಂಗತಿ. ರಾಜನಾಥ್ ಸಿಂಗ್ ಅವರ ಕ್ಷಮೆಯಾಚನೆ ಸ್ವೀಕಾರಾರ್ಹವಲ್ಲ ಮತ್ತು ಅರೆಮನಸ್ಸಿನದು. ಇದು ಸಂಸತ್ತಿಗೆ ಮಾಡಿದ ಅವಮಾನ. ಇದು ಅಮಾನತುಗೊಳಿಸಬಹುದಾದ ಸ್ಪಷ್ಟ ಪ್ರಕರಣ. ಬಿಧುರಿ ಹೇಳಿಕೆಯಿಂದ ಪ್ರತಿಯೊಬ್ಬ ಭಾರತೀಯನಿಗೂ ಅವಮಾನವಾಗಿದೆ” ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
Web Stories