Connect with us

Bollywood

ಡ್ರಗ್ಸ್ ನಶೆಯಲ್ಲಿ ದೇಶ ವಿರೋಧಿಗಳ ಜತೆ ದೀಪಿಕಾ ನಿಲ್ತಿದ್ರು: ಬಿಜೆಪಿ ನಾಯಕ

Published

on

-ನಶೆಯ ಘಾಟಿನಲ್ಲಿ ಮಸ್ತಾನಿ
-ಎನ್‍ಸಿಬಿ ವಿಚಾರಣೆಗೆ ಒಳಗಾಗ್ತಾರಾ ಕಾಕ್‍ಟೈಲ್ ಚೆಲುವೆ?
-ದೀಪಿಕಾ ಕೇಳಿದ್ದ ‘ಮಾಲ್’ ಇದೇನಾ?

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಡ್ರಗ್ಸ್ ನಶೆಯಲ್ಲಿಯೇ ಬಂದು ದೇಶ ವಿರೋಧಿಗಳ ಜೊತೆ ನಿಲ್ಲುತ್ತಿದ್ದರು ಎಂದು ಬಿಜೆಪಿ ನಾಯಕ ಮನೋಜ್ ತಿವಾರಿ ಹೇಳಿದ್ದಾರೆ.

ಖಾಸಗಿ ಮಾಧ್ಯಮದ ಜೊತೆ ಮಾತನಾಡುವ ವೇಳೆ, ಇಡೀ ಬಾಲಿವುಡ್ ಡ್ರಗ್ ಜಾಲದ ಸುಳಿಯಲ್ಲಿ ಸಿಲುಕಿದೆ. ಇಂದು ಹೆಮ್ಮೆ ಪಡುತ್ತಿದ್ದ ಸ್ಟಾರ್ ಹೆಸರು ಹೊರ ಬಂದಿದೆ. ಡ್ರಗ್ಸ್ ಸೇವನೆ ಬಳಿಕ ಅವರ ವಿಚಾರಗಳು ದೇಶದ ವಿರುದ್ಧವಾಗಿರುತ್ತವೆ. ಡ್ರಗ್ಸ್ ನಶೆಯಲ್ಲಿಯೇ ದೀಪಿಕಾ ಜೆಎನ್‍ಯು ನಲ್ಲಿ ನಡೆದ ದೇಶ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಚಾಟ್‍ನಲ್ಲಿ ದೀಪಿಕಾ ಹೆಸ್ರು- ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳ್ತಾರೆ ಎಂದ ಕಂಗನಾ

ಕೆಲವರು ಬಾಲಿವುಡ್ ಉದ್ಯಮದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಇರಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಡ್ರಗ್ಸ್ ದಾಸರ ಮೋಸದ ವ್ಯೂಹದಲ್ಲಿ ಸಿಲುಕಿಕೊಳ್ಳಬಾರದು. ಶೃಂಗಾರ, ಸುಂದರವಾದ ಬಾಲಿವುಡ್ ನಲ್ಲಿ ಕಪ್ಪು ಕಲೆ ಮೂಡಿಸುವ ಯತ್ನಗಳು ನಡೆಯುತ್ತಿವೆ. ಹೀಗಾಗಿ ಬಾಲಿವುಡ್ ನ ಹಿರಿಯ ಕಲಾವಿದರು ಮತ್ತು ದೊಡ್ಡ ಸ್ಟಾರ್ ಗಳು ಡ್ರಗ್ಸ್ ಮಾಫಿಯಾದ ವಿರುದ್ಧ ಧ್ವನಿ ಎತ್ತಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಮನೋಜ್ ತಿವಾರಿ ಆತಂಕ ವ್ಯಕ್ತಪಡಿಸಿದರು.  ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

ಡ್ರಗ್ಸ್ ಸೇವನೆಯಿಂದ ಯುವಕರು ಸಮಾಜ ವಿರೋಧಿ ಚಟುಬವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಡ್ರಗ್ಸ್ ಚಟಕ್ಕೆ ಬಲಿಯಾದ ಯುವಕರನ್ನ ದೇಶ ವಿರೋಧಿ ಕೃತ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಮುಂದೆ ಬಂದು, ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನ ನಿಮ್ಮ ಮೌನದ ಪರಿಣಾಮವನ್ನ ಚಿತ್ರರಂಗ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ಸ್‌ ಕೇಸ್‌- ಐಎಸ್‌ಡಿಯಿಂದ ಲೂಸ್‌ ಮಾದ ಯೋಗಿ, ಅಯ್ಯಪ್ಪ ವಿಚಾರಣೆ

ಜೆಎನ್‍ಯು ಭೇಟಿ: ಜನವರಿ 7, 2020ರಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಲ್ಲಿನ ಶಿಕ್ಷಕರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ತಮ್ಮ ಛಪಾಕ್ ಸಿನಿಮಾ ಪ್ರಮೋಷನ್ ಗೆ ತೆರಳಿದ್ದ ದೀಪಿಕಾ, ಜೆಎನ್‍ಯುಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳ ಒಗ್ಗಟ್ಟಿನ ಸಂಕೇತವಾದ ಕಪ್ಪು ಬಣ್ಣದ ಬಟ್ಟೆ ಧರಿಸಿ ಜೆಎನ್‍ಯು ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದರು. 10 ನಿಮಿಷಗಳ ಕಾಲ ಯೂನಿವರ್ಸಿಟಿಯಲ್ಲಿ ಇದ್ದ ದೀಪಿಕಾ, ಬಳಿಕ ಏನೂ ಪ್ರತಿಕ್ರಿಯೇ ನೀಡದೆ ವಾಪಸ್ ಆಗಿದ್ದರು.

ತಮ್ಮ ಬೆಂಬಲಿಕ್ಕೆ ಬಂದ ಪದ್ಮಾವತಿಯನ್ನು ವಿದ್ಯಾರ್ಥಿಗಳು ಅಜಾದಿ ಎಂಬ ಘೋಷಣೆ ಕೂಗುವ ಮೂಲಕ ಬರಮಾಡಿಕೊಂಡಿದ್ದರು. ಜೆಎನ್‍ಯು ಗೆ ದೀಪಿಕಾ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ಪ್ರತಿಭಟನೆಯಲ್ಲಿ ಭಾಗಿಯಾದ ಹಿನ್ನೆಲೆ ಬಿಜೆಪಿ ನಾಯಕರು ದೀಪಿಕಾ ವಿರುದ್ಧ ವಾಗ್ದಾಳಿ ನಡೆಸಿದ್ದರು.

‘ಮಾಲ್’ ಇದೇನಾ?: ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಬಳಿ ಮಾಲ್ ಇದೆಯಾ ಎಂದು ಕೇಳಿರುವ ವಾಟ್ಸಪ್ ಚಾಟ್ ಸ್ಕ್ರೀನ್‍ಶಾಟ್ ರಿವೀಲ್ ಆಗಿವೆ. ಹ್ಯಾಶ್ ಕೇಳಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆದ್ರೆ ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ನಟಿಯರಾದ ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಗೆ ಸಮನ್ಸ್ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *