ಬಿಗ್ ಬಾಸ್ ಮನೆಯಲ್ಲಿ ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ನಟ ರೂಪೇಶ್ ಶೆಟ್ಟಿ ಮಧ್ಯೆ ಏನೋ ನೆಡೀತಾ ಇದೆ ಎನ್ನುವುದು ಸ್ವತಃ ಬಿಗ್ ಬಾಸ್ ಮನೆಯಲ್ಲಿರುವವರ ಅನುಮಾನ. ಈ ಜೋಡಿ ಕೂಡ ಅನುಮಾನ ಬರುವ ಹಾಗೆಯೇ ನಡೆದುಕೊಳ್ಳುತ್ತಿದೆ. ತಮ್ಮ ಮಧ್ಯೆ ಅಂಥದ್ದು ಏನೂ ಇಲ್ಲ ಎಂದು ಇಬ್ಬರೂ ಹೇಳುತ್ತಿದ್ದರೂ, ಮತ್ತೆ ಮತ್ತೆ ಜೊತೆಯಾಗುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಬಲ ಬಂದಿದೆ.
Advertisement
ಸಾನ್ಯಾ ನಿನ್ನೆ ವಾಶ್ ರೂಮ್ ನಲ್ಲಿದ್ದಾಗ, ಅವರ ಸಮೀಪದಲ್ಲೇ ಇದ್ದವರು ರೂಪೇಶ್ ಶೆಟ್ಟಿ. ವಾಶ್ ರೂಮ್ ನಲ್ಲಿದ್ದ ಸಾನ್ಯಾ ಇದ್ದಕ್ಕಿದ್ದಂತೆ ಕಿರುಚಿಕೊಳ್ಳುತ್ತಾರೆ. ಆ ಹುಡುಗಿಗೆ ಏನೋ ಆಯಿತು ಎಂಬ ಆತಂಕದಿಂದ ವಾಶ್ ರೂಮ್ ಒಳಗೆ ಕಾಲಿಡುತ್ತಾರೆ ರೂಪೇಶ್. ಕೊನೆಗೆ ಅವರಿಗೆ ಗೊತ್ತಾಗಿದ್ದು, ವಾಶ್ ರೂಮ್ ಗೆ ಎಂಟ್ರಿ ಕೊಟ್ಟು ಸಾನ್ಯಾನ ಹೆದರಿಸಿದ್ದು ಜಿರಳೆ ಅಂತ. ಮೊದಲು ಇದನ್ನು ಆಚೆ ಹಾಕಿ ಎಂದು ಆ ಹುಡುಗಿ ಕಿರುಚುತ್ತಾಳೆ. ಅಲ್ಲೊಂದು ವಿಚಿತ್ರ ಸನ್ನಿವೇಶವೇ ಸೃಷ್ಟಿ ಆಗುತ್ತದೆ. ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ ಮಾಡಬೇಕಿದ್ದ ಪಾತ್ರಕ್ಕೆ `ಪುಷ್ಪ’ ಸ್ಟಾರ್ ಫೈನಲ್
Advertisement
Advertisement
ಆತಂಕದಲ್ಲಿದ್ದ ಸಾನ್ಯಾರನ್ನು ಸಮಾಧಾನಿಸುವ ಬದಲು, ತನ್ನ ಕೈಯಲ್ಲಿ ಜಿರಳೆ ಹಿಡಿದುಕೊಳ್ಳುವ ರೂಪೇಶ್, ನಾನು ಹೇಳಿದಂತೆ ಕೇಳದೇ ಇದ್ದರೆ, ಇದನ್ನು ಆಚೆ ಹಾಕಲಾರೆ ಎಂದು ಸಾನ್ಯಾಗೆ ಮತ್ತಷ್ಟು ಭಯ ಹುಟ್ಟಿಸುತ್ತಾರೆ. ಕೊನೆಗೆ ನೀನು ಹೇಳಿದಂತೆ ನಾನು ಕೇಳುತ್ತೇನೆ ಎನ್ನುತ್ತಾಳೆ ಸಾನ್ಯ. ಅಲ್ಲಿಗೆ ಸಾನ್ಯ ಮತ್ತು ರೂಪೇಶ್ ಮಧ್ಯೆದ ಅನುಮಾನ ಮತ್ತಷ್ಟು ಗಟ್ಟಿಗೊಂಡಿದ್ದಂತೂ ಸುಳ್ಳಲ್ಲ.