ತುಮಕೂರು: ನರೇಂದ್ರ ಮೋದಿ (Narendra Modi) ಅವರು ದೇಶದ ಪ್ರಧಾನಿ ಆದ ನಂತರ ಅಭಿವೃದ್ಧಿಯ ಹಾದಿ ತೆರೆದುಕೊಂಡಿತು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ಹೇಳಿದರು.
ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 12 ವರ್ಷ ಪೂರ್ಣಗೊಳಿಸಿದ್ದರಿಂದ, ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಸಾಧನೆ ಪಟ್ಟಿ ಓದಿ, ಮಾತನಾಡಿದರು. ಇದನ್ನೂ ಓದಿ: ಪೌರ ಕಾರ್ಮಿಕರ ಎಲ್ಲಾ ಬೇಡಿಕೆಗಳ ಪರವಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ: ಯತೀಂದ್ರ
ಮೋದಿ ಅವರು ದೇಶದ ಪ್ರಧಾನಿ ಆಗುವುದಕ್ಕೂ ಮುನ್ನ ‘ಗರೀಬಿ ಹಠಾವೋ’ ಹೆಸರು ಹೇಳಿಕೊಂಡು ಜನರನ್ನು ಬಡತನದಲ್ಲೇ ಇಟ್ಟಿದ್ದ ಕಾಂಗ್ರೆಸ್ ನಾಯಕರ ಬಗ್ಗೆ ದೇಶದ 100 ಕೋಟಿ ಜನರಿಗೆ ಹತಾಶೆ ಮೂಡಿತ್ತು. 2014ರಲ್ಲಿ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಸಾಮಾಜಿಕ ಪರಿವರ್ತನೆಯ ಹಾದಿ ಕಾಣತೊಡಗಿತು. ಇಲ್ಲಿಯವರೆಗೆ ದೇಶದ 25 ಕೋಟಿಗೂ ಅಧಿಕ ಜನರನ್ನು ಮೋದಿ ಬಡತನದಿಂದ ಮೇಲಕ್ಕೆತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: 53 ಸಾವಿರ ಕೋಟಿ SCSP/TSP ನಿಧಿ ದುರ್ಬಳಕೆಯಾಗಿದೆ – ತನಿಖೆ ಕೋರಿ ಕೇಂದ್ರಕ್ಕೆ ಛಲವಾದಿ ಪತ್ರ!
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿ 60 ಕೋಟಿಗೂ ಅಧಿಕ ಜನರು 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಪಡೆದಿದ್ದಾರೆ. ಜಲಜೀವನ್ ಯೋಜನೆ ಮೂಲಕ 16 ಕೋಟಿ ಮನೆಗಳಿಗೆ ನೀರಿನ ಸಂಪರ್ಕ, 12 ಕೋಟಿ ಶೌಚಾಲಯಗಳ ರ್ಬ್ಯಾಣ, ಪಿ.ಎಂ ಕಿಸಾನ್ ಯೋಜನೆ ಅಡಿ ರೈತರ ಖಾತೆಗಳಿಗೆ 4.3 ಲಕ್ಷ ಕೋಟಿ ರೂ. ಅನುದಾನ, ಆಹಾರ ಉತ್ಪಾದನೆಯಲ್ಲಿ ಶೇ.71ರಷ್ಟು ಏರಿಕೆ, ಮಹಿಳಾ ಸಬಲೀಕರಣಕ್ಕಾಗಿ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯಲ್ಲಿ ನಿಮ್ಮ ಜಿಲ್ಲೆ ಕೊನೆಯಲ್ಲಿದೆ ಯಾಕೆ: ಪ್ರಿಯಾಂಕ್‌ಗೆ ನಿರಾಣಿ ಪ್ರಶ್ನೆ
