ಅನಾರೋಗ್ಯದ ಕಾರಣದಿಂದಾಗಿ ಬಿಗ್‌ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಿಂದ ಸಂಗೀತಾ ಭಟ್ (Sangeetha Bhat) ಹೊರಬಂದಿದ್ದಾರೆ.
ಈ ವಾರ ಬಿಗ್‌ಬಾಸ್ ಮನೆಯಲ್ಲಿ ಗಗನ್, ಧನುಷ್, ಗಾನವಿ, ಮಂಜ, ಸೋನಿಕಾ, ತಾಂಡವ್ ರಾಮ್ ಹಾಗೂ ಯಶಸ್ ನಾಮಿನೇಟ್ ಆಗಿದ್ದರು. ಈಗಾಗಲೇ ಅನುಚಿತ ವರ್ತನೆ ತೋರಿದ ಕಾರಣದಿಂದಾಗಿ ಬಿಗ್‌ಬಾಸ್ ಮಂಜ ಅವರನ್ನು ಮನೆಯಿಂದ ಹೊರಕಳಿಸಿದ್ದರು. ಅದಾದ ಬಳಿಕ ಗಗನ್, ಧನುಷ್, ಗಾನವಿ, ಸೋನಿಕಾ, ತಾಂಡವ್ ರಾಮ್ ಹಾಗೂ ಯಶಸ್ ಇನ್ನೂ ಡೇಂಜರ್ ಝೋನ್‌ನಲ್ಲಿ ಉಳಿದಿದ್ದರು. ಇದನ್ನೂ ಓದಿ: ಎಷ್ಟೇ ವಾರ್ನಿಂಗ್ ಕೊಟ್ಟರೂ ಬದಲಾಗದ ಮಂಜ – ಬಿಗ್‌ಬಾಸ್ ಮನೆಯಿಂದ ಹೊರಕ್ಕೆ, ಕಿಚ್ಚನ ಮುಂದೆ ಕಣ್ಣೀರು
ಇಂದಿನ ಎಪಿಸೋಡ್‌ನ ಕೊನೆಯಲ್ಲಿ ಕಿಚ್ಚ ಸುದೀಪ್, ಸಾಮಾನ್ಯವಾಗಿ ಮನೆಯಲ್ಲಿ ನಾಮಿನೇಟ್ ಆದವರ ಪೈಕಿ ಕಡಿಮೆ ವೋಟ್ ಪಡೆದವರು ಔಟ್ ಆಗುತ್ತಾರೆ. ಆದರೆ ಈ ಬಾರಿ ಬೇರೆ ಕಾರಣಗಳಿಂದ ಬಿಗ್‌ಬಾಸ್ ಒಬ್ಬರನ್ನು ಮನೆಯಿಂದ ಹೊರಕಳಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಸುದೀಪ್ ಆರೋಗ್ಯದ ಸಮಸ್ಯೆಯಿರುವ ಕಾರಣ ಸಂಗೀತಾ ಭಟ್ ಅವರು ಮನೆಯಿಂದ ಹೊರಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಾರದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್‌ನಲ್ಲಿ ಸಂಗೀತಾ ಅವರಿಗೆ ಅನಾರೋಗ್ಯದ ಸಮಸ್ಯೆ ಎದುರಾಗಿತ್ತು. ಆಗ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಮತ್ತೆ ಬಿಗ್‌ಬಾಸ್ ಮನೆಗೆ ಬಂದಿದ್ದರು. ಆನಂತರ ಮತ್ತೆ ಅವರಿಗೆ ಸಮಸ್ಯೆ ಆಗಿತ್ತು. ಹೀಗಾಗಿ ವೈದ್ಯರು ತಿಳಿಸಿರುವಂತೆ ಆರೋಗ್ಯದ ದೃಷ್ಟಿಯಿಂದ ಅವರು ಬಿಗ್‌ಬಾಸ್ ಮನೆಯಿಂದ ಹೊರಬರುವುದು ಒಳ್ಳೆಯದು. ಹೀಗಾಗಿ ಈ ವಾರ ಸಂಗೀತಾ ಭಟ್ ಮನೆಯಿಂದ ಹೊರಬಂದಿದ್ದಾರೆ.ಇದನ್ನೂ ಓದಿ: BBK 13: ನವರಾತ್ರಿ ಉಡುಗೊರೆ – ದೊಡ್ಮನೆಗೆ ಹೊಸ ಸ್ಪರ್ಧಿ ಎಂಟ್ರಿ

