– ಬೆಂಗಳೂರಲ್ಲಿ ಪೊಲೀಸರು – ಆಂಧ್ರ ಕಾಂಗ್ರೆಸ್ ನಾಯಕಿ ನಡುವೆ ವಾಗ್ವಾದ
ಬೆಂಗಳೂರು: ಯಲಹಂಕದಲ್ಲಿರುವ ತಮ್ಮ ಕುಟುಂಬದ ಮನೆಗೆ ಭೇಟಿ ನೀಡಲು ಬಂದಿದ್ದ ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಮಾಜಿ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್ ಶರ್ಮಿಳಾ (YS Sharmila) ಅವರನ್ನ ಪೊಲೀಸರು ತಡೆದಿದ್ದು ಭಾರೀ ಹೈಡ್ರಾಮಾಕ್ಕೆ ಕಾರಣವಾಗಿದೆ. ತಮ್ಮ ಕುಟುಂಬದ ಮನೆಗೆ (ಅರಮನೆ) ಭೇಟಿ ನೀಡಲು ಬಂದಿದಿದ್ದ ಅವರನ್ನು ಪೊಲೀಸರು ಕೋರ್ಟ್ (Court) ಆದೇಶ ಉಲ್ಲೇಖಿಸಿ ತಡೆದಿರುವ ಘಟನೆ ಭಾನುವಾರ (ನಿನ್ನೆ) ಸಂಜೆ ನಡೆದಿದೆ.
ಶರ್ಮಿಳಾ ತಮ್ಮ ತಾಯಿ ವೈ.ಎಸ್ ವಿಜಯಮ್ಮ, ಮಗ ರಾಜಾ ರೆಡ್ಡಿ ಮತ್ತು ಸೊಸೆ ಪ್ರಿಯಾ ಅತ್ಲೂರಿ ಅವರೊಂದಿಗೆ ಆಂಧ್ರದಿಂದ ಬೆಂಗಳೂರಿಗೆ ಆಗಮಿಸಿದ್ದರು. ಏರ್ಪೋರ್ಟ್ನಿಂದ (Bengaluru Airport) ಯಲಹಂಕದಲ್ಲಿರುವ ಕುಟುಂಬದ ನಿವಾಸಕ್ಕೆ ಹೋಗುವಾಗ ಪೊಲೀಸರು ಅವರ ವಾಹನಗಳನ್ನ ವಾಯುನೆಲೆ ಬಳಿ ತಡೆದಿದ್ದಾರೆ.
🚨పోలీసులతో షర్మిల వాగ్వాదం
కోర్టు చెప్పింది షర్మిల కానీ కుటుంబ సభ్యులు కానీ యలహంక భవనం దెగ్గరికి రావద్దు అని
చెప్పాక కూడా ఎందుకు ఈ ఓవర్ యాక్షన్ చేయటం సిగ్గులేదా🙄
APలో మీ రెడ్ బుక్ రాజ్యాంగం ఉన్నట్లు అక్కడ అలానే ఉంటదనుకున్నావా💦
#YSSharmila #YSJagan #Bengaluru #YSRCP https://t.co/cIltYKjmNP
— Nandu YSJ 2029 (@NandhuYSJ2029) November 22, 2026
ಶರ್ಮಿಳಾ ಭೇಟಿ ತಡೆಗೆ ಕಾರಣ ಏನು?
ಯಲಹಂಕದಲ್ಲಿರುವ ಕುಟುಂಬದ ಅರಮನೆಗೆ ಪ್ರವೇಶಿಸದಂತೆ ಕೋರ್ಟ್ನ ಮಧ್ಯಂತರ ಆದೇಶ ಉಲ್ಲೇಖಿಸಿ ಪೊಲೀಸರು ಶರ್ಮಿಳಾ ಅವರ ಬೆಂಗಾವಲು ಪಡೆಯನ್ನ ಬೆಂಗಳೂರಿನ ಏರ್ ಫೋರ್ಸ್ ಕ್ರಾಸ್ ಬಳಿ ತಡೆದರು. ಈ ಘಟನೆಯು ಶರ್ಮಿಳಾ ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಘಟನೆಯ ವಿಡಿಯೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ತಮ್ಮನ್ನು ತಡೆದ ಬಳಿಕ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಶರ್ಮಿಳಾ ʻನನ್ನ ಸ್ವಂತ ಮನೆಗೆ ಹೋಗುವುದರಲ್ಲಿ ಏನು ತಪ್ಪಿದೆ? ನೀವು ನನ್ನನ್ನು ಏಕೆ ತಡೆಯುತ್ತಿದ್ದೀರಿ?ʼ ಎಂದು ಪ್ರಶ್ನಿಸಿದ್ರು, ಇದಕ್ಕೆ ಉತ್ತರಿಸಿದ ಪೊಲೀಸರು ಕೋರ್ಟ್ ಆದೇಶ ಪಾಲಿಸುವಂತೆ ಮನವಿ ಮಾಡಿದ್ರು. ನಂತರ, ಶರ್ಮಿಳಾ ನಗರದ ಖಾಸಗಿ ಹೋಟೆಲ್ಗೆ ತೆರಳಿದರು ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶವಿದೆ, ಶಾಶ್ವತ ತಡೆಯಾಜ್ಞೆ, ಅಲ್ಲಿಗೆ ಹೋಗಬಾರದು ಎಂದು ಹೇಳುತ್ತದೆ. ಆದೇಶ ತೋರಿಸಿದ ತಕ್ಷಣ ಅವರು ಸ್ಥಳದಿಂದ ಹೊರಟುಹೋದರು ಎಂದು ಡಿಸಿಪಿ ಜಿ.ಕೆ ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
చెల్లిని యలహంక ప్యాలెస్ వైపు కూడా రానీయకుండా కోర్టు నుండి ఆదేశాలు తెచ్చుకున్న @ysjagan దీంతో పోలీసులు షర్మిలను దారి మద్యలోనే అడ్డుకోవడం జరిగింది.
@realyssharmila @INC_Andhra @JaiTDP @YSRCParty #Yalahankapalace #YsSharmila #YsJagan #Ysrcp #Tdp #Congress #Court https://t.co/Rf2ghJJG92— CSK Chowdary (@CrgTalks) November 22, 2026
ಏನಿದು ಆಸ್ತಿ ವಿವಾದ?
ದೇವನಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರ ಕೋರ್ಟ್ ನವೆಂಬರ್ 21 ರಂದು ಶರ್ಮಿಳಾ, ಅವರ ಕುಟುಂಬ ಸದಸ್ಯರು, ಏಜೆಂಟರು, ಪ್ರತಿನಿಧಿಗಳು ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವ ಯಾರೊಬ್ಬರೂ ʻಸಿಲಿಕಾನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ʼನ ಆಸ್ತಿಯ ಸ್ವಾಧೀನದಲ್ಲಿ ಹಸ್ತಕ್ಷೇಪ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಿಲಿಕಾನ್ ಬಿಲ್ಡರ್ಸ್ ಸಲ್ಲಿಸಿದ ಮೊಕದ್ದಮೆಯಲ್ಲಿ ಈ ತಡೆಯಾಜ್ಞೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಸಿಲಿಕಾನ್ ಬಿಲ್ಡರ್ಸ್ ಆರೋಪ ಏನು?
ʻಸಿಲಿಕಾನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ʼನ ಆಸ್ತಿ ಗುತ್ತಿಗೆ ಒಪ್ಪಂದದ ಅಡಿಯಲ್ಲಿ ಕಾನೂನುಬದ್ಧ ಸ್ವಾಧೀನದಲ್ಲಿದೆ ಮತ್ತು ಶರ್ಮಿಳಾ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಅದರ ಸ್ವಾಧೀನದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
