ಬಿಗ್‌ಬಾಸ್ (Bigg Boss Kannada) ಕನ್ನಡ 10ನೇ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ (Drone Pratap) ಅವರು ರನ್ನರ್ ಅಪ್ (Runner Up) ಆಗಿ ಹೊರಹೊಮ್ಮಿದ್ದಾರೆ. ಅವರೇ ಹೇಳಿಕೊಂಡಂತೆ ಅವರು ಇದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.
Advertisement
ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಿಚ್ಚ ಘೋಷಿಸಿದರು. ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋಣ್ ಪ್ರತಾಪ್. ಕಿಚ್ಚನ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್ ಕೈ ಇತ್ತು. ಆ ಟೆನ್ಷನ್ ಅನ್ನು ಮಾತುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಡೀ ಕರ್ನಾಟಕವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಗಳಿಗೆ ಅದು.
Advertisement
Advertisement
ಅದರಲ್ಲಿ ಸುದೀಪ್ ಅವರು ಕಾರ್ತಿಕ್ ಅವರ ಕೈಯನ್ನು ಎತ್ತಿ ಹಿಡಿದರು. ಅಂದರೆ ಡ್ರೋಣ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನ ಪಡೆದುಕೊಂಡಿದ್ದಾರೆ.
Advertisement
ಈ ಸೀಸನ್‌ನ ಬಿಗ್‌ಬಾಸ್ ಮನೆಯಲ್ಲಿ ಅತೀ ಹೆಚ್ಚು ನೋವು ಮತ್ತು ಅಷ್ಟೇ ನಲಿವನ್ನು ಕಂಡ ಸದಸ್ಯ ಎಂದರೆ ಅದು ಡ್ರೋಣ್ ಪ್ರತಾಪ್ ಎಂದು ನಿಸ್ಸಂಶಯವಾಗಿ ಹೇಳಬಹುದು. ಅಸಮರ್ಥನಾಗಿ ಮನೆಯೊಳಗೆ ಪ್ರವೇಶಿಸಿದ ಪ್ರತಾಪ್, ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದರು. ಅವ ಸುಳ್ಳುಗಾರ, ಮೋಸಗಾರ ಎಂಬ ಮಾತುಗಳನ್ನು ಕೇಳಿಸಿಕೊಂಡರು. ತಮ್ಮೆದುರೇ ತಮ್ಮನ್ನು ಆಡಿಕೊಳ್ಳುವ, ತಮಾಷೆ ಮಾಡಿ ನಗುವ ಸದಸದಸ್ಯರ ಮಾತಿಗೆ ಕಿವಿಯಾದರು. ಆದರೆ ಅವರು ಹಲವು ವರ್ಷಗಳ ನಂತರ ತಮ್ಮ ತಂದೆಯ ಜೊತೆ ಮಾತಾಡಿದ್ದು, ಎಷ್ಟೋ ವರ್ಷಗಳ ನಂತರ ಅಮ್ಮನನ್ನು ನೋಡಿದ್ದು ಕೂಡ ಇದೇ ಮನೆಯಲ್ಲಿ! ಈ ಎರಡೂ ಅಂಚಿನ ರೋಲರ್‍ಕೋಸ್ಟರ್ ಜರ್ನಿಗೆ ಸಾಕ್ಷಿಯಾಗಿದ್ದು ಬಿಗ್‌ಬಾಸ್ ವೇದಿಕೆ ಮತ್ತು ಅದರ ವೀಕ್ಷಕರು. ಡ್ರೋಣ್ ಪ್ರತಾಪ್ ಅವರು ಬಿಗ್‌ಬಾಸ್ ಮನೆಯೊಳಗೆ ಸವೆಸಿದ ದಾರಿಯ ಒಂದು ಕಿರುನೋಟ ಇಲ್ಲಿದೆ.
ಮೊದಲ ವಾರವೇ ಪ್ರತಾಪ್, ಅವರನ್ನು ಮನೆಯ ಸದಸ್ಯರ ಮಾತುಗಳು ಕುಗ್ಗಿಸಿದ್ದವು. ಅಲ್ಲಿ ಆದ ಅವಮಾನದಿಂದ ಬೇಸತ್ತ ಪ್ರತಾಪ್ ಬಾತ್‌ರೂಮಿಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ವಿಶೇಷವಾಗಿ ತುಕಾಲಿ ಸಂತೋಷ್ ಅವರು ಪ್ರತಾಪ್ ಮೇಲೆ ಮಾಡಿದ ಜೋಕ್‌ಗಳು ಅವರನ್ನು ಸಾಕಷ್ಟು ನೋವನ್ನುಂಟು ಮಾಡಿದ್ದವು. ವಾರಾಂತ್ಯದಷ್ಟರಲ್ಲಿ ಸಾಕಷ್ಟು ನಿತ್ರಾಣಗೊಂಡಿದ್ದ ಪ್ರತಾಪ್ ಅವರ ಬೆಂಬಲಕ್ಕೆ ನಿಂತಿದ್ದು ಕಿಚ್ಚ ಸುದೀಪ್.
‘ಇನ್ನೊಬ್ಬರನ್ನು ನೋಯಿಸಿ ಜೋಕ್ ಮಾಡುವುದು ಒಳ್ಳೆಯ ಹಾಸ್ಯದ ಲಕ್ಷಣವಲ್ಲ’ ಎಂದು ತುಕಾಲಿ ಅವರನ್ನು ಎಚ್ಚರಿಸಿದ ಅವರು, ‘ಕೈ ಮುಗಿದರೆ ದೇವರೇ ಕ್ಷಮಿಸ್ತಾನಂತೆ. ನಾವ್ಯಾರು ಇನ್ನೊಬ್ಬರಿಗೆ ಶಿಕ್ಷೆ ಕೊಡೋಕೆ’ ಎಂದು ಪ್ರತಾಪ್ ವಿರುದ್ಧ ಮುಗಿಬಿದ್ದವರಿಗೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದು ಪ್ರತಾಪ್ ಅವರಿಗೆ ಸಾಕಷ್ಟು ಆತ್ಮವಿಶ್ವಾಸ ತುಂಬಿತ್ತು. ಮನೆಯಲ್ಲಿ ಹೊಸ ಉತ್ಸಾಹದೊಂದಿಗೆ ಆಟಕ್ಕೆ ನಿಲ್ಲುವಂತೆ ಮಾಡಿತ್ತು.