ಚಿತ್ರದುರ್ಗ: ಬರದನಾಡು ಚಿತ್ರದುರ್ಗ (Chitradurga) ಜಿಲ್ಲೆಯ ಜನರ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಜಿಲ್ಲೆಯ ಜನರ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ (Bhadra Upper River Project) ನೀರು ಚಿತ್ರದುರ್ಗದತ್ತ ಹರಿದುಬರುವ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸೆಪ್ಟೆಂಬರ್ 6ರಂದು ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸಲು ಆದೇಶಿಸಲಾಗಿದೆ. ಇದರಿಂದ ಕೋಟೆನಾಡಿನ ರೈತರು ಹಾಗೂ ಭದ್ರಾ ಹೋರಾಟಗಾರರಲ್ಲಿ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ರಿಯಲ್ ಎಸ್ಟೇಟ್ ಗುಂಗಿನಿಂದ ಹೊರಬಂದು ಪ್ರಜಾಸೇವೆ ನೆನಪಿಸಿಕೊಂಡ ಸಿಎಂಗೆ ಧನ್ಯವಾದ – ನಿಖಿಲ್ ಲೇವಡಿ
142 ಕಿ.ಮೀ. ದೂರ ನೀರು ಹರಿವು:
ಶಿವಮೊಗ್ಗದ ಭದ್ರಾ ಜಲಾಶಯದಿಂದ ಹೊರಡುವ ನೀರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಅಜ್ಜಂಪುರ ಮುಖಾಂತರ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ತಾಲೂಕುಗಳನ್ನು ದಾಟಿ ಚಿತ್ರದುರ್ಗದ ಗೋನೂರು ಕೆರೆಗೆ ತಲುಪುತ್ತದೆ. ಭದ್ರಾ ಜಲಾಶಯದಿಂದ ಕಾಲುವೆ ಮೂಲಕ ಸುಮಾರು 142 ಕಿಲೋ ಮೀಟರ್ ದೂರದವರೆಗೆ ನೀರು ಹರಿಯಲಿದೆ. ಈ ನೀರು ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಚಿತ್ರದುರ್ಗ ತಾಲೂಕಿನ ವಿವಿಧ ಭಾಗಗಳಿಗೆ ತಲುಪಲಿದೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು – ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತ
ಚಿತ್ರದುರ್ಗ ತಾಲೂಕಿನ ಗೋನೂರು ಕೆರೆಯವರೆಗೆ ಕಾಲುವೆ ಮೂಲಕ ನೀರು ಹರಿಯಲಿದ್ದು, ಬಳಿಕ ನೈಸರ್ಗಿಕ ಹಳ್ಳದ ಮೂಲಕ ಚಳ್ಳಕೆರೆ ತಾಲೂಕಿನ ರಾಣಿಕೆರೆಗೆ ನೀರು ಪೂರೈಕೆಯಾಗಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತಷ್ಟು ತಗ್ಗಲಿದೆ ಮಳೆ – ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆ

ಗೋನೂರು ಅಕ್ವಾಡಕ್ಟ್‌ನ ಪ್ರಮುಖ ಆಕರ್ಷಣೆ ವಿಶೇಷತೆ:
ಗೋನೂರು ಬಳಿ ನಿರ್ಮಿಸಲಾಗಿರುವ ಅಕ್ವಾಡಕ್ಟ್ (ನೀರನ್ನು ಎತ್ತರದಲ್ಲಿ ಕೊಂಡೊಯ್ಯುವ ಕಾಲುವೆ ಸೇತುವೆ) ಕರ್ನಾಟಕದಲ್ಲೇ ಅತ್ಯಂತ ಎತ್ತರವಾದ ಅಕ್ವಾಡಕ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 120 ಅಡಿ ಎತ್ತರದ ಬೃಹತ್ ಪಿಲ್ಲರ್‌ಗಳ ಮೇಲೆ 1.94 ಕಿಲೋಮೀಟರ್ ಉದ್ದಕ್ಕೆ ಪ್ರಿಕಾಸ್ಟ್ ವಾಟರ್ ಟ್ರಫ್‌ಗಳನ್ನು ಬಳಸಿ ನಿರ್ಮಿಸಲಾಗಿದೆ. ಇದನ್ನೂ ಓದಿ: ಸವದತ್ತಿಯಲ್ಲಿ ಕೂಲಿ ಕಾರ್ಮಿಕರಿಗೆ ಸಿಕ್ತು ಚಿನ್ನದ ನಿಧಿ!
ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ಹರಿದುಬರುವ ನೀರನ್ನು ಕಣಿವೆ ಅಥವಾ ಹಳ್ಳದ ಮೇಲಿಂದ ದಾಟಿಸಿ ಮುಂದಿನ ಪ್ರದೇಶಗಳಿಗೆ ಸರಾಗವಾಗಿ ಸಾಗಿಸಲು ಈ ಎಂಜಿನಿಯರಿಂಗ್ ಅದ್ಭುತವನ್ನು ಬಳಸಲಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಅಷ್ಟಮಿ ಸಂಭ್ರಮ – ಭಕ್ತಿಭಾವದಿಂದ ನೆರವೇರಿತು ಅರ್ಘ್ಯ ಪ್ರದಾನ
ಜನರಿಗೆ ಮುಂಜಾಗ್ರತಾ ಸೂಚನೆ:
ಭದ್ರಾ ನೀರು ಹರಿಯಲಿರುವ ಹಿನ್ನೆಲೆಯಲ್ಲಿ ಕಾಲುವೆ, ನೈಸರ್ಗಿಕ ಹಳ್ಳಗಳು ಹಾಗೂ ಕೆರೆಗಳ ಕೋಡಿ ಪಾತ್ರದ ಸುತ್ತಮುತ್ತಲಿನ ಜನರು ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಈ ಕುರಿತು ವಿಶ್ವೇಶ್ವರಯ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಪಿಎಸ್‌ಸಿ ಹಗರಣದ ಪ್ರಮುಖ ಆರೋಪಿ ಕನ್ನಾಳೆಯಿಂದ ತುಮಕೂರು ವಿವಿಯಲ್ಲೂ ಹಲವು ಅವ್ಯವಹಾರ?
ರೈತರಲ್ಲಿ ಜಲ ಸಂಭ್ರಮ:
ಹಲವ ದಶಕಗಳಿಂದ ಭದ್ರಾ ನೀರಿಗಾಗಿ ಕಾಯುತ್ತಿದ್ದ ಕೋಟೆನಾಡಿನ ಜನರ ನಿರೀಕ್ಷೆ ಇದೀಗ ಫಲಿಸುವ ಹಂತಕ್ಕೆ ಬಂದಿದೆ. ನೀರು ಹರಿಯುವ ದಿನಕ್ಕಾಗಿ ರೈತರು, ಭದ್ರಾ ಹೋರಾಟಗಾರರು ಹಾಗೂ ಜಿಲ್ಲೆಯ ಜನರು ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ
ಇದಕ್ಕಾಗಿ ಜಾತಕಪಕ್ಷಿಗಳಂತೆ ಕಾಯುತ್ತಿದ್ದ ಕೋಟೆನಾಡಿನ ಜನರು ನೀರಿನ ಆಗಮನದಿಂದ ಪುನೀತರಾಗುವ ನಿರೀಕ್ಷೆ ಹೊಂದಿದ್ದು, ನಿರಂತರ ಬರದಿಂದ ತತ್ತರಿಸಿ, ರೋಸಿಹೋಗಿದ್ದ ಜನರಲ್ಲಿ ಮಂದಹಾಸ ಮನೆ ಮಾಡಿದೆ. ಇದನ್ನೂ ಓದಿ: ಬಡ್ಡಿದರ ಇಳಿಕೆಗೆ ಫೆಡರಲ್ ರಿಸರ್ವ್‌ಗೆ ಟ್ರಂಪ್ ಪಟ್ಟು- ಮತ್ತೆ ವ್ಯಾಪಾರ ಸಮರದ ಎಚ್ಚರಿಕೆ
