ಬೆಂಗಳೂರು: ಕೆಂಗೇರಿ ಸಮೀಪದ ಆರ್.ಆರ್ ವೈದ್ಯಕೀಯ ಕಾಲೇಜು (RR Medical College) ಹಿಂಭಾಗದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಂಚೆಪಾಳ್ಯ ಗ್ರಾಮದ ನಾಗರಾಜ್ ಮೃತ ದುರ್ದೈವಿ. ಇಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವಾಕಿಂಗ್‌ಗೆ ಹೋಗಿದ್ದ ವ್ಯಕ್ತಿ ಮೇಲೆ ಆನೆ ದಾಳಿ (Elephant Attack) ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳದಲ್ಲಿ ಎರಡೂ ಕಾಂಪೌಂಡ್‌ಗಳೂ ಸಹ ಉರುಳಿಬಿದ್ದಿದ್ದು, ಸ್ಥಳೀಯರು ಕೂಡ ಆನೇ ದಾಳಿಯಿಂದಲೇ ಘಟನೆ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ…

