ವಾಷಿಂಗ್ಟನ್: ಬಡ್ಡಿದರಗಳನ್ನು ಕಡಿತಗೊಳಿಸುವಂತೆ ಫೆಡರಲ್ ರಿಸರ್ವ್ (ಅಮೆರಿಕದ ಕೇಂದ್ರೀಯ ಬ್ಯಾಂಕ್) ಮೇಲೆ ಡೊನಾಲ್ಡ್ ಟ್ರಂಪ್ (Donald Trump) ಮತ್ತೊಮ್ಮೆ ತೀವ್ರ ಒತ್ತಡ ಹೇರಿದ್ದಾರೆ.
ನಿರೀಕ್ಷೆಗಿಂತ ಉತ್ತಮ ಉದ್ಯೋಗ ಬೆಳವಣಿಗೆಯ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಟ್ರಂಪ್, ವಿಶ್ವದಲ್ಲೇ ಅತಿ ಕಡಿಮೆ ಬಡ್ಡಿದರ(Lower Interest Rates) ಹೊಂದಿರುವ ದೇಶಗಳಲ್ಲಿ ಅಮೆರಿಕವೂ ಒಂದಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಉದ್ಯೋಗದಾತರು 1,62,000 ಉದ್ಯೋಗಗಳನ್ನು ಸೃಷ್ಟಿಸಿದ್ದು, ಇದು ಮಾರುಕಟ್ಟೆಯ ನಿರೀಕ್ಷೆಗಳಿಗಿಂತ ಹೆಚ್ಚಾಗಿದೆ ಎಂಬ ಉದ್ಯೋಗ ವರದಿ ಪ್ರಕಟವಾದ ಬೆನ್ನಲ್ಲೇ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಅದ್ಭುತ ಉದ್ಯೋಗ ಸಂಖ್ಯೆಗಳು ಈಗಷ್ಟೇ ಪ್ರಕಟವಾಗಿವೆ, ಇವು ಎಲ್ಲಾ ಅಂದಾಜುಗಳನ್ನು ಎರಡು ಮತ್ತು ಮೂರು ಪಟ್ಟು ಮೀರಿಸಿವೆ ಮತ್ತು ನೀವು ಇನ್ನೂ ಪೂರ್ಣ ಚಿತ್ರಣವನ್ನು ನೋಡಿಲ್ಲ. ಆಗಸ್ಟ್‌ನಲ್ಲಿ ಉದ್ಯೋಗದಾತರು 1,62,000 ಉದ್ಯೋಗಗಳನ್ನು ಸೇರಿಸಿದ್ದಾರೆ. ಬಡ್ಡಿದರಗಳನ್ನು ಕಡಿಮೆ ಮಾಡಿ, ಏಕೆಂದರೆ ಅಮೆರಿಕವು ಸ್ವಲ್ಪ ಸಮಯದ ಹಿಂದಿನಕ್ಕಿಂತ ಈಗ ಹೆಚ್ಚು ಬಲಿಷ್ಠವಾದ ಕ್ರೆಡಿಟ್ ಹೊಂದಿದೆ! ಪ್ರಬಲ ದೇಶ ಎಂದರೆ ಕಡಿಮೆ ಬಡ್ಡಿದರ – ಇದು ಉತ್ತಮ ಕ್ರೆಡಿಟ್… ಬಹಳ ಸರಳ! ಎಂದು ಟ್ರಂಪ್ ಬರೆದಿದ್ದಾರೆ.
ಒಂದು ವೇಳೆ ಫೆಡರಲ್ ರಿಸರ್ವ್(Federal Reserve) ಬಡ್ಡಿದರಗಳನ್ನು ಕಡಿತಗೊಳಿಸದಿದ್ದರೆ, ಅಮೆರಿಕದೊಂದಿಗೆ ಬೃಹತ್ ವ್ಯಾಪಾರ ಹೆಚ್ಚುವರಿ (Trade Surplus) ಹೊಂದಿರುವ ದೇಶಗಳ ವಿರುದ್ಧ ಕಠಿಣ ವ್ಯಾಪಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇರಾನ್‌ಗೆ ಯಾವುದೇ ದೇಶ ಸಹಾಯ ಮಾಡಬಾರದು – ಭಾರತ ಸೇರಿ ಇತರ ದೇಶಗಳಿಗೆ ಅಮೆರಿಕ ಎಚ್ಚರಿಕೆ
ಫೆಡ್ ಮಂಡಳಿಯು ತನ್ನ ಹೊಸ ನಾಯಕನೊಂದಿಗೆ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಬದಲಾವಣೆಗಾಗಿ ದೇಶಪ್ರೇಮಿಗಳಾಗಿರಿ. ಹೆಚ್ಚಿನ ಬಡ್ಡಿದರ ಅಮೆರಿಕವನ್ನು ಅಪಾಯದ ಸ್ಥಿತಿಗೆ ದೂಡುತ್ತವೆ. ನಾನು ಆ ರೀತಿ ಆಗುವಂತೆ ಬಿಡುವುದಿಲ್ಲ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
