ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅವರು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ 30 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಕಲರ್ಸ್ ಕನ್ನಡ ವಾಹಿನಿಯ ಬಿಗ್‌ಬಾಸ್(Bigg Boss) ವೇದಿಕೆಯಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟರು ವಿಶೇಷ ವಿಡಿಯೋ ಸಂದೇಶಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಸಲ್ಮಾನ್ ಖಾನ್(Salman Khan), ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ಸಂಯೋಜಕ, ಗಾಯಕರು ಮತ್ತು ಗೀತರಚನೆಕಾರ ದೇವಿಶ್ರೀ ಪ್ರಸಾದ್, ಸೊಹೈಲ್ ಖಾನ್, ಮೋಹನ್‌ಲಾಲ್, ಸೌರವ್ ಗಂಗೂಲಿ ಶುಭ ಕೋರಿದ್ದಾರೆ. ದಿಗ್ಗಜರು ಶುಭ ಕೋರಿದ ವಿಡಿಯೋವನ್ನು ವಾಹಿನಿ ಪ್ರೋಮೋದಲ್ಲಿ ಬಿಡುಗಡೆ ಮಾಡಿದೆ.
View this post on Instagram
ಸಲ್ಮಾನ್ ಖಾನ್:
ಕಿಚ್ಚ, ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳ ಅದ್ಭುತ ಪಯಣವನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಅಭಿನಂದನೆಗಳು. ಪ್ರತಿಯೊಬ್ಬ ಕನ್ನಡಿಗರು ಮತ್ತು ಸಮಸ್ತ ಭಾರತೀಯರ ಪರವಾಗಿ ನಾನು ನಿಮಗೆ ಶುಭ ಕೋರುತ್ತೇನೆ. ನಮ್ಮೆಲ್ಲರನ್ನು ಇಷ್ಟು ವರ್ಷ ಮನರಂಜಿಸಿದ್ದಕ್ಕಾಗಿ ಧನ್ಯವಾದಗಳು ಕಿಚ್ಚ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ, ಲವ್ ಯು ಮ್ಯಾನ್. ಇದನ್ನೂ ಓದಿ: ಕಿರುತೆರೆಗೆ ಮರಳಿದ ಮೋಕ್ಷಿತಾ ಪೈ – ʻಜಗದ್ಧಾತ್ರಿʼ ಪಾತ್ರಕ್ಕೆ ಜೀವ ತುಂಬಿದ ನಟಿ

ದೇವಿಶ್ರೀ ಪ್ರಸಾದ್
ನನ್ನ ಆತ್ಮೀಯ ಗೆಳೆಯ ಕಿಚ್ಚ ಸುದೀಪ್ ಸರ್, ಚಿತ್ರರಂಗದಲ್ಲಿ ನಿಮ್ಮ 30 ವರ್ಷಗಳ ಈ ಅದ್ಭುತ ಮತ್ತು ಭವ್ಯ ಪಯಣಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಾವು ನಿಮ್ಮನ್ನು ತುಂಬಾನೇ ಪ್ರೀತಿಸುತ್ತೇವೆ ಸುದೀಪ್ ಸರ್.

ಸೊಹೈಲ್ ಖಾನ್
ಕಿಚ್ಚ, ನಿಮ್ಮನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ಹೇಳುವ ಮೂಲಕ ಆರಂಭಿಸುತ್ತೇನೆ. ಕಳೆದ 18 ರಿಂದ 20 ವರ್ಷಗಳಿಂದ ನಾವಿಬ್ಬರೂ ಒಬ್ಬರನ್ನೊಬ್ಬರು ಬಲ್ಲೆವು. ಒಬ್ಬರನ್ನೊಬ್ಬರು ಗೌರವಿಸುತ್ತಾ, ಸೋದರರಂತೆ ಪ್ರೀತಿಯನ್ನು ಬೆಳೆಸಿಕೊಂಡು ಬಂದಿದ್ದೇವೆ. ಚಿತ್ರರಂಗದಲ್ಲಿ ನೀವು 30 ವರ್ಷಗಳನ್ನು ಪೂರೈಸಿರುವುದು ನಂಬಲು ಅಸಾಧ್ಯ! ಕಿಚ್ಚ, ನಿಮಗೆ ಇದು ಕೇವಲ ಆರಂಭವಷ್ಟೇ. ಲವ್ ಯು.

ಮೋಹನ್‌ಲಾಲ್:
ಹಾಯ್ ಕಿಚ್ಚ, ಈ ದಿನದ ಹಾರ್ದಿಕ ಶುಭಾಶಯಗಳು. ನಿಮಗೆ ನನ್ನ ಕಡೆಯಿಂದ ಅಪಾರ ಪ್ರೀತಿಯ ಹಾರೈಕೆಗಳು.

ಸೌರವ್ ಗಂಗೂಲಿ:
ಹಾಯ್ ಸುದೀಪ್, ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಕನ್ನಡ ಚಿತ್ರರಂಗದಲ್ಲಿ ನೀವು 30 ವರ್ಷಗಳನ್ನು ಪೂರೈಸಿದ್ದೀರಿ ಎಂದು ಕೇಳಿ ತುಂಬಾ ಸಂತೋಷವಾಯಿತು. ಇದು ಅತ್ಯದ್ಭುತ ಸಾಧನೆ. ಅಷ್ಟು ಸುಲಭವಾಗಿ ತಲುಪಲಾಗದಂತಹ ಮೈಲಿಗಲ್ಲು ಇದು. ಸಾಧನೆ ಎನ್ನುವುದು ನಾವು ಎಷ್ಟು ಕಾಲ ಉಳಿದುಕೊಳ್ಳುತ್ತೇವೆ ಎಂಬುದರ ಮೇಲಿರುತ್ತದೆ ಎಂದು ಹೇಳುತ್ತಾರೆ. ನಿಮಗೆ ಆಲ್ ದಿ ಬೆಸ್ಟ್ ಮತ್ತು ಹೃತ್ಪೂರ್ವಕ ಅಭಿನಂದನೆಗಳು.


