ಲಕ್ನೋ: ಕಳೆದ 3-4 ದಿನಗಳಿಂದ ಉತ್ತರ ಪ್ರದೇಶದಲ್ಲಿ (Uttara Pradesh) ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈವರೆಗೆ 56 ಮಂದಿ ಪ್ರಾಣಕಳೆದುಕೊಂಡಿದ್ದಾರೆ.
ಸೆ.25ರಿಂದ ಸೆ27ರವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ 56 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಸಿತಾಪುರದಲ್ಲಿ 7 ಮಂದಿ ಸಾವನ್ನಪ್ಪಿದ್ದು, ಅತೀ ಹೆಚ್ಚು ಸಾವನ್ನಪ್ಪಿರುವುದು ವರದಿಯಾಗಿದೆ. ಲಖಿಮ್ಪುರ ಖೇರಿ, ಬಹ್ರೈಚ್ ಮತ್ತು ಬಲರಾಮಪುರದಲ್ಲಿ ತಲಾ 5 ಮಂದಿ ಹಾಗೂ ಅಯೋಧ್ಯೆ ಮತ್ತು ಗೋಖರಪುರ ತಲಾ 4 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ 250 ಅಡಿ ಆಳದ ಕೊಳವೆಬಾವಿಗೆ ಬಿದ್ದ 3 ವರ್ಷದ ಮಗು ಸಾವು – 10 ಗಂಟೆ ಕಾರ್ಯಾಚರಣೆ ವಿಫಲ
ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜ್ಯಾದ್ಯಂತ 63 ಜಿಲ್ಲೆಗಳಲ್ಲಿ ಭಾರೀ ಮಳೆ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈವರೆಗೆ 1,021 ಮನೆಗಳು ಹಾನಿಗೊಳಗಾಗಿವೆ. 45.1 ಮಿಮೀ ಮಳೆ ದಾಖಲಾಗಿದೆ.
ಇನ್ನೂ ಮುಂದಿನ 24 ಗಂಟೆಗಳ ಬಳಿಕ ರಾಜ್ಯದಲ್ಲಿ ವಾತಾವರಣದಲ್ಲಿ ಬದಲಾಗುವುದು ನಿರೀಕ್ಷೆಯಿದೆ. ಇದರ ನಡುವೆ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಇದರಿಂದಾಗಿ ಘಾಗ್ರಾ ಹಾಗೂ ರಾಪ್ತಿ ನದಿಗಳ ನೀರಿನ ಮಟ್ಟದಲ್ಲಿನ ಏರಿಕೆಯಾಗುವ ಸಂಭವವಿದ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.ಇದನ್ನೂ ಓದಿ: ಗದಗ KRIDL ಎಇಇ ನಾಪತ್ತೆ ಕೇಸ್ – ಅಧಿಕಾರಿ ಪತ್ತೆಗಾಗಿ 5 ತಂಡ ರಚನೆ; ವಿಜಯವಾಡದಲ್ಲಿ ಲೊಕೇಷನ್ ಪತ್ತೆ!
ಲಕ್ನೋದಲ್ಲಿ ಭಾರೀ ಮಳೆಯಿಂದಾಗಿ ಐತಿಹಾಸಿಕ ಗೇಟ್ನ ಒಂದು ಭಾಗ ಕುಸಿದುಬಿದ್ದಿದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ವಾಹನ ಹಾಗೂ ಪಾದಾಚಾರಿಗಳ ಓಡಾಟವಿರುತ್ತದೆ. ಆದರೆ ಘಟನೆ ಸಮಯದಲ್ಲಿ ಕಡಿಮೆ ಜನರಿದ್ದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಜೊತೆಗೆ ಅಲ್ಲಲ್ಲಿ ವಾಹನಗಳ ಮೇಲೆ ಮರಬಿದ್ದಿರುವ ಘಟನೆ ವರದಿಯಾಗಿದೆ.
ಸದ್ಯ ಭಾರೀ ಮಳೆಯಾಗುತ್ತಿರುವುದರಿಂದ ನೇಪಾಳದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಣಾ ತಂಡಗಳು ಎಚ್ಚರದಿಂದಿರಲು ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ತಕ್ಷಣದ ನೆರವು ನೀಡುವಂತೆ ಸೂಚಿಸಿದ್ದಾರೆ.ಇದನ್ನೂ ಓದಿ: ನಕಲಿ ಔಷಧಿ ಜಾಲದ ಕಿಂಗ್ಪಿನ್ ಪ್ರಶಾಂತ್ ಅರೆಸ್ಟ್!

